ಮೈಸೂರು | ಅಗಲಿದ ಪತ್ರಕರ್ತರಿಗೆ ಸ್ನೇಹ ಕೂಟದಿಂದ ಶ್ರದ್ಧಾಂಜಲಿ

Date:

Advertisements

ಮೈಸೂರು ನಗರದ ಇಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಅಗಲಿದ ಪತ್ರಕರ್ತ ಸ್ನೇಹಿತರಿಗೆ ಸ್ನೇಹ ಕೂಟದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಪತ್ರಕರ್ತರು, ಮೃತರ ಕುಟುಂಬದವರು ಅಗಲಿದವರಿಗೆ ಸಂತಾಪ ಸೂಚಿಸಿದರು.

ಮೈಸೂರಿನ ವಿವಿಧ ವಾಹಿನಿಗಳಲ್ಲಿ ಕ್ಯಾಮೆರಾಮನ್‌ಳಾಗಿ ಕಾರ್ಯ ನಿರ್ವವಹಿಸಿಸುತ್ತಿದ್ದು, ಇತ್ತೀಚೆಗೆ ಅಗಲಿದ ಹರ್ಷ, ಸಂತೋಷ್, ಮಧುಸೂದನ್, ಹೇಮಂತ್‌ ಕುಮಾರ್ ಅವರಿಗೆ ಮೈಸೂರು ಪತ್ರಕರ್ತರ ಸ್ನೇಹ ಕೂಟದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೃತ ಮಧುಸೂದನ್ ಅವರ ಸಹೋದರ ಡಾ. ಚಂದ್ರಶೇಖರ್ ಮಾತನಾಡಿ ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆದರೆ, ಆರೋಗ್ಯದ ಕಡೆಗೆ ಗಮನ ನೀಡದೆ ಅನೇಕ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ನನ್ನ ತಮ್ಮನು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡದೆ ಇಂತಹ ಸ್ಥಿತಿ ಉಂಟಾಗಿದೆ ಎಂದು ದುಃತತಪ್ತರಾದರು. ಪತ್ರಕರ್ತರಿಗೆ ಆರೋಗ್ಯ ವಿಮೆ, ಆರ್ಥಿಕ ಬೆಂಬಲದಂತಹ ಕಾರ್ಯ ಮಾಡಿಕೊಳ್ಳುವುದು ಉತ್ತಮ. ಒತ್ತಡದ ಜೀವನದಿಂದ ಹೊರ ಬರಲು ದೈಹಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಆಹಾರದಲ್ಲಿಯೇ ಔಷಧ ಇರುವುದರಿಂದ ಪ್ರತಿಯೊಂದಕ್ಕೂ ಮಾತ್ರೆಗಳ ಮೊರೆ ಹೋಗದೆ, ಆಹಾರ, ವ್ಯಾಯಾಮದಲ್ಲಿ ಆರೋಗ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisements

ಹಿರಿಯ ಪತ್ರಕರ್ತ ಎಂ. ಆರ್. ಸತ್ಯನಾರಾಯಣ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ತಮ್ಮನ್ನೇ ನಂಬಿದ ಕುಟುಂಬ ಇದ್ದು, ಅವರ ಮುಂದಿನ ಭವಿಷ್ಯದ ಕುರಿತು ಚಿಂತನೆ ಮಾಡಬೇಕು ಎಂದರು.

ಮೃತ ಸಂತೋಷ್ ಅವರ ಪತ್ನಿ ಸುಜಾತಾ ಮಾತನಾಡಿ ಆರೋಗ್ಯ ಕೆಟ್ಟಾಗಲೇ ಜೀವನದ ನಿಜ ಅರ್ಥ ತಿಳಿಯುವುದು. ಹಾಗಾಗಿ, ಈಗಲೇ ಎಲ್ಲರೂ ಎಚ್ಚೆತ್ತು ಆರೋಗ್ಯ ಕಾಪಾಡಿಕೊಳ್ಳಬೇಕು. ನನ್ನ ಚಿಕ್ಕ ಮಕ್ಕಳನ್ನು ಬೆಳೆಸಿ ವಿದ್ಯಾಭ್ಯಾಸ, ಭವಿಷ್ಯ ರೂಪಿಸುವ ಚಿಂತೆ ಕಾಡುತ್ತಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸತೀಶ್‌ ಕುಮಾರ್ ಮಾತನಾಡಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ ಅಗಿದೆ. ಕೈಲಾದಷ್ಟು ಉಳಿತಾಯ, ಆರೋಗ್ಯ ವಿಮೆ ಮಾಡಿಸಿಕೊಂಡರೆ ಅಪತ್ಕಾಲದಲ್ಲಿ ಕೈ ಹಿಡಿಯುತ್ತವೆ. ಈ ಕುರಿತು ಚಿಂತನೆ ಅಗತ್ಯ ಎಂದರು.

ಹಿರಿಯ ಪತ್ರಕರ್ತ ಕೆ. ಪಿ. ನಾಗರಾಜ್ ಮಾತನಾಡಿ ಮೃತಪಟ್ಟ ನಾಲ್ವರು ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಅವರ ಸಹಕಾರರಿಂದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳಲಾಗುವುದು. ಆರ್ಥಿಕ, ಆರೋಗ್ಯ, ವೃತ್ತಿ ಹಾಗೂ ಕೌಟುಂಬಿಕ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್. ಟಿ. ರವಿಕುಮಾರ್ ಮಾತನಾಡಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗಾಗಿ ಜೂ.25 ರಂದು ಜಯದೇವ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ವೃತ್ತಿ ನಿರತ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಿರಬೇಕು. ಆದರೆ, ಕೆಲಸದ ಒತ್ತಡದಿಂದಾಗಿ ಆಹಾರ, ಆರೋಗ್ಯದ ಕಡೆಗೆ ಗಮನ ನೀಡುವುದು ಕಡಿಮೆ ಅಗಿ ಕಿರಿಯ ವಯಸ್ಸಿನಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | 1886 ರಲ್ಲಿ ಬ್ರಿಟಿಷರೇ ನಿರ್ಮಿಸಿದ ಕನ್ನಡ ಶಾಲೆಯಲ್ಲೀಗ 600 ಕ್ಕೂ ಅಧಿಕ ಮಕ್ಕಳ ಕಲಿಕೆ

ಹಿರಿಯ ಪತ್ರಕರ್ತರಾದ ರಾಮ್, ಸಿ. ಎಂ. ಕಿರಣ್‌ ಕುಮಾರ್, ಜಯಂತ್, ರಂಗಸ್ವಾಮಿ ಮಾದಾಪುರ, ಎಸ್.ಆರ್.ಮಧುಸೂದನ್, ವಾಟಾಳ್ ಆನಂದ್, ಸುಧೀಂದ್ರ, ಮಹದೇವ ಸ್ವಾಮಿ ಇತರರು ಸಂತಾಪ ಸೂಚಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X