ಮೈಸೂರು | ದಸರಾ ಪ್ರಾಧಿಕಾರ ರಚನೆಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹ

Date:

Advertisements

ಮೈಸೂರು ದಸರಾ ವಿಶ್ವವಿಖ್ಯಾತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪಾರಂಪರಿಕ ಹಾಗೂ ಐತಿಹಾಸಿಕ ದಸರಾ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ವೈಭವೋಪೇತವಾಗಿ ನಡೆದುಕೊಂಡು ಬಂದಿದೆ. ಈ ಬಾರಿ ದಸರಾಗೆ ದಾಖಲೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಹಲವು ನ್ಯೂನ್ಯತೆಗಳು, ವೈಫಲ್ಯಗಳಿಂದಾಗಿ ಜನರ ದಸರಾವಾಗಲು ಸಾಧ್ಯವಾಗಿಲ್ಲ,
ತರಾತುರಿಯ ಆಯೋಜನೆಯೇ ಇದಕ್ಕೆಲ್ಲಾ ಕಾರಣ. ಕೂಡಲೇ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ‌ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.

ಮೈಸೂರು ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 40-50 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಆರೂವರೆ ಸಾವಿರ ಪಾವತಿಸಿ ಗೋಲ್ಡ್ ಕಾರ್ಡ್ ಪಡೆದವರು, ಭಾರೀ ದರದ ಟಿಕೆಟ್ ಕೊಂಡುಕೊಂಡವರು, ಉಚಿತ ಪಾಸ್‌ಗಳು ದಕ್ಕಿದವರಷ್ಟೇ ಅರಮನೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಈ ವ್ಯವಸ್ಥೆಯಲ್ಲಿನ ಗೊಂದಲಗಳಿಗಂತೂ ಇನ್ನೂ ಪರಿಹಾರ ಸಿಕ್ಕಿಲ್ಲ. ಟಿಕೆಟ್, ಗೋಲ್ಡ್ ಕಾರ್ಡ್, ಪಾಸ್ ಇದ್ದವರಿಗೂ ಆಸನ ಸಿಗುವುದಿಲ್ಲ” ಎಂದರು.

“ಸ್ಥಳಾವಕಾಶಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪಾಸ್ ವಿತರಣೆಯಾಗಿರುತ್ತದೆ. ಇಂತಹ ಹತ್ತಾರು ದೂರುಗಳು ಪ್ರತಿವರ್ಷ ಕೇಳಿ ಬರುತ್ತವೆ. ಇನ್ನು ಸಾಮಾನ್ಯರಿಗೆ ಅರಮನೆ ಆವರಣದಲ್ಲಿ ದಸರಾ ನೋಡುವುದು ಕಷ್ಟ. ಮೆರವಣಿಗೆ ಸಾಗುವ ಮಾರ್ಗದಲ್ಲಾದರೂ ಕುಳಿತು ನೆಮ್ಮದಿಯಿಂದ ಜಂಬೂಸವಾರಿ ನೋಡಲಾಗದು. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷ ಚೇತನರು ನೂಕುನುಗ್ಗಲಲ್ಲಿ ಬೆಳಗ್ಗೆಯಿಂದ ಕಾದು ನಿಲ್ಲುತ್ತಾರೆ. ಕುಡಿಯಲು ನೀರಿಲ್ಲ, ಶೌಚಾಲಯಕ್ಕೂ ಹೋಗಲಾಗದೆ ಜಂಬೂ ಸವಾರಿ ಸಾಗುವವರೆಗೂ ನಿಂತಲ್ಲೇ ನಿಂತಿರುತ್ತಾರೆ” ಎಂದರು.

Advertisements

“ದಸರಾ ಅಂಬಾರಿ ಹತ್ತಿರ ಬರುತ್ತಿದ್ದಂತೆ ನೂಕುನುಗ್ಗಲು ಹೆಚ್ಚಾಗುತ್ತದೆ. ಒಬ್ಬರಮೇಲೊಬ್ಬರು ಬೀಳುತ್ತಾರೆ. ಇದರಿಂದ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಜನದಟ್ಟಣೆಯಲ್ಲಿ ಸಿಲುಕಿ ಮಕ್ಕಳು ನರಳುತ್ತಾರೆ. ಕಳ್ಳತನ, ಜಗಳ, ಹೊಡೆದಾಟಗಳಾಗುತ್ತವೆ. ಆ ವೇಳೆ ರಸ್ತೆ ಭಾಗದಲ್ಲಿರುವ ಪೊಲೀಸರೂ ಅಸಹಾಯಕರಾಗಿರುತ್ತಾರೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಮುಗಿಯದ ಇಂದ್ರಾಳಿ ರೈಲ್ವೆ ಸೇತುವೆ ರಸ್ತೆ ಸಮಸ್ಯೆ; ಪ್ರತಿಭಟನೆಗೆ ಮುಂದಾದ ನಾಗರಿಕರು

“ನಮ್ಮ ನಾಡಹಬ್ಬ, ಪಾರಂಪರಿಕ ದಸರಾ ಮಹಾ ಉತ್ಸವದ ವೈಭವವನ್ನು ಕಾಪಾಡಿಕೊಳ್ಳುವುದರ ಜತೆಗೆ ಜನರಿಗೆ ಅಹಿತವಾಗುವ ವೈಫಲ್ಯಗಳನ್ನು ಸರಿಪಡಿಸಿಕೊಂಡು ಒಂದಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಜನರಾ ದಸರಾವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ, ಈಗಿನಿಂದಲೇ ಪರಿಹಾರ ಕ್ರಮಗಳಿಗೆ ಮುಂದಾಗಬೇಕು” ಎಂದರು.

“ಜಿಲ್ಲಾಧಿಕಾರಿ, ಜಿ ಪಂ, ಮುಡಾ, ಪಾಲಿಕೆ, ಜಿಲ್ಲಾಸಚಿವರು, ಪೊಲೀಸ್ ಸೇರಿದಂತೆ ದಸರಾದಲ್ಲಿ ಜವಾಬ್ದಾರಿ ನಿರ್ವಹಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಮಿಟಿ ರಚಿಸಿಕೊಂಡು ಈ ದಿನದಿಂದಲೇ ಸಿದ್ಧತೆ ನಡೆಸಬೇಕು. ದಸರಾವನ್ನು ಇನ್ನೂ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಎಲ್ಲರೂ ಮೆಚ್ಚುವ ರೀತಿಯಲ್ಲಿ ಆಚರಿಸುವಂತಾಗಬೇಕು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ದಸರಾ ಪ್ರಾಧಿಕಾರ ರಚಿಸಬೇಕು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X