ಮೈಸೂರು : ಹಮಾಲಿ ಕಾರ್ಮಿಕರ ಬದುಕು ಅತಂತ್ರ; ಜುಲೈ.10 ರಂದು ಪ್ರತಿಭಟನೆ

Date:

Advertisements

ಮೈಸೂರಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟ ಪತ್ರಿಕಾಗೋಷ್ಠಿ ನಡೆಸಿ ಜುಲೈ.10 ಕ್ಕೆ ಪಡಿತರ ಯೋಜನೆಗೆ ‘ಅನ್ನಭಾಗ್ಯ’ವೆಂದು ಹೆಸರಿಟ್ಟು, ಜಾರಿ ಮಾಡಿ 12 ವರ್ಷ. ಆದರೇ, ಅದನ್ನು ಜಾರಿ ಮಾಡುವ ಹಮಾಲಿ ಕಾರ್ಮಿಕರ ಬದುಕು ಇನ್ನೂ ಅತಂತ್ರವಾಗಿದ್ದು ನ್ಯಾಯ ದೊರೆತಿಲ್ಲ. ಇದೇ ಕಾರಣಕ್ಕಾಗಿ ಜುಲೈ. 10 ರಂದು ಮೈಸೂರು ಜಿಲ್ಲೆಯಾದ್ಯಂತ ಕೆಲಸ ನಿಲ್ಲಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

” ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಸ್ ಗೋದಾಮುಗಲ್ಲಿ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ ಹಾಗೂ ಅನ್‌ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರ 2024-2026 ಟೆಂಡ‌ರ್ ನಿಯಮಾವಳಿ ಪ್ರಕಾರ ಇಎಸ್ಐ ಮತ್ತು ಪಿಎಫ್ ಪಾವತಿಸುವುದು ಕಡ್ಡಾಯ ಮಾಡಿದೆ. ಆಯುಕ್ತರ ಪತ್ರ ಸಂಖ್ಯೆ: ಸಿಎಫ್‌ಎಸ್/ಐಟಿ-4/ಟೆಂಡರ್/ಹಮಾಲಿ/117/2024-26 ದಿನಾಂಕ-08-04-2025 ರಂದು ಆದೇಶ ಮಾಡಿದ್ದು, ಮೈಸೂರು ಜಿಲ್ಲೆಯಲ್ಲಿ ಇನ್ನೂ ಜಾರಿಯಾಗಿಲ್ಲಾ. ಆದ್ದರಿಂದ, ಇಎಸ್ಐ ಕಟ್ಟದೆ ಇರುವ ಕಾರಣದಿಂದ ಆನಾರೋಗ್ಯಕ್ಕೀಡಾದ ಕಾರ್ಮಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೈಯಿಂದ ಹಣ ಪಾವತಿಸಬೇಕಾದ ಸಂದರ್ಭ ಬಂದಿದ್ದು, ಸ್ವತ: ಹಣ ಪಾವತಿಸಿ ಚಿಕಿತ್ಸೆ ಪಡೆದಿದ್ದು ಇಎಸ್ಐ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ ” ಎಂದು ರಾಜ್ಯಾಧ್ಯಕ್ಷ ವರದಾರಾಜು ಆರೋಪಿಸಿದರು.

” 2025 ರ ಫೆಬ್ರವರಿ ಮಾಹೆಯಿಂದಲೂ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಕಾರ್ಮಿಕರಿಂದ ಇಎಸ್ಐ ಮತ್ತು ಪಿಎಫ್ ವಂತಿಗೆ ಕಡಿತ ಮಾಡಿದ್ದು, ಇಲ್ಲಿಯವರೆವಿಗೂ ಪಾವತಿ ಮಾಡದೇ ಇರುವುದು ಕಾನೂನೂ ಬಾಹಿರ ಮತ್ತು ಕ್ರಿಮಿನಲ್ ಅಪರಾಧ. ಹಾಗಾಗಿ, ಇದರ ಬಗ್ಗೆ ತುರ್ತಾಗಿ ಗಮನವಹಿಸಿ, ಕ್ರಮವಹಿಸಬೇಕು ಎಂದು ಆಗ್ರಹಿಸಿದರು. 2025 ರ ಫೆಬ್ರವರಿಯಲ್ಲಿ ಚಿಲ್ಲರೆ ಮತ್ತು ಸಗಟು ಟೆಂಡರ್ ಆಗಿದ್ದು. ಹಲವು ತಾಲೂಕುಗಳಿಗೆ ಟೆಂಡ‌ರ್ ಆಗದೆ ಉಳಿದಿರುವ ಕಾರಣ ಆ ತಾಲೂಕುಗಳಿಗೆ ಕೂಲಿ ಹೆಚ್ಚಳವಾಗದೇ ಅಲ್ಲಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಕ್ವಿಂಟಾಲ್ ₹5.54 ರೂಪಾಯಿ 2025 ರ ಫೆಬ್ರವರಿಯಿಂದ ನಷ್ಟವಾಗುತ್ತಿದೆ. ಆ ತಾಲೂಕಿಗೆ ತಕ್ಷಣವೇ ಸಗಟು ಮತ್ತು ಚಿಲ್ಲರೇ ಸಾಗಾಣಿಕೆ ಟೆಂಡರ್ ಆದೇಶ ಮಾಡಬೇಕು. ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದ್ದಲ್ಲಿ ಆ ತಾಲೂಕುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಕೂಡಲೇ ಹೊಸ ದರ ಚಿಲ್ಲರೇ ಸಾಗಾಣಿಕೆ ಕ್ವಿಂಟಾಲ್ ಗೆ ₹23.62 ರೂಪಾಯಿ ಹಾಗೂ ಸಗಟು ಸಾಗಾಣಿಕೆ ಟೆಂಡರ್ ಕ್ವಿಂಟಾಲ್‌ಗೆ ₹10.92 ರೂಪಾಯಿ ನಿಗಧಿ ಮಾಡಿ ಆದೇಶ ಮಾಡಬೇಕು.”

Advertisements

” ಚಿಲ್ಲರೇ ಸಾಗಾಣಿಕೆಗೆ ಯಾವುದೇ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕ ಕಾಯ್ದೆ ಪ್ರಕಾರ ಯಾವುದೇ ನಿಯಮಾವಳಿಗಳನ್ನು ಪಾಲಿಸುತಿಲ್ಲ. ಸರಿಯಾದ ಸಮಯಕ್ಕೆ ಸಂಬಳ (ಕೂಲಿ) ಪಾವತಿ ಮಾಡುತ್ತಿಲ್ಲ, ಹಾಗೂ ಸಂಬಳ ಪಾವತಿ ರಸೀದಿ ಅಥವಾ ಸಂಬಳ ಚೀಟಿ (WAGE SLIP ) ಇಎಸ್ಐ ಮತ್ತು PF ವಂತಿಕೆ ಪಾವತಿ ರಸೀದಿ ನೀಡುತ್ತಿಲ್ಲಾ. ಹಾಗಾಗಿ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸರಿಯಾಗಿ ಸಂಬಳ ಪಾವತಿಸಲು, ಹಾಗೂ ಆಯಾ ತಿಂಗಳು ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿಸಿ ರಸೀದಿ ನೀಡಲು ಕ್ರಮವಹಿಸಬೇಕು ” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ?ಮೈಸೂರು | ತುಂಬಸೋಗೆಯಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ ಸಭೆ

2023ರ ಜುಲೈನಿಂದ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್ಲೋಡಿಂಗ್ ಕೂಲಿ ದರ ₹1.90 ರೂಪಾಯಿ ಕಡಿಮೆ ಪಾವತಿ ಮಾಡಿದ್ದು ಇದರ ಬಗ್ಗೆ 2024ರ ಸೆಪ್ಟಂಬರ್ 20 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಇಲ್ಲಿಯ ವರೆಗೂ ಪಾವತಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇದೇ ಜುಲೈ.10 ರಂದು ಮೈಸೂರು ಜಿಲ್ಲೆಯಾದ್ಯಂತ ಕೆಲಸ ಬಂದ್ ಮಾಡ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಜಿಲ್ಲಾಧ್ಯಕ್ಷ ಕರಿನಾಯಕ ಮಾಹಿತಿ ನೀಡಿರುತ್ತಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X