ಮೆಡಿಕಲ್ ಸ್ಟೋರ್‌ಗೆ ಔಷಧ ತೆಗೆದುಕೊಳ್ಳಲೆಂದು ಹೋಗಿದ್ದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಮೈಸೂರು ನಗರದ ಉದಯಗಿರಿ ಮೆಡಿಕಲ್ ಸ್ಟೋರ್ ಬಳಿ ಘಟನೆ ನಡೆದಿದೆ. ಉದಯಗಿರಿ ನಿವಾಸಿ ಜಗದೀಶ್ (38) ಮೃತ ದುರ್ದೈವಿ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ ಅವರು ಅವರು ಔಷಧ ಕೊಳ್ಳಲೆಂದು ಮೆಡಿಕಲ್ ಸ್ಟೋರ್‌ಗೆ ಹೋಗಿದ್ದಾರೆ. ಅಲ್ಲಿಯೇ ಏಕಾಏಕಿ ಕುಸಿದುಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ನಾಯಕರು ಹೋಗಿರುವುದು ಸತ್ಯಶೋಧನೆಗಲ್ಲ, ಕಡ್ಡಿ ಗೀರಲು: ಕಾಂಗ್ರೆಸ್