ಮೈಸೂರು ದಸರಾದ ಕೇಂದ್ರಬಿಂದು ಜಂಬೂಸವಾರಿಗೂ ಮುನ್ನ ಅಂಬಾರಿ ಹೊರುವ ಆನೆ ಅಭಿಮನ್ಯು ಸೇರಿದಂತೆ ಗಜ ಪಡೆ ಇಮಾಮ್ ಶಾ ವಲೀ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿವೆ. ಆ ಮೂಲಕ ದಸರಾದಲ್ಲಿ ಸೌಹಾರ್ದತೆಯನ್ನು ಸಾರಿವೆ.
ಪ್ರತಿ ವರ್ಷವೂ ಜಂಬೂಸವಾರಿಗೂ ಮುನ್ನ ಗಜಪಡೆ ದರ್ಗಾಕ್ಕೆ ಭೇಟಿ ನಿಡಿ, ಆಶೀರ್ವಾದ ಪಡೆಯುವುದು ವಾಡಿಕೆ ಎಂದು ಹೇಳಲಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಆನೆ ಅನಾರೋಗ್ಯಕ್ಕೀಡಾಗಿತ್ತು. ಆಗ ಅದನ್ನು ಇಮಾಮ್ ಶಾ ವಲೀ ದರ್ಗಾಕ್ಕೆ ಕೊಂಡೊಯ್ಯಲ್ಲಾಗಿತ್ತು. ಆ ಬಳಿಕ ಆನೆ ಗುಣಮುಖವಾಗಿತ್ತು. ಹೀಗಾಗಿ, ಅಂದಿನಿಂದಲೂ ದಸರಾ ಆನೆಗಳು ದರ್ಗಾಕ್ಕೆ ಬಂದು ಆಶೀರ್ವಾದ ಪಡೆಯುತ್ತವೆ ಎಂದು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬ್ ಉಲ್ಲಾ ಷಾ ಖಾದ್ರಿ ತಿಳಿಸಿದ್ದಾರೆ.