ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಜಂಬೂ ಸವಾರಿಯ ಪುಷ್ಪಾರ್ಚನೆಯ ರಿಹರ್ಸಲ್(ಪೂರ್ವಭ್ಯಾಸ) ಮಾಡುವಾಗ ಅವಘಡ ನಡೆದಿದ್ದು, ಸಿಡಿಮದ್ದು ತಾಲೀಮು ನಡೆಸುವಾಗ ಸಿಡಿದ ಪರಿಣಾಮ ಓರ್ವ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ.
ಭಾನುವಾರ ಸಂಜೆ ಅರಮನೆಯಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್ ಮಾಡುವಾಗ ತಾಲೀಮು ನಡೆಸಲಾಗಿತ್ತು. ಈ ವೇಳೆ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲುತೋಪು ಸಿಡಿಸುವಾಗ ಸಿಡಿದ ಮದ್ದಿನಿಂದ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ರಾಜ್ಯದಲ್ಲಿ 500 ಹೊಸ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅನಿವಾಸಿ ಭಾರತೀಯರ ನೆರವು
ನಾಡಿನೆಲ್ಲೆಡೆ ದಸರಾ ಹಬ್ಬದ ಸಡಗರ ಮನೆ ಮಾಡಿದೆ. ಆಯುಧ ಪೂಜೆ ಸಂಭ್ರಮ ಆವರಿಸಿದ್ದು, ಮೈಸೂರು ಅರಮನೆಯಲ್ಲಿಂದು ಆಯುಧ ಪೂಜೆ ನಡೆದಿದೆ. ಬೆಳಗ್ಗೆ 5-30ರಿಂದಲೇ ಚಂಡಿಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಈಗಾಗಲೇ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸುಗಳ ಆಗಮನವಾಗಿವೆ.