ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಮಾವುತರು ಹಾಗೂ ಕಾವಾಡಿಗರ ಕುಟುಂಬಕ್ಕೆ ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ(ಲಿಡ್‌ಕರ್)ದಿಂದ ಸಿದ್ಧಪಡಿಸಿದ ಪಾದರಕ್ಷೆಗಳನ್ನು ವಿತರಿಸಿದರು.
ಮಾವುತರು ಹಾಗೂ ಕಾವಡಿಗರ ಕುಟುಂಬದ ಸದಸ್ಯರಿಗೆ ಲಿಡ್ಕರ್ ಪಾದರಕ್ಷೆ ವಿತರಿಸಿ ಕೆಲಕಾಲ ಎಲ್ಲರೊಟ್ಟಿಗೆ ಕಾಲ ಕಳೆದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಐಡಿಎಸ್ಒ ಸಂಘಟನೆಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆ
ಲಿಡ್ಕರ್ ರಾಯಭಾರಿ ಚಲನಚಿತ್ರ ನಟ ಡಾಲಿ ಧನಂಜಯ ಹಾಜರಿದ್ದು ಮಾವುತರು, ಕಾವಾಡಿಗರ ಕುಟುಂಬದ ಸದಸ್ಯರು ಸೆಲ್ಫಿ, ಫೋಟೋ ಕ್ಲಿಕ್ಕಿಸಿ ಸಂತಸಪಟ್ಟರು.
ವಿಧಾನ ಪರಿಷತ್ ಸದಸ್ಯ ಡಾ ಡಿ ತಿಮ್ಮಯ್ಯ, ಲಿಡ್‌ಕರ್ ವ್ಯವಸ್ಥಾಪಕ ನಿರ್ದೇಶಕಿ ವಸುಂದರ ಸೇರಿದಂತೆ ಹಲವು ಅಧಿಕಾರಿಗಳು ಜತೆಗಿದ್ದರು.