ಮೈಸೂರಿನಲ್ಲಿ ಇಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ‘ ಹತ್ತನೇ ಚಾಮರಾಜ ಒಡೆಯರ್ ಜಯಂತ್ಯುತ್ಸವ ‘ ಕಾರ್ಯಕ್ರಮವನ್ನು ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನ ವೃತ್ತದಲ್ಲಿ ಹಮ್ಮಿಕೊಂಡಿದ್ದರು.
ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಯಮುನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರ ನೇತೃತ್ವದಲ್ಲಿ ಹತ್ತನೇ ಚಾಮರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿ ನುಡಿ ನಮನ ಹಾಗೂ ಪುಷ್ಪ ನಮನ ಸಲ್ಲಿಸಿದರು.
” ಮೈಸೂರಿನ 23 ನೇ ಮಹಾರಾಜರಾದ ಚಾಮರಾಜ ಒಡೆಯರ್ ಫೆ. 22, 1894 ರಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜನಿಸಿದರು. ಇವರ ಆಳ್ವಿಕೆಯಲ್ಲಿ ಸಿ ವಿ ರಂಗಚಾರ್ಲು, ಕೆ ಶೇಷಾದ್ರಿ ಅಯ್ಯರ್ ದಿವಾನರುಗಳಾಗಿ ಸಮರ್ಥ ಆಡಳಿತಕ್ಕೆ ನೇರವಾದರು.
1881 ರಲ್ಲಿ ಮೈಸೂರು ಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು ಇದು ಭಾರತದ ಮೊದಲ ಆಧುನಿಕ ಪ್ರಜಾಪ್ರಭುತ್ವದ ಶಾಸಕಾಂಗ ಸಂಸ್ಥೆಯಾಗಿತ್ತು” ಎಂದು ರಾಜ್ಯಾಧ್ಯಕ್ಷೆ ಯಮುನ ಅವರು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ ” 1893 ರಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಪ್ರಯಾಣವನ್ನು ಪ್ರಾಯೋಜಿಸಿದರು.ಅದಲ್ಲದೆ, ‘ ಕನ್ನಡ ಬಾಷೋಜ್ಜೀವಿನಿ ‘ ಶಾಲೆಯನ್ನು ಮಹಿಳಾ ಶಿಕ್ಷಣಕ್ಕೆ ಆಧ್ಯತೆಯಾಗಿ ಸ್ಥಾಪಿಸಿದರು. ಬೆಂಗಳೂರು ಅರಮನೆಯ ನಿರ್ಮಾತ್ರು ಸಹ ಇವರೇ ” ಎಂದು ಆಡಾಳಿತಾವಧಿಯ ಹೆಗ್ಗುರುತುಗಳನ್ನು ಮೆಲುಕು ಹಾಕಿದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ ಸಿ ಮಹೇಂದ್ರ ಮಾತನಾಡಿ ಮಹಾರಾಜರ ಕೊಡುಗೆ ಅಪಾರವಾದದ್ದು, ಅಲ್ಪಾವಧಿ ಆಳ್ವಿಕೆ ನಡೆಸಿದ್ದರು ಸಹ, ಚಾಮರಾಜ ಒಡೆಯರ್ ಅವರ ಆಳ್ವಿಕೆಯ ಅವಧಿ ಅತ್ಯಂತ ಸ್ಮರಣಿಯವಾದದ್ದು.

ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಮಹನೀಯರ ಸ್ಮರಿಸುವುದು ನಿಜಕ್ಕೂ ಅರ್ಥಪೂರ್ಣವಾದದ್ದು. ಇನ್ನು ಹೆಚ್ಚು ಹೆಚ್ಚಾಗಿ ಇಂತಹ ಮಹನೀಯರ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು.ಮೈಸೂರಿನಲ್ಲಿ ಇರುವ ಹಲವು ಪ್ರತಿಮೆಗಳು ಮೈಸೂರಿನ ಹೆಗ್ಗುರುತು ಸರಿಯಾದ ನಿರ್ವಹಣೆ ಇರದೆ ಸೊರಗುತ್ತಿವೆ.ಮಹಾ ನಗರ ಪಾಲಿಕೆ ಇದರ ಕಡೆ ಗಮನ ಹರಿಸಬೇಕು.
ನಿರ್ಲಕ್ಷ್ಯದಿಂದ ಇರುವುದು ಸರಿಯಲ್ಲ, ಇಂದು ಜನ್ಮ ದಿನದ ಕಾರ್ಯಕ್ರಮ ಇರುವಾಗಲು ಸ್ವಚ್ಛತೆ ಮಾಡದೆ ಇರುವುದು ಬೇಸರ ತರುವಂತದ್ದು, ಇನ್ನಾದರು ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಇತ್ತ ಕಡೆ ಗಮನ ಕೊಡಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ; ಕಿಡಿಗೇಡಿಗಳ ಕೃತ್ಯವಿರುವ ಶಂಕೆ
ದಸರಾ ಅರ್ಚಕರಾದ ಪ್ರಹ್ಲಾದರಾವ್, ಬಹುಜನ ವಿದ್ಯಾರ್ಥಿ ಸಂಘದ ಸಿದ್ದರಾಜು,ನಾಯಕರ ಸಂಘದ ರಾಜ್ಯಾಧ್ಯಕ್ಷರಾದ ದ್ಯಾವಪ್ಪ ನಾಯಕ, ಮಹಿಳಾ ಸಹಕಾರಿ ಬ್ಯಾಂಕ್ ನಿರ್ದೇಶಕರು ಸುಶೀಲ ನಂಜಪ್ಪ, ಸಮಾಜ ಸೇವಕರಾದ ಎಸ್ ಆರ್ ರವಿ ಕುಮಾರ್, ಗಾಯಕರಾದ ಗಾನ ಸುಮಾ, ಸತ್ಯವತಿ, ಪತ್ರಕರ್ತರಾದ ರಾಜೇಶ್, ಜಿ ಪ್ರಕಾಶ್, ಶಿವಶಂಕರ್ ಕಾರ್ಯಕ್ರಮದಲ್ಲಿ ಇದ್ದರು.
