ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ನಗರದ ಕಲಾ ಮಂದಿರದಲ್ಲಿ ನವೆಂಬರ್ 1ರಿಂದ 3ರವರೆಗೆ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಮೈಸೂರಿನ ಜನತೆ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಬೇಕೆಂದು ಉರಗ ತಜ್ಞ ಸ್ನೇಕ್ ಶ್ಯಾಮ್ ಮನವಿ ಮಾಡಿದರು.
ಮೈಸೂರು ನಗರದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ, ಮಾತನಾಡಿದ ಅವರು, “ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಛಾಯಾಚಿತ್ರ ಪ್ರದರ್ಶನ ಜಿಲ್ಲಾದ್ಯಂತ ಛಾಯಾಚಿತ್ರ ಪ್ರೇಮಿಗಳು ಆಗಮಿಸಿ ಪ್ರೋತ್ಸಾಹಿಸಬೇಕು” ಎಂದರು.
“ಮೈಸೂರಿನ ವನ್ಯಜೀವಿ ಛಾಯಾಗ್ರಹಕರುಗಳಾದ ಶಿವಕುಮಾರ್ ಬಿ, ಸಿದ್ದಲಿಂಗ ಪ್ರಸಾದ್ ಎ ಜಿ, ಪಾಲಳ್ಳಿ ಸುನಿಲ್, ಭಾರತ ದೇಶದ ಹಲವು ರಾಜ್ಯಗಳಿಗೆ ಭೇಟಿ ನೀಡಿ ವಿವಿಧ ರೀತಿಯ ಪಕ್ಷಿಗಳು, ಮತ್ತು ಪ್ರಾಣಿಗಳು ಹಾಗೂ ಜನಸಾಮಾನ್ಯರ ವಿವಿಧ ಬಗೆಯ ಫೋಟೋಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಅವುಗಳನ್ನು ಮೈಸೂರಿನ ಜನಕ್ಕೆ ಪರಿಚಯಿಸಲು ಮುಂದಾಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ರಾಜ್ಯಾದ್ಯಂತ 56,993 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ; ಬೆಳೆಪರಿಹಾರದ ಭರವಸೆ
ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಮತ್ತು ಪತ್ರಿಕಾ ಛಾಯಾಗ್ರಾಹಕ ಎಸ್ ಆರ್ ಮಧುಸೂಧನ್, ಎಂ ಟಿ ಯೋಗೇಶ್ ಕುಮಾರ್ ಇದ್ದರು.