ಮೈಸೂರು | ಬಳ್ಳೆ ವನ್ಯಜೀವಿ ವಲಯದಲ್ಲಿ ಮೃತ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಪ್ರತಿಮೆ ಅನಾವರಣ

Date:

Advertisements

ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ವನ್ಯಜೀವಿ ವಲಯದಲ್ಲಿ ಆನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ ಐಎಫ್ಎಸ್ ಅಧಿಕಾರಿ ಮಣಿಕಂಠನ್ ರವರ ಪ್ರತಿಮೆಯನ್ನು ‘ವಿಶ್ವ ವನ್ಯಜೀವಿ ದಿನ ‘ದ ಅಂಗವಾಗಿ ಡಿಸಿಎಫ್ ಪಿ ಎ ಸೀಮಾ ಅನಾವರಣಗೊಳಿಸಿದರು.

ಏಳು ವರ್ಷಗಳ ಹಿಂದೆ ಬಳ್ಳೆ ವನ್ಯಜೀವಿ ವಲಯದ,ಡಿಬಿ ಕುಪ್ಪೆ ಕಾಡಿನಲ್ಲಿ ಫೈರ್ ಲೈನ್ ಕಾಮಗಾರಿ ವೀಕ್ಷಣೆ ಮಾಡುವಾಗ ಕಾಡಾನೆ ಏಕಾಏಕಿ ಅಧಿಕಾರಿ ಮಣಿಕಂಠನ್ ಅವರ ಮೇಲೆ ದಾಳಿ ಮಾಡಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕೆಳಗೆ ಬಿದ್ದಾಗ ಕಾಡನೆ ತುಳಿದಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟು, ಜೊತೆಯಲ್ಲಿದ್ದ ಆರ್ ಎಫ್ ಓ ಸುಬ್ರಮಣ್ಯ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ವಿಶ್ವ ವನ್ಯ ಜೀವಿ ದಿನದಂದೆ ಮೃತರಾಗಿದ್ದ ಮಣಿಕಂಠನ್ ಅವರ ಪ್ರತಿಮೆಯನ್ನು ವೀರನಹೊಸಹಳ್ಳಿ ಮಾರ್ಗದಿಂದ ಕೇರಳದ ಕಡೆಗೆ ತೆರಳುವ ಮಾರ್ಗ ಮಧ್ಯವಾದ ಬಳ್ಳೆ ಸಮೀಪದಲ್ಲಿ ನಿರ್ಮಾಣವಾಗಿದೆ.

Advertisements

ಪ್ರತಿಮೆ ಅನಾವರಣ ಮಾಡಿ ಮಾತಾಡಿದ ಡಿಸಿಎಫ್ ಪಿ ಎ ಸೀಮಾ ” ದಕ್ಷ ಅಧಿಕಾರಿ ಮಣಿಕಂಠನ್ ಅವರು ನಿಷ್ಠಾವಂತರಾಗಿ, ದಕ್ಷತೆಯಿಂದ ಕೆಲಸ ಮಾಡಿದವರು. ಅರಣ್ಯ ಸೇವೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕಾಡಿನ ಬಗ್ಗೆ ಒಲವು, ಕಾಳಜಿ ಹೊಂದಿದ್ದ ಅಧಿಕಾರಿಯನ್ನು ಕಳೆದುಕೊಂಡು ಏಳು ವರ್ಷಗಳೇ ಸಂದಿವೆ ಆದರೆ ಇಂದು ಅವರ ಪ್ರತಿಮೆ ಅನಾವರಣ ಮಾಡಿದ್ದು ನಮ್ಮೆಲ್ಲರಿಗೂ ಸ್ಫೂರ್ತಿ ತರುವಂತದ್ದು ” ಎಂದರು.

” ಕಾಡಿನಲ್ಲಿ ಕೆಲಸ ಮಾಡುವಾಗ ಜಾಗರೂಕತೆ ವಹಿಸಬೇಕು, ತಮ್ಮ ರಕ್ಷಣೆಯ ಕಡೆಗೆ ಗಮನ ಹರಿಸಬೇಕು. ಇಂತಹ ಘಟನೆಗಳು ಎಂದಿಗೂ ಮರುಕಳಿಸಬಾರದು, ಕಾಡಿನಲ್ಲಿ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು.ಕಾಡು ಪ್ರಾಣಿಗಳ ಸಂಚಾರ ಇರುವುದನ್ನ ಖಾತ್ರಿ ಮಾಡಿಕೊಂಡು ಓಡಾಡುವುದು ಸೂಕ್ತ. ಕಾಡಿನಲ್ಲಿ ಪ್ರಾಣಿಗಳ ಇರುವಿಕೆ ಗಮನಿಸುವುದು, ಸೂಕ್ಷ್ಮವಾಗಿ ಆಲಿಸುವುದು ಸಿಬ್ಬಂದಿಗಳಿಗೆ ಅತ್ಯಗತ್ಯ. ಬಹಳ ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಣೆ ಮಾಡಿ ” ಎಂದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವೀರಪ್ಪನ್ ಅಡಗುದಾಣಗಳಲ್ಲಿ ಒಂದಾದ ಪಾಲಾರ್ ಹಾಡಿ‌ಗೆ ಬೆಳಕು; ಬುಡಕಟ್ಟುಗಳ ಮೊಗದಲ್ಲಿ ಮಂದಹಾಸ

ಕಾರ್ಯಕ್ರಮದಲ್ಲಿ ಎಸಿಎಫ್ ಗಳಾದ ಮಧು, ಎನ್ ಲಕ್ಷ್ಮಿಕಾಂತ್, ಅಂತರಸಂತೆ ವಲಯ ಅರಣ್ಯಧಿಕಾರಿ ಸಿದ್ದರಾಜು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X