ಮಕ್ಕಳಲ್ಲಿ ಮಾದಕ ವಸ್ತುಗಳ ಅರಿವು ಮೂಡಬೇಕು. ಸ್ವಾಸ್ಥ್ಯ ಸಮಾಜಕ್ಕೆ ಕೊಡುಗೆಯಾಗುವ ನಿಟ್ಟಿನಲ್ಲಿ ಮಕ್ಕಳು ಬೆಳೆಯಬೇಕು ಎಂದು ಅಂಕಣಕಾರ ಡಾ ವಿ ರಂಗನಾಥ್ ಹೇಳಿದರು.
ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಪುಷ್ಪಾಂಜಲಿ ಸೇವಾ ಸಂಸ್ಥೆ ಮತ್ತು ಅಗರ್ವಾಲ್ ಸಮಾಜದ ಸಂಯುಕ್ತ ಆಶ್ರಯದಲ್ಲಿ ‘ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ’ ವಿರೋಧದ ಅಂತರರಾಷ್ಟ್ರೀಯ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಬೋಧಿಸಿ ಮಾತನಾಡಿದರು.
“ಮಕ್ಕಳಲ್ಲಿ ಮಾದಕ ವಸ್ತುಗಳ ಬಗೆಗಿನ ಕುತೂಹಲ ಮೂಡದಂತೆ ಹಾಗೂ ಮಾದಕ ವಸ್ತುಗಳ ವ್ಯಸನಿಗಳಾಗದಂತೆ ನೋಡಿಕೊಳ್ಳಬೇಕು. ಮಕ್ಕಳು ಆರೋಗ್ಯದ ಕಡೆ ಗಮನ ಹರಿಸಿ ಶಿಕ್ಷಣದ ಕಡೆಗೆ ಗಮನ ಕೊಡಬೇಕು. ಯಾವುದೇ ಸಾಮಾಜಿಕ ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಅಂತಹ ಘಟನೆಗಳು ಕಂಡುಬಂದಲ್ಲಿ ಖಂಡಿಸಿ, ಸಂಬಂಧಪಟ್ಟವರ ಗಮನಕ್ಕೆ ತರುವಂತಹ ಕೆಲಸವಾಗಬೇಕು” ಎಂದರು.
ಕಾರ್ಯಕ್ರಮಕ್ಕೂ ಮುನ್ನ ಎನ್‌ಸಿಸಿ ಕೆಡೆಟ್‌ಗಳು, ಮಹಾವೀರ ವಿದ್ಯಾಸಂಸ್ಥೆ, ಗೋಪಾಲಸ್ವಾಮಿ ಕಾಲೇಜು, ವಾಗ್ದೇವಿ ವಿದ್ಯಾಲಯ, ಗೀತಾ ಶಿಶು ಶಿಕ್ಷಣ ಸಂಸ್ಥೆ ಸೇರಿದಂತೆ ಇತರ ಕಾಲೇಜಿನ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ಭಾಗಿಯಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೃಹತ್ ಗುಂಡಿಗಳಿಂದ ರಾರಾಜಿಸುತ್ತಿರುವ ರಸ್ತೆ; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಹೈರಾಣು
ಕಾರ್ಯಕ್ರಮದಲ್ಲಿ ಅಗರ್ವಾಲ್ ಸಂಸ್ಥೆಯ ಮುಖ್ಯಸ್ಥ ಡಾ ಎಸ್ ಕೆ ಮಿತ್ತಲ್ , ಚೇತನ್ ಗಿರಿ ಮಹಾರಾಜ್ ಸ್ವಾಮೀಜಿ, ಎನ್ ಸಿ ಸಿ ಗ್ರೂಪ್ ಕಮಾಂಡರ್ ಕರ್ನಲ್ ರೋಹಿತ್ ಠಾಕೂರ್, ಉಚ್ಛ ಶಿಕ್ಷಣಾಧಿಕಾರಿ ಅರುಣ್ ಕುಮಾರ್, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ದತ್ತಾತ್ರೇಯ ಸಿಂಧೆ, ನವೀನ ಗುಪ್ತ, ಹರಿ ಸಿಂಗ್ ಲಂಬ, ಅಜಯ್ ಶಾಸ್ತ್ರಿ ಸೇರಿದಂತೆ ಇತರ ಮುಖಂಡರು ಇದ್ದರು.
