ಮೈಸೂರು | ಓರ್ವನ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು : ಸುರೇಶ್

Date:

Advertisements

ಮೈಸೂರಿನ ದಾರುಲ್ ಫಲಾ ಹೆಲ್ತ್ ಸೆಂಟರ್ ಶಾಂತಿ ನಗರದಲ್ಲಿ ಹೆಚ್.ಆರ್.ಎಸ್. ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಲಯನ್ಸ್ ಬ್ಲಡ್ ಸೆಂಟರ್ ಜೀವದಾರ ಸಂಸ್ಥೆಯ ಸುರೇಶ್ ” ಓರ್ವನ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು. ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ರಕ್ತದಾನವು ಆರೊಗ್ಯವನ್ನು ಸಮತೊಲನಗೊಳಿಸುತ್ತದೆ.
ಹೆಚ್. ಅರ್. ಎಸ್ ಸತತ ಮೂರು ವರ್ಷಗಳಿಂದ ನಮ್ಮೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದು, ನಮ್ಮಿಂದ ಅರ್ಹರಿಗೆ ತುರ್ತು ಸಂದರ್ಭದಲ್ಲಿ ರಕ್ತವನ್ನು ಒದಗಿಸುತ್ತೇವೆ. ಹೆಚ್.ಅರ್.ಎಸ್. ನ ಸೇವೆಯೊಂದಿಗೆ ನಮ್ಮ ಸೇವೆಯೂ ಇರಲಿ ” ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಝೋನಲ್ ಲೀಡರ್ ಅಸಾದುಲ್ಲಾ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ ” ದಾನ ದಾನಕ್ಕಿಂತ ರಕ್ತದಾನ ಶ್ರೇಷ್ಠವಾದಾದ್ದು. ತುರ್ತು ಪರಿಸ್ಥಿತಿಗಳಲ್ಲಿ ಜೀವ ಉಳಿಸುವ ಕೆಲಸ ರಕ್ತದಾನದಿಂದ ಸಾಧ್ಯವಿದೆ. ಅದರಲ್ಲೂ, ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಆರು ತಿಂಗಳಿಗೊಮ್ಮೆಯಾದರು ರಕ್ತ ಕೊಡುವುದು ಸೂಕ್ತ. ರಕ್ತ ಕೊಟ್ಟರೆ ಆರೋಗ್ಯ ಹದಗೆಡುತ್ತದೆ ಎನ್ನುವ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ ” ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ನ ಮೈಸೂರು ಸ್ಥಾನೀಯ ಅಧ್ಯಕ್ಷರಾದ ಮೊಹಮ್ಮದ್ ಅಸ್ಲಮ್ ಮಾತನಾಡಿ ” ರಕ್ತದಾನದ ಮಹತ್ವದ ಬಗ್ಗೆ ಅರಿವಿರಬೇಕು. ರಕ್ತ ನೀಡುವುದರಿಂದ ದೇಹದಲ್ಲಿ ಮರು ಉತ್ಪತಿ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅಲ್ಲದೆ, ಬೇರೆಯವರ ಪ್ರಾಣ ಉಳಿಸುವ ಮಹತ್ಕಾರ್ಯ ಮಾಡಿದ ಸೇವಾ ಮನೋಭಾವನೆ ಸಾರ್ಥಕತೆ ಮೂಡಿಸುತ್ತದೆ. ಇಂತಹ ಕೆಲಸವನ್ನು ಹೆಚ್. ಆರ್, ಎಸ್ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ ” ಎಂದು ಹೇಳಿದರು.

Advertisements

ಹೆಚ್.ಅರ್.ಎಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮರಕಡರವರು ಮಾತನಾಡಿ ” ಹೆಚ್. ಆರ್. ಎಸ್ ಸಂಸ್ಥೆ
2004 ರಲ್ಲಿ ಆರಂಭಗೊಂಡಿತು. ಇದೀಗ ಇಲ್ಲಿಗೆ 21 ವರ್ಷ ಕಳೆಯುತ್ತಿದೆ. ನಮ್ಮ ಸಂಸ್ಥೆಯು ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭ, ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಜನರಿಗೆ ನೆರವನ್ನು ನೀಡುವ ಕೆಲಸವನ್ನು ಪ್ರಜ್ಞಾವಂತಿಕೆಯಿಂದ ಮಾಡಿಕೊಂಡು ಬಂದಿದೆ.
ನಾವೆಲ್ಲರೂ, ಒಂದೇ ತಂದೆ ತಾಯಿಯ ಮಕ್ಕಳು ಒಬ್ಬ ದೇವನ ಸೃಷ್ಠಿಗಳು ನಮ್ಮೆಲ್ಲರ ರಕ್ತದ ಬಣ್ಣ ಕೆಂಪು. ಹೀಗಿರುವಾಗ, ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರಿಗೆ ಸಹಾಯಕರಾಗಬೇಕು. ದೇಶದ ಪ್ರಗತಿಗೆ ನಮ್ಮಗಳ ಸಹಕಾರದ ಅಗತ್ಯವಿದೆ ” ಎಂದು ಹೇಳಿದರು.

ಶಿಬಿರದಲ್ಲಿ ಹಲವರು ಭಾಗಿಯಾಗಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು. ಜೆ.ಐ.ಹೆಚ್, ಎಸ್.ಐ.ಓ, ಜಿ.ಐ.ಓ, ಸಾಲಿಡಾರಿಟಿ ಮುಂತಾದ ಸಂಘಟನೆಗಳ ಸ್ವಯಂ ಸೇವಕರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಭ್ರಮದ ಜನಸ್ವಾತಂತ್ರ್ಯೋತ್ಸವ; ಸಂವಿಧಾನ ಸಂರಕ್ಷಣಾ ಪಡೆಗೆ ಚಾಲನೆ

ಹೆಚ್.ಆರ್.ಎಸ್. ಗ್ರೂಪ್ ಲೀಡರ್ ರಹಿಮಾನ್ ಶರೀಫ್, ಜೆ.ಐ.ಹೆಚ್ ಮಾಜಿ ಅಧ್ಯಕ್ಷರಾದ ಖಲೀಲುಲ್ಲಾ ಉರ್ ರೆಹಮಾನ್, ಅಬ್ದುಲ್ ವಾಹಿದ್ ಅಲಿ, ಸಾಲಿಡಾರಿಟಿಯ ಅಬ್ದುಲ್ ರಹೀಮ್ ಅಫ್ತಾಬ್, ಶಾಹುಲ್ ಹಮೀದ್, ಮಹಿಳಾ ಗ್ರೂಪ್ ಲೀಡರ್ ತಹ್ಸಿನಾ ಬೇಗಮ್, ರುಮಾನ ಅಕ್ಸರ್ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X