ಮೈಸೂರು ಬಸ್ ನಿಲ್ದಾಣದ ಎದುರು ಬಿಎನ್ ರಸ್ತೆಯಲ್ಲಿ 15 ಅಡಿಗಳ ರಸ್ತೆಗೆ ಅಡ್ಡ ಇಟ್ಟಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
“ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಬಿಎನ್ ರಸ್ತೆಯಲ್ಲಿ ಬಾಡಿಗೆ ಟ್ಯಾಕ್ಸಿ, ಕಾರುಗಳ ಎದುರು ಸುಮಾರು 15 ಅಡಿಗಳಷ್ಟು ರಸ್ತೆ ಸೇರಿಸಿ ಬ್ಯಾರಿಕೇಡ್‌ಗಳನ್ನು ಇಟ್ಟು, ಸುಮಾರು 250 ಅಡಿಗಳಷ್ಟು ಉದ್ದದ ರಸ್ತೆಯನ್ನು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಇದು ಯಾವ ಉಪಯೋಗಕ್ಕೂ ಬರುವುದಿಲ್ಲ. ಇದರಿಂದ ಯಾರಿಗೂ ಅನುಕೂಲವಾಗುತ್ತಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಆದೇಶ ಪಾಲಿಸದ ಐವರು ಬಿಲ್ಡರ್‌ಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಗ್ರಾಹಕ ಆಯೋಗ
“ಬಸ್ಸುಗಳಲ್ಲಿ ಬಂದಿಳಿದ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಕೆಲವು ಸಾರ್ವಜನಿಕರು ಕಾರುಗಳನ್ನು ನಿಲ್ಲಿಸಿಕೊಂಡು, ಬರುವ ಸಂಬಂಧಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಈಗ ಅವರುಗಳು ರಸ್ತೆಯ ಮಧ್ಯ ಭಾಗದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸುವುದರಿಂದ ಇಂತಹ ದೊಡ್ಡ ರಸ್ತೆ ಅರ್ಧ ಮುಚ್ಚಿದಂತೆ ಕಾಣುತ್ತಿದೆ. ಅಲ್ಲಿ ʼNo Parkingʼ ಫಲಕವನ್ನೂ ಹಾಕಲಾಗಿದೆ. ಬ್ಯಾರಿಕೇಡ್ ಹಾಕಿ 15 ಅಡಿ x 250 ಅಡಿ ರಸ್ತೆ ಮುಚ್ಚಿರುವುದು ಯಾರಿಗೂ ಅನುಕೂಲವಾಗುವುದಿಲ್ಲ. ಆದುದರಿಂದ ರಸ್ತೆ ಸೇರಿಸಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರೆವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.