ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಮೈಸೂರು ನಗರದ ಉದಯಗಿರಿ ಠಾಣೆ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಸಮಯಲ್ಲಿ ಒಟ್ಟು 154 ಕೆಜಿ 450 ಗ್ರಾಂ ಗಾಂಜಾ ಪತ್ತೆಯಾಗಿದೆ.
ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಗಿರಿ, ಕೆಹೆಚ್‌ಬಿ ಕಾಲೋನಿಯ ಮನೆಯೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಬಗ್ಗೆ ಉದಯಗಿರಿ ಠಾಣಾ ಪೊಲೀಸರಿಗೆ 2024ರ ನವೆಂಬರ್ 12ರಂದು ಬಂದ ಖಚಿತ ಮಾಹಿತಿಯ ಮೇರೆಗೆ ಉದಯಗಿರಿ ಪೊಲೀಸರು ಸದರಿ ಮನೆಯ ಮೇಲೆ ದಾಳಿ ಮಾಡಿದ್ದರು.
8 ಪ್ಲಾಸ್ಟಿಕ್ ಚೀಲದಲ್ಲಿ ಹಲವು ಪೊಟ್ಟಣ್ಣಗಳನ್ನಾಗಿಟ್ಟಿದ್ದ ಒಟ್ಟು 154 ಕೆಜಿ 450ಗ್ರಾಂ ಗಾಂಜಾ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಹಾಜರು ಪಡಿಸಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸರ್ಕಾರಿ ನೌಕರರ ಚುನಾವಣೆ; ಮಧು ಬಂಗಾರಪ್ಪನವರ ಮಾರ್ಗದರ್ಶನ ಪಡೆದ ಅಭ್ಯರ್ಥಿಗಳು
ಗಾಂಜಾ ಆರೋಪಿಗಳ ವಿಚಾರಣಾ ಕಾಲದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದು, ಸದರಿ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ.
ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುಧಾಕರ್ ಕೆ ಎನ್, ಪಿಎಸ್ಐ ಸುನೀಲ್ ಸಿ ಎನ್, ಆನಂದ್ ಹೆಚ್ ಎಂ, ನಾಗರಾಜ ನಾಯಕ ಬಿ ಜಿ, ರೂಪೇಶ್ ಸಿ ಎಂ, ಸಿಬ್ಬಂದಿಗಳಾದ ರಾಜು ಸಿ, ಮಹೇಶ, ಶಿವಪ್ರಸಾದ್, ರಾಜೇಸಾಬ್, ಕರಿಯಪ್ಪ, ಪ್ರಕಾಶ್ ರಾಠೋಡ್, ಸಂತೋಷ್ ಪವಾರ್, ಸುಹೇಲ್, ರಾಜೇಶ್, ಆದರ್ಶ್, ನಂದಿತ, ನಾಜೀಯಾ ಶರೀಫ್ ಕಾರ್ಯಾಚರಣೆಯಲ್ಲಿ ಇದ್ದರು.