ಮೈಸೂರು ನಗರದ ಯಾದವಗಿರಿ ರಾಮಕೃಷ್ಣ ವಿದ್ಯಾಶಾಲೆ ಆವರಣದಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ 4 ರಿಂದ 5 ವರ್ಷದೊಳಗಿನ ಗಂಡು ಚಿರತೆ ಸಿಕ್ಕಿಬಿದ್ದಿದೆ.
ಡಿಸೆಂಬರ್ 10ರಂದು ರಾಮಕೃಷ್ಣ ವಿದ್ಯಾಶಾಲಾ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿರುವುದಾಗಿ ಮಾಹಿತಿ ಬಂದ ಮೇರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ಡಿಸೆಂಬರ್ 11 ರಂದು ಒಂದು ಚಿರತೆ ಬೋನ್, ನಂತರ ಡಿ.14 ರಂದು ಮತ್ತೊಂದು ಬೋನನ್ನು ಮತ್ತೊಂದು ಸ್ಥಳದಲ್ಲಿ ಇರಿಸಿ, ಜೊತೆಗೆ ಟ್ರಾಪ್ ಕ್ಯಾಮರಾ ಅಳಡಿಸಿ ಎಚ್ಚರಿಕೆ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವೀರಶೈವ ಮಹಾಸಭಾದ ಶಾಮನೂರ ಶಿವಶಂಕರಪ್ಪನವರ ನಡೆ ಖಂಡನೀಯ; ಆರ್ ಆರ್ ಕುಡವಕ್ಕಲಿಗೇರ
ನಾಲ್ಕರಿಂದ ಐದು ವರ್ಷದ ಚಿರತೆ ಇದೀಗ ಬೋನಿಗೆ ಸಿಕ್ಕಿಬಿದ್ದಿದ್ದು, ಅರಣ್ಯ ಇಲಾಖೆಯ ಆರ್‌ಎಫ್ಒ ಸುರೇಂದ್ರ ಮತ್ತು ಸಿಬ್ಬಂದಿ ಚಿರತೆಯನ್ನು ಅರಣ್ಯಕ್ಕೆ ಬಿಡಲು ರವಾನಿಸಿದ್ದಾರೆ.