ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನ ಹೊಸಹಳ್ಳಿ ವನ್ಯಜೀವಿ ವಲಯದ ಮಂಟಳ್ಳಿ ಕಾಡಿನಲ್ಲಿರುವ ಬಸವೇಶ್ವರ ದೇವಸ್ಥಾನ ಬಯಲಿನಲ್ಲಿ ಆದಿವಾಸಿ ಕಣ್ಮಣಿ ಬಿರ್ಸಾ ಮುಂಡಾ ಅವರ 150 ನೆಯ ಜಯಂತಿ ಕಾರ್ಯಕ್ರಮವನ್ನು ಆದಿವಾಸಿಗಳು ನಡೆಸಿದರು.
ಸ್ವಾತಂತ್ರ ಹೋರಾಟಗಾರ, ಬ್ರಿಟೀಷರ ವಸಾಹತು, ಅರಣ್ಯ ಕಾನೂನು ವಿರೋಧಿಸಿ, ಅರಣ್ಯಗಳು ಆದಿವಾಸಿ ಜನ ಸಮುದಾಯಗಳ ಆಶ್ರಯ ತಾಣಗಳೇ ಹೊರತು ಸರ್ಕಾರಿ ಸ್ವತ್ತಲ್ಲ ಎಂದು 1890 ರಲ್ಲಿ ಹೋರಾಟ ಪ್ರಾರಂಭಿಸಿ ಅರಣ್ಯ ಹಕ್ಕು,ರಕ್ಷಣೆ ಸೇರಿದಂತೆ ಹೋರಾಟ ನಡೆಸಿದ ಬಿರ್ಸಾ ಮುಂಡಾ ಅವರನ್ನು ಆದಿವಾಸಿಗಳು ಸ್ಮರಿಸಿದರು.
ವೀರನ ಹೊಸಹಳ್ಳಿ ಹಾಡಿ ಮುಖಂಡರಾದ ಪುಟ್ಟಯ್ಯ ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮಾತನಾಡಿ, ಬಿರ್ಸಾ ಮುಂಡ ತನ್ನ ಹದಿಹರೆಯದಲ್ಲಿಯೇ ಜನರ ಪರವಾಗಿ ನಿಂತು ಬ್ರಿಟಿಷ್ ವಸಾಹತು, ಸರ್ಕಾರದ ಅರಣ್ಯಕಾನೂನು ವಿರೋಧಿಸಿ ಏಳು ವರ್ಷ ಅರಣ್ಯದಲ್ಲೇ ಆದಿವಾಸಿ ಸೈನ್ಯ ಕಟ್ಟಿ ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದ್ದರು ಎಂದರು.
ಆದಿವಾಸಿ ಪಾರ್ಲಿಮೆಂಟ್ ಸಮಿತಿ ಪ್ರಮುಖ ಹೆಮ್ಮಿಗೆ ಹರ್ಷ ಮಾತನಾಡಿ, ತಿರಸ್ಕರಿಸಿರುವ ಅರಣ್ಯ ಹಕ್ಕು ಅರ್ಜಿಗಳನ್ನು ಪುನರ್ ಪರಿಗಣಿಸಿ ವಯಕ್ತಿಕ ಹಾಗು ಸಾಮೂಹಿಕ ಅರಣ್ಯ ಹಕ್ಕನ್ನು ಉಪ ವಿಭಾಗ ಹಾಗು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳು ಮಾನ್ಯ ಮಾಡಬೇಕೆಂದು ಆಗ್ರಹಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯ ವಿಠಲ್ ಮಾತನಾಡಿ, ಮುಖ್ಯಮಂತ್ರಿಗಳು 12ರಂದು ಕೆರೆಹಾಡಿಗೆ ಭೇಟಿ ಕೊಟ್ಟು ಆದಿವಾಸಿಗಳ ಅರಣ್ಯ ಹಕ್ಕುಗಳಿಗೆ ಅಡ್ಡಿ ಪಡಿಸದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿರುವುದರಿಂದ, ಜಿಲ್ಲೆಯ 12 ಸಾವಿರ ಆದಿವಾಸಿ ಕುಟುಂಬಗಳಿಗೂ ಅರಣ್ಯ ಹಕ್ಕು ಮಾನ್ಯ ಮಾಡಿ, ಗೌರವದ ಬದುಕಿಗೆ ದಾರಿ ಮಾಡಿಕೊಡಬೇಕೆಂದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದ ಐವರು ಆರೋಪಿಗಳ ಬಂಧನ
ಡೀಡ್ ಶ್ರೀಕಾಂತ್ ಮಾತನಾಡಿ, ಬಿರ್ಸಾ ಮುಂಡ ಅಂದು ಅರಣ್ಯ ಹಕ್ಕಿಗಾಗಿ ಪ್ರಾರಂಭಿಸಿದ ಹೋರಾಟ ಇನ್ನೂ ನಡೆಯುತ್ತಿದೆ. ಅರಣ್ಯ ರಕ್ಷಣೆ ಇಂದು ಜಂಟಿಯಾಗಿ ಆದಿವಾಸಿಗಳು ಮತ್ತು ಅರಣ್ಯ ಇಲಾಖೆ ಜತೆಗೂಡಿ ರಕ್ಷಿಸಬೇಕು, ಅರಣ್ಯ ಕಾಯುವವರಿಗೆ ಸರ್ಕಾರ ಸಂಬಳ ಕೊಟ್ಟರೆ, ಅರಣ್ಯವು ಆದಿ ವಾಸಿಗಳಿಗೆ ಆಹಾರ, ಔಷದ ಹಾಗು ಬದುಕು ಕೊಡುತ್ತದೆ. ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದರೆ ಇದು ಸಾಧ್ಯ. ಅರಣ್ಯ ಇಲಾಖೆ ಈ ಮಹತ್ವದ ನಿರ್ಧಾರಕ್ಕೆ ಗಮನ ಕೊಡಬೇಕು ಎಂದರು.
ಅರಣ್ಯ ಹಕ್ಕು ಕಾಯ್ದೆ ಸರಿಯಾಗಿ ಅನುಷ್ಠಾನ ಗೊಳಿಸಲು ಜಿಲ್ಲಾ ಹಾಗು ಉಪ ವಿಭಾಗದ ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳಿಗೆ, ವಲಯ ಅರಣ್ಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

