ಮೈಸೂರು ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಜರ್ಮನಿ ದೇಶದ ಬವೇರಿಯಾ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅಕ್ಟೋಬರ್ 23 ಮತ್ತು 24 ರಂದು ಎರಡು ದಿನಗಳ ವಿಚಾರ ಸಂಕಿರಣ ನಡೆಯಿತು
ಕರ್ನಾಟಕ ಸರ್ಕಾರ ಮತ್ತು ಜರ್ಮನಿ ದೇಶಗಳ ಬಾಂಧವ್ಯ ವೃದ್ಧಿ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಜರ್ಮನಿ ದೇಶದ ಬವೇರಿಯಾ ರಾಜ್ಯದ ಪೊಲೀಸ್ ಇಲಾಖೆಯೊಂದಿಗೆ 2016ರಿಂದ ತರಬೇತಿ ವಿಭಾಗದಲ್ಲಿ ಪರಸ್ಪರ ಮಾಹಿತಿ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರತೆ, ಕುರಿತು ಸಹಕಾರ ವೃದ್ಧಿಸಲು ಒಪ್ಪಂದ ಮಾಡಿಕೊಂಡಿದ್ದು, ಅದರ ಅನ್ವಯ ಎರಡು ರಾಜ್ಯಗಳ ಅಧಿಕಾರಿಗಳು ತರಬೇತಿ ಕುರಿತು ಭೇಟಿ ಹಾಗೂ ಸನ್ನಿವೇಶ ಆಧಾರಿತ ತರಬೇತಿ(Scenario Based Learning) ಅಭಿವೃದ್ಧಿಪಡಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಎರಡೂ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧಗಳ ಪತ್ತೆ ಮತ್ತು ನಿಯಂತ್ರಣ, ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಸಂಚಾರ ನಿರ್ವಹಣೆ ಹಾಗೂ ಸೈಬರ್ ಅಪರಾಧಗಳ ಪತ್ತೆ ಮತ್ತು ತಡೆಗಟ್ಟುವಿಕೆ ಕುರಿತು ಪರಿಣಾಮಕಾರಿಯಾಗಿ ಅಧಿಕಾರಿಗಳಿಗೆ ಸನ್ನಿವೇಶ ಆಧಾರಿತ ತರಬೇತಿ ನೀಡುವ ಕುರಿತು ಕೌಶಲ್ಯ ಅಭಿವೃದ್ಧಿಪಡಿಸುವ ಬಗ್ಗೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಬವೇರಿಯಾ ರಾಜ್ಯದ ತರಬೇತಿ ಮುಖ್ಯಸ್ಥ ಆಂಡ್ರಿಯನ್ ವೈಟೆಲ್‌ರವರು ಕರ್ನಾಟಕ ಪೊಲೀಸ್ ತರಬೇತಿ ಶಾಲೆಗಳ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ ಮಾಡಿದರು.
ವಿಚಾರ ಸಂಕಿರಣದಲ್ಲಿ ಜರ್ಮನಿಯ ಬವೇರಿಯಾ ಮತ್ತು ಕರ್ನಾಟಕ ರಾಜ್ಯದ ಮಧ್ಯ ಸಮನ್ವಯ ಸಾಧಿಸುವ ಸಂಸ್ಥೆಯಾದ ಹ್ಯಾನ್ ಸೀಡಲ್ ಫೌಂಡೇಶನ್ ಅಧಿಕಾರಿಗಳಾದ ಜುಡಿತ್ ವೇಸ್ ಬರ್ಗರ್ ಹಾಗೂ ನಾಂಡಿಕುಲ್ ರವರು ಭಾಗಿಯಾಗಿದ್ದು,
ಬವೇರಿಯಾ ರಾಜ್ಯದಲ್ಲಿ ಅಂದಾಜು 7 ಕೋಟಿಯಷ್ಟು ಜನಸಂಖ್ಯೆ ಹೊಂದಿದ್ದು, ಯುರೋಪಿನಲ್ಲಿಯೇ ಉತ್ತಮ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ. ಎರಡೂ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧಗಳ ಪತ್ತೆ ಮತ್ತು ನಿಯಂತ್ರಣ, ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಸಂಚಾರ ನಿರ್ವಹಣೆ ಹಾಗೂ ಸೈಬರ್ ಅಪರಾಧಗಳ ಪತ್ತೆ ಮತ್ತು ತಡೆಗಟ್ಟುವಿಕೆ ಕುರಿತು ಪರಿಣಾಮಕಾರಿಯಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಓದಿನ ಜತೆಗೆ ಉದ್ಯೋಗಾಧಾರಿತ ಕೌಶಲ್ಯ ರೂಢಿಸಿಕೊಳ್ಳಿ: ಶಾಸಕ ಡಾ. ಮಂತರ್ ಗೌಡ
ಸನ್ನಿವೇಶ ಆಧಾರಿತ ತರಬೇತಿ ನೀಡುವ ಕುರಿತು ಕೌಶಲ್ಯ ಅಭಿವೃದ್ಧಿಪಡಿಸುವ ಬಗ್ಗೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಬವೇರಿಯಾ ರಾಜ್ಯದ ತರಬೇತಿ ಮುಖ್ಯಸ್ಥ ಆಂಡ್ರಿಯನ್ ಡೈಟೆಲ್, ಕರ್ನಾಟಕ ಪೊಲೀಸ್‌ನ ಎಲ್ಲ ತರಬೇತಿ ಶಾಲೆಗಳ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ ಮಾಡಿದರು.
ಸದರಿ ವಿಚಾರ ಸಂಕಿರಣದಲ್ಲಿ ತರಬೇತಿ ವಿಭಾಗದ ನೇತೃತ್ವವನ್ನು ಎಡಿಜಿಪಿ ಅಲೋಕ್ ಕುಮಾರ್ ವಹಿಸಿದ್ದರು. ಡಿಐಜಿಪಿ ಬೋರಲಿಂಗಯ್ಯ, ಕೆಪಿಎ ನಿರ್ದೇಶಕ ಚೆನ್ನಬಸವಣ್ಣ ಎಸ್ ಎಲ್, ಉಪ ನಿರ್ದೇಶಕರುಗಳು, ರಾಜ್ಯದ 11 ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರುಗಳು ಹಾಗೂ ಕೆಪಿಎನ ಸಹಾಯಕ ನಿರ್ದೇಶಕರುಗಳು ಇದ್ದರು.