ಕೆಂಪೇಗೌಡರು ಒಕ್ಕಲಿಗ ಸಮುದಾಯದ ಪ್ರಭುಗಳಾಗಿದ್ದರೂ ಕೂಡಾ ಒಂದೇ ಸಮುದಾಯಕ್ಕೆ ಸೀಮೀತವಾದವರಲ್ಲ ಎಂಬುದಕ್ಕೆ ಅವರು ಕಟ್ಟಿದ ಬೆಂಗಳೂರು ನಗರವೇ ಸಾಕ್ಷಿ. ಪ್ರತಿಯೊಂದು ಸಮುದಾಯದ ಜನರಿಗೂ ಒಂದೊಂದು ಕೇರಿಯನ್ನು ಸಮುದಾಯದ ಹೆಸರಿನಲ್ಲೇ ಕಟ್ಟಿಕೊಟಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಹೇಳಿದರು.
ಮೈಸೂರಿನ ಜೀವಾಧಾರ ರಕ್ತನಿಧಿ ಕೇಂದ್ರ ಹಾಗೂ ಕೆಎಂಪಿಕೆ ಟ್ರಸ್ಟ್ ವತಿಯಿಂದ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯ ಮೆರವಣಿಗೆಯಲ್ಲಿ 2,000 ಹೋಳಿಗೆಯನ್ನು ವಿತರಿಸಿ ಮಾತನಾಡಿದರು.
“ಕೆಂಪೇಗೌಡ ಅವರು ನಡೆಸಿದ ರಾಜಾಡಳಿತವೂ ಇತರ ರಾಜರಿಗೆ ಮಾದರಿಯಾಗಿದ್ದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಇಂತಹ ಮಹಾನ್ ನಾಯಕರು ನೆಲೆಸಿದ ನಾಡಿನಲ್ಲಿ ಬದುಕುತ್ತಿರುವ ನಾವುಗಳೇ ಪುಣ್ಯವಂತರು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಅಹೋರಾತ್ರಿ ಧರಣಿಗೆ ಮಣಿದ ಜಿಲ್ಲಾಡಳಿತ; ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಗೆ ಸಂದ ಜಯ
ಶಾಸಕ ಜಿ ಟಿ ದೇವೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮರಿಗೌಡ, ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಹೇಮಂತ್ ಕುಮಾರ್ ಗೌಡ, ಜೀವಾಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್ ಗೌಡ, ಆನಂದ್, ಸೂರಜ್, ಸದಾಶಿವ್, ಗಿರೀಶ್ ಗೌಡ , ಒಕ್ಕಲಿಗ ಸಂಘದ ನಿರ್ದೇಶಕರುಗಳು, ಮುಖಂಡರು ಇದ್ದರು.
