ಮೈಸೂರು ದಸರಾ ಮಹೋತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಮೃತಪಟ್ಟ 11ನೇ ದಿನದ ಸ್ಮರಣೆ ಕಾರ್ಯಕ್ರಮಗಳು ಹಲವೆಡೆ ನಡೆಯುತ್ತಿವೆ. ಅದರ ಅಂಗವಾಗಿ ಮೈಸೂರಿನಲ್ಲಿ ಕಲಾವಿದ ಅನಿಲ್ ಕುಮಾರ್ ಭೋಗಶೆಟ್ಟಿ ಕಾವಾ ಅವರು ಅರ್ಜುನ ಆನೆಯ 3ಡಿ ಚಿತ್ರ ಬಿಡಿಸಿದ್ದು, ಅರ್ಜುನ ಮತ್ತು ಮೈಸೂರಿನ ಸಂಬಂಧವನ್ನು ನೆನಪು ಮಾಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ರಾಜ್ಯ ಸಂಘದ ಪ್ರತಿನಿಧಿ ರಾಘವೇಂದ್ರ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಪತ್ರಿಕಾ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಸ್.ಆರ್.ಮಧುಸೂಧನ್, ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಕೆನರಾ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಸುಕುಮಾರ್, ಹಿರಿಯ ಛಾಯಾಗ್ರಾಹಕ ಕೆ.ಬಿ.ಮಹೇಶ್, ಮೈಸೂರು ಫೋಟೋಗ್ರಾಫಿಕ್ ಅಸೋಸಿಯೇಷನ್ ಅಧ್ಯಕ್ಷ ಎ.ಶಾಂತಪ್ಪ, ಕಾರ್ಯದರ್ಶಿ ಎನ್.ಮುರಳೀಧರ್, ಬೆಂಗಳೂರಿನ ನಾಗೇಂದ್ರ ಕುಮಾರ್, ಮತ್ತಿತರ ಪ್ರಮುಖರು ಅರ್ಜುನ ಆನೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಹಲವರು ಅರ್ಜುನ ಆನೆಯ ತ್ರಿ-ಡಿ ಚಿತ್ರದೊಡನೆ ಸೆಲ್ಫಿ ತೆಗೆದುಕೊಂಡಿದ್ದು, ಅರ್ಜುನನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಅನಿಲ್ ಕುಮಾರ್ ಭೋಗಶೆಟ್ಟಿ ಅವರ ಸಹಚರ ಭರತ್ ಯೋಗ, ರಾಜೇಶ್.ಬಿ.ಆರ್. ಚೇತನ್ ಮತ್ತಿತರರು ಇದ್ದರು.