ಮೈಸೂರು | ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ:‌ ಪ್ರೊ. ಚ ಸರ್ವಮಂಗಳಾ

Date:

Advertisements

ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ. ಆ ಮೂಲಕ ಕಾವ್ಯದಲ್ಲಿ ಬದುಕೂ ಸಹ ಉಸಿರಾಡುತ್ತದೆ. ಹಾಗಾಗಿ, ಕವಿಗಳು ಪದಗಳನ್ನು ದುಂದುವೆಚ್ಚ ಮಾಡಬಾರದು ಎಂದು ಹಿರಿಯ ಸಾಹಿತಿ ಪ್ರೊ. ಚ ಸರ್ವಮಂಗಳಾ ಕವಿಗಳಿಗೆ ಕಿವಿಮಾತು ಹೇಳಿದರು.

ಮೈಸೂರು ನಗರದ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಸರಾ ಕವಿ- ಕಾವ್ಯ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಾವ್ಯೋತ್ಸವ ಮತ್ತು ಡಾ. ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಪದಗಳ ಬಳಕೆಯಲ್ಲಿ ಕವಿಗಳು ಎಚ್ಚರ ವಹಿಸಬೇಕು. ಭಾಷೆಯನ್ನು ಆಡಂಬರವಾಗಿ ಬಳಸಬಾರದು. ಅನುಭವನ್ನೇ ಕಾವ್ಯದ ಅಂಗಡಿಯಾಗಿ ಅಭಿವ್ಯಕ್ತಿಸಬೇಕು. ಮನಸ್ಸಿಗೆ ಹಿಂಸೆಯಾದರೂ ಸರಿ ಯಾವತ್ತಿಗೂ ಕಾವ್ಯದಲ್ಲಿ ಸತ್ಯವನ್ನೇ ಹೇಳಬೇಕು. ಕಾವ್ಯ ರಚನೆಯ ಅಗತ್ಯಕ್ಕೆ ಅನುಗುಣವಾಗಿ ಪದಗಳನ್ನು ಬಳಸಬೇಕು. ಆದರೆ, ಕೆಟ್ಟ ಮತ್ತು ಹೊಲಸು ಪದಗಳು ಬಳಸಿ ಭಾಷೆಯ ಅಂದವನ್ನು, ಸೌಂದರ್ಯವನ್ನು ಕೆಡಿಸಬಾರದು” ಎಂದು ಹೇಳಿದರು.

Advertisements

“ಕವಿಗಳು ಪದ ಬಳಕೆಯಲ್ಲಿ ಜಿಪುಣತನ ತೋರಿಸಬೇಕು. ಕವಿತೆ ಓದುಗರ ಎದೆಯೊಳಗೆ ಸದಾಶಯದ ಬೀಜ ಮೊಳೆಯುವಂತೆ ಪರಿಣಾಮಕಾರಿಯಾಗಿರಬೇಕು. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಕೆಟ್ಟ ಭಾಷೆಯ ಪ್ರಯೋಗ ನಡೆದಿದೆ. ಇದು ವ್ಯಾಪಕವಾಗುತ್ತಿರುವುದು ವಿಷಾದನೀಯ. ಕಾವ್ಯದಲ್ಲಿ ಜೀವಂತ ಭಾಷೆ ಬಳಸಬೇಕು” ಎಂದು ಯುವ ಕವಿಗಳಿಗೆ‌ ಕರೆ ನೀಡಿದರು.

“ಭಾಷೆ ಎಂದೂ ಹೊಲಸಾಗಬಾರದು. ಅದು ಹೊಲಸದಾರೆ ದೇಶ, ಸಾಹಿತ್ಯ, ಸಂಸ್ಕೃತಿ, ಧರ್ಮ ಎಲ್ಲವೂ ನಾಶವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಭಾಷೆಯು ಕನ್ನಡ ಭಾಷೆಯ ಸೌಂದರ್ಯವನ್ನು ಮತ್ತು ಮನುಷ್ಯ ಬದುಕಿನಲ್ಲಿ ಅಳವಡಿಕೊಳ್ಳಬೇಕಾದ ಮೌಲ್ಯವನ್ನು ಸಾರುತ್ತದೆ” ಎಂದು ತಿಳಿಸಿದರು.

“ನಾವು ಕೆಟ್ಟಕಾಲದಲ್ಲಿ ಬದುಕುತ್ತಿದ್ದೇವೆ. ಭಾಷೆಗೂ ಒಂದು ಧರ್ಮವಿದ್ದು, ಕೆಟ್ಟ ಭಾಷೆ ಮತ್ತು ಕೆಟ್ಟ ಪದ ಬಳಕೆಯ ಮೂಲಕ ಭಾಷಾಧರ್ಮವನ್ನು ನಾಶ ಮಾಡಲಾಗುತ್ತಿದೆ. ಬದುಕು ಮತ್ತು ಅನುಭವ ಭಾಷೆಯಲ್ಲಿ ಶಬ್ದಚಿತ್ರವಾಗಿ ಬಂದಾಗ ಜೀವಂತ ಕಾವ್ಯ ಮೂಡುತ್ತದೆ” ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, “ಇಂದು ಪ್ರಪಂಚದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಯುದ್ಧವನ್ನು ನಿಲ್ಲಿಸುವ ಶಕ್ತಿ ಕಾವ್ಯಕ್ಕೆ ಇದೆ. ಹೀಗಾಗಿ, ಯುದ್ಧೋನ್ಮಾದಕ್ಕೆ ಪ್ರತಿರೋಧವಾಗಿ ಕವಿಗಳು ಕಾವ್ಯವನ್ನು ಕಟ್ಟಬೇಕು. ಆ ಮೂಲಕ ಬಂದೂಕು, ಮದ್ದು ಗುಂಡಿನ ಸದ್ದಡಗಿಸಲು, ಕಾವ್ಯವೇ ಮದ್ದುಗುಂಡುಗಳಾಗಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಯಡಿಯೂರಪ್ಪನವರ ಕಣ್ಣೀರಧಾರೆಗೆ ಮಕ್ಕಳೇ ಕಾರಣ : ಆಯನೂರ್  ಮಂಜುನಾಥ್

ಹಿರಿಯ ಸಾಹಿತಿ ಡಾ. ಸಿ ಪಿ ಕೃಷ್ಣಕುಮಾರ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ ಸತೀಶ್ ಜವರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್ ಕೆ ರಾಮು, ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಈ ಸಿ ನಿಂಗರಾಜ್ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ ಎಸ್ ಸತೀಶ್, ಮಡಿಲು ಸೇವಾ ಟ್ರಸ್ಟ್ ಸಂಸ್ಥಾಪಕ ಅರಸು ಮಡಿಲು, ನಿವೃತ್ತ ಮುಖ್ಯ ಶಿಕ್ಷಕ ಯೋಗೇಂದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಪಿ ಶಾಂತರಾಜು, ಪದಾಧಿಕಾರಿಗಳಾದ ಟಿ ಲೋಕೇಶ್ ಹುಣಸೂರು, ಡಾ. ಡಿ ಕೆ ಉಷಾ, ಚಂದ್ರು‌ ಮಂಡ್ಯ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X