ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರನ್ನು ಸಬಲೀಕರಣಗೊಳಿಸಲು ಆಯೋಜಿಸಲಾದ ‘ಸ್ವಾವಲಂಬಿ ಸ್ತ್ರೀ ಯೋಜನೆ’ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದ 11 ಮಂದಿ ಮಹಿಳೆಯರ ಜೀವನ ರೂಪಿಸಿದೆ.
ಮೈಸೂರಿನಲ್ಲಿ ತಳಿರು ಫೌಂಡೇಶನ್, ರೋಟರಿ ಮೈಸೂರು ಮತ್ತು ರೋಟರಿ ಮೈಸೂರು ಈಸ್ಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎನ್ ಆರ್ ಫೌಂಡೇಶನ್ ಆಯೋಜಿಸಿದ್ದ ‘ಸ್ವಾವಲಂಬಿ ಸ್ತ್ರೀ ಯೋಜನೆ’ಯಾದ ಆಟೋ ರಿಕ್ಷಾ ಚಾಲನೆ ತರಬೇತಿ ಯೋಜನೆ ಮೂಲಕ 11 ಮಂದಿ ಮಹಿಳೆಯರು ನಗರಾದ್ಯಂತ ಆಟೋ ರಿಕ್ಷಾ ಓಡಿಸಲು ಅನುಮತಿ ದೊರಕಿಸಿಕೊಂಡಿದ್ದಾರೆ.
ಸ್ವಾವಲಂಬಿ ಸ್ತ್ರೀ ಯೋಜನೆಯಲ್ಲಿ ಆಟೋ ರಿಕ್ಷಾ ಚಾಲನೆ ತರಬೇತಿ ಜತೆಗೆ ಆರ್ಥಿಕ ಸಾಕ್ಷರತೆ, ಆತ್ಮರಕ್ಷಣೆ, ಸಂವಹನ ಕೌಶಲ್ಯ ಮತ್ತು ಸಮಾಲೋಚನೆ ಸೇರಿದಂತೆ ಅಗತ್ಯ ಜೀವನ ಕೌಶಲ್ಯಗಳ ತರಬೇತಿ ನೀಡಲಾಗಿದ್ದು, ಮಹಿಳೆಯರು ಆರ್‌ಟಿಒ ಪರವಾನಗಿ, ಬ್ಯಾಡ್ಜ್ ಮತ್ತು ಸಮವಸ್ತ್ರ ಹೊಂದಿದ್ದಾರೆ. ಈಗಾಗಲೇ ಎರಡನೇ ಬ್ಯಾಚ್ ಕೂಡ ಸಿದ್ಧವಾಗಿದೆ. ಈ ಬ್ಯಾಚ್‌ನಲ್ಲಿ 12 ಮಂದಿ ಮಹಿಳೆಯರು ತರಬೇತಿ ಪಡೆಯುತಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಹಣಕ್ಕೆ ಬೇಡಿಕೆಯಿಟ್ಟ ಆರೋಪ: ಹಾರೋಹಳ್ಳಿ ಪ. ಪಂ. ಮುಖ್ಯಾಧಿಕಾರಿ ಶ್ವೇತಾ ಅಮಾನತು
ಎನ್‌ಆರ್ ಫೌಂಡೇಶನ್‌ನ ಅಧ್ಯಕ್ಷ ಆರ್ ಗುರು, ತಳಿರು ಫೌಂಡೇಶನ್ ಚಿತ್ರಾ, ರೋಟರಿ ಮೈಸೂರಿನ ಪ್ರವೀಣ್ ಎಂ, ರೋಟರಿ ಮೈಸೂರು ಈಸ್ಟ್‌ನ ರೋಹಿತ್ ಸುಬ್ಬಯ್ಯ ಸೇರಿದಂತೆ ಫಲಾನುಭವಿಗಳು ಇದ್ದರು.