ಮೈಸೂರು ವಿವಿ | ಪ್ರಾಧ್ಯಾಪಕನಿಂದ ಜಾತಿ ದೌರ್ಜನ್ಯ, ಯುವತಿಯರಿಗೆ ಕಿರುಕುಳ

Date:

Advertisements
ವೆಂಕಟೇಶ್‌ ಮತ್ತು ಅಶೋಕ್‌ ಎಸಗುತ್ತಿರುವ ಜಾತಿವಾದಿ ಶೋಷಣೆಯನ್ನು ಪ್ರಶ್ನಿಸಿದ್ದ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಪೇಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ... 

ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸಿ. ವೆಂಕಟೇಶ್‌ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ದಲಿತ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ಅಂಕಗಳನ್ನು ಕಡಿಮೆ ಮಾಡುತ್ತಿದ್ದಾರೆ, ನೀಡಲಾಗಿದ್ದ ಅಂಕಗಳನ್ನು ತಿದ್ದಿ ಕಡಿಮೆಗೊಳಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅದೇ ವಿಭಾಗದ ವಿದ್ಯಾರ್ಥಿಗಳೇ ಈ ಆರೋಪಗಳನ್ನು ಮಾಡಿರುವುದರಿಂದ ಪ್ರಕರಣವು ಮಹತ್ವ ಪಡೆದುಕೊಂಡಿದೆ.

ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ‘ಎಂಪಿ.ಇಡಿ’ಯಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆರು ವಿದ್ಯಾರ್ಥಿಗಳು ಪ್ರಾಧ್ಯಾಪಕ ವೆಂಕಟೇಶ್‌ ವಿರುದ್ಧ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ, ಕುಲ ಸಚಿವರು ಹಾಗೂ ವಿಭಾಗದ ಅಧ್ಯಕ್ಷರಿಗೆ ವಿಭಾಗದ ವಿದ್ಯಾರ್ಥಿಗಳಾದ ದಿವಾಕರ ಬಿ.ಪಿ, ಕಿರಣ್‌ ಕುಮಾರ್ ಡಿ.ಎಲ್, ಲಕ್ಷ್ಮಣ ಎಚ್‌.ಡಿ, ಲೋಕೇಶ್, ಮಹದೇವ ಜಿ.ಎಲ್ ಹಾಗೂ ಮನು ಅವರು ಲಿಖಿತ ದೂರನ್ನೂ ನೀಡಿದ್ದಾರೆ.

ದಲಿತ ವಿದ್ಯಾರ್ಥಿಗಳನ್ನು ವೆಂಕಟೇಶ್‌ ಟಾರ್ಗೆಟ್ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ದಲಿತ ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿ ಕಡಿಮೆ ಮಾಡುತ್ತಿದ್ದಾರೆ. ಅವಕಾಶ ಸಿಗದಂತೆ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ, ‘ನಿಮ್ಮನ್ನು ಫೇಲ್ ಮಾಡುತ್ತೇನೆ. ನಿಮಗೆ ಭವಿಷ್ಯವೇ ಇಲ್ಲದಂತೆ ಮಾಡುತ್ತೇನೆ’ ಎಂದು ವೆಂಕಟೇಶ್ ಬೆದರಿಕೆಯನ್ನೂ ಹಾಕಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Advertisements

ಎಂಪಿ.ಇಡಿ ತೃತೀಯ ಸೆಮಿಸ್ಟರ್‌ನ ಆಂತರಿಕ ಪರೀಕ್ಷೆಗಳು 2025ರ ಜನವರಿಯಲ್ಲಿ ನಡೆದಿದ್ದವು. 3ನೇ ಸೆಮಿಸ್ಟರ್‌ನ ಒಟ್ಟು 23 ವಿದ್ಯಾರ್ಥಿಗಳನ್ನೂ ನಿಗದಿತ ನಮೂನೆಯಲ್ಲಿ ನಮೂದಿಸಲಾಗಿತ್ತು. ಆದರೂ, ವಾಲಿಬಾಲ್ ವಿಷಯದ ಅಂಕಪಟ್ಟಿಯಲ್ಲಿ 6 ವಿದ್ಯಾರ್ಥಿಗಳ ಆಂತರಿಕ (ಇಂಟರ್‌ನಲ್‌) ಅಂಕಗಳನ್ನು ತಿದ್ದಲಾಗಿದೆ. ಒಟ್ಟು 30 ಅಂಕಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದಿದ್ದ ಅಂಕಕ್ಕೂ, ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಅಂಕಗಳಿಗೂ ಸುಮಾರು ಐದಾರು ಅಂಕಗಳು ಕಡಿಮೆಯಾಗಿವೆ. ನಮೂನೆಯಲ್ಲಿ ಅಂಕಗಳನ್ನು ನಮೂದಿಸಿ, ವಿದ್ಯಾರ್ಥಿಗಳಿಂದ ಸಹಿ ಪಡೆದು, ಬಳಿಕ ಅಂಕಗಳನ್ನು ತಿದ್ದಲಾಗಿದೆ. ಅಂಕಗಳನ್ನು ಕಡಿಮೆ ಮಾಡಲಾಗಿದೆ ಎಂಬುದು ಅಂಕಪಟ್ಟಿ ನಮೂನೆಯಲ್ಲಿ ಕಂಡುಬಂದಿದೆ.

WhatsApp Image 2025 04 17 at 4.39.02 PM

ಅಂಕಗಳನ್ನು ತಿದ್ದಲಾಗಿರುವ ಆರು ಮಂದಿ ವಿದ್ಯಾರ್ಥಿಗಳೂ ಕೂಡ ದಲಿತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಅವರು ದಲಿತರು ಎಂಬ ಕಾರಣಕ್ಕಾಗಿಯೇ ಅಂಕಗಳನ್ನು ತಿದ್ದಿ, ಕಡಿಮೆ ಮಾಡಲಾಗಿದೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

”ಡಾ. ಸಿ ವೆಂಕಟೇಶ್‌ ಅವರೇ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅವರು ಮತ್ತು ಕೆಲವು ಪ್ರಾಧ್ಯಾಪಕರು ಜಾತಿವಾದಿಗಳಾಗಿದ್ದು, ವಿದ್ಯಾರ್ಥಿಗಳ ಮೇಲೆ ಜಾತಿ ದೌರ್ಜನ್ಯ, ಜಾತಿ ನಿಂದನೆ ಮಾಡಿದ್ದಾರೆ. ದಲಿತ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿದ್ದಾರೆ. ವೆಂಕಟೇಶ್‌ ಅವರಿಗೆ ಅತಿಥಿ ಉಪನ್ಯಾಸಕ ಎಸ್‌ ಅಶೋಕ್‌ ಬೆಂಬಲ ನೀಡುತ್ತಿದ್ದಾರೆ. ಈ ಇಬ್ಬರೂ ದಲಿತ ವಿದ್ಯಾರ್ಥಿಗಳ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಅಂಕಗಳನ್ನು ತಿದ್ದಿದ್ದಾರೆ” ಎಂಬುದು ವಿದ್ಯಾರ್ಥಿಗಳ ಆರೋಪ.

”ವೆಂಕಟೇಶ್‌ ಮತ್ತು ಅಶೋಕ್‌ ಎಸಗುತ್ತಿರುವ ಜಾತಿವಾದಿ ಶೋಷಣೆಯನ್ನು ಪ್ರಶ್ನಿಸಿದ್ದ ಕಾರಣಕ್ಕೆ ನಮ್ಮ ಮತ್ತು ಸಹಪಾಠಿಗಳ ನಡುವೆ ಒಡಕು ಮೂಡಿಸಿದ್ದಾರೆ. ಅವರ ಅಕ್ರಮವನ್ನು ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಪೇಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಪರೀಕ್ಷೆ ಸಮಯದಲ್ಲೂ ನಾನಾ ರೀತಿಯ ಅಕ್ರಮಗಳು ನಡೆಯುತ್ತವೆ. ಅಂಕಗಳನ್ನು ಮೊದಲು ಪೆನ್ಸಿಲ್‌ನಲ್ಲಿ ನಮೂದಿಸಿ, ವಿದ್ಯಾರ್ಥಿಗಳಿಂದ ಸಹಿ ಪಡೆದು, ಬಳಿಕ ತಿದ್ದಲಾಗುತ್ತದೆ. ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಲಾಗುತ್ತದೆ. ತಮ್ಮ ಹಿತಾಸಕ್ತಿಗೆ ತಕ್ಕಂತೆ ವರ್ತಿಸುವ, ತಮ್ಮ ಅಥವಾ ಪ್ರಬಲ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರವೇ ಚಿನ್ನದ ಪದಕ ಸಿಗುವಂತೆ ಮಾಡಲಾಗುತ್ತದೆ. ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸದೆ ವಂಚಿಸಲಾಗುತ್ತಿದೆ. ವಿಭಾಗದ ಚಟುವಟಿಕೆಗಳಿಗಾಗಿ ಮಾಡಲಾಗುವ ಖರ್ಚಿಗೆ ದುಪ್ಪಟ್ಟು ಲೆಕ್ಕ ಸೇರಿಸಿ, ಹಣದ ಲೂಟಿಯೂ ನಡೆಯುತ್ತಿದೆ ಎಂಬ ಆರೋಪಗಳೂ ವಿಭಾಗದಲ್ಲಿ ಕೇಳಿಬಂದಿವೆ.

ಪ್ರಾಧ್ಯಾಪಕ ವೆಂಕಟೇಶ್‌ ಯಾವುದೇ ಹಾಸ್ಟೆಲ್‌ಗೆ ವಾರ್ಡನ್‌ ಅಲ್ಲ. ಹಾಗಿದ್ದರೂ, ಹೆಣ್ಣು ಮಕ್ಕಳ ಹಾಸ್ಟೆಲ್‌ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಮಹಿಳಾ ವಿದ್ಯಾರ್ಥಿಗಳು ವೆಂಕಟೇಶ್‌ ಅವರ ಅನುಮತಿ ಇಲ್ಲದೆ ಹಾಸ್ಟೆಲ್‌ನಿಂದ ಹೊರಗೆ ಬರುವ ಅವಕಾಶ ನೀಡುವುದಿಲ್ಲ. ವೆಂಕಟೇಶ್‌ ಅವರಿಗೆ ನೆಚ್ಚಿನವರಾಗಿದ್ದವರಿಗೆ ಮಾತ್ರವೇ ಅವಧಿ ನಂತರವೂ ಹಾಸ್ಟೆಲ್‌ನಿಂದ ಹೊರಬರಲು ಅನುಮತಿಸಲಾಗುತ್ತದೆ. ಉಳಿದ ವಿದ್ಯಾರ್ಥಿಯರು ಯಾವುದೇ ತುರ್ತು ಸಂದರ್ಭವಿದ್ದರೂ, ಹೊರ ಕಳಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

WhatsApp Image 2025 04 17 at 4.38.58 PM

ವಿದ್ಯಾರ್ಥಿಗಳು ದೂರು ನೀಡಿ, ಪ್ರತಿಭಟನೆ ನಡೆಸಿದ ಬಳಿಕ, ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯದ ಆಡಳಿತ ಪರಿಶೀಲಿಸಿದೆ. ವಿದ್ಯಾರ್ಥಿಗಳ ಆರೋಪದಂತೆ ಆಂತರಿಕ (ಇಂಟರ್‌ನಲ್‌) ಅಂಕಗಳನ್ನು ಬದಲಾಯಿಸಿರುವುದು ಕಂಡುಬಂದಿದೆ. ಹೀಗಾಗಿ, ದೂರುದಾರ ವಿದ್ಯಾರ್ಥಿಗಳು ಗಳಿಸಿದ್ದ ಮೂಲ ಅಂಕಗಳನ್ನೇ ನೀಡಲಾಗಿದೆ. ಅಂಕಗಳನ್ನು ತಿದ್ದಿರುವ ಆರೋಪಿ ಉಪನ್ಯಾಸಕರಿಗೆ ವಿಶ್ವವಿದ್ಯಾಲಯ ನೋಟಿಸ್‌ ಜಾರಿ ಮಾಡಿದೆ.

ಅಂಕಗಳು ಮಾತ್ರವಲ್ಲದೆ, ದೈಹಿಕ ಶಿಕ್ಷಣ ವಿಭಾಗದಲ್ಲಿ ನಡೆಯುತ್ತಿರುವ ಎಲ್ಲರಿಗೂ ಅಕ್ರಮ, ಶೋಷಣೆ, ದೌರ್ಜನ್ಯಗಳು ಸೇರಿದಂತೆ ಎಲ್ಲದರ ಬಗ್ಗೆ ತನಿಖೆ ನಡೆಸಬೇಕು. ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕು. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ವಿದ್ಯಾರ್ಥಿಗಳ ನಡುವಿನ ತಾರತಮ್ಯವನ್ನು ಕೊನೆಗಾಣಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಅಂಕ ಬದಲಾವಣೆಯಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪವನ್ನು ಅಲ್ಲಗಳೆದಿರುವ ಪ್ರಾಧ್ಯಾಪಕ ವೆಂಕಟೇಶ್, ”ವಾಲಿಬಾಲ್‌ ಕ್ರೀಡೆಯ ಆಂತರಿಕ ಅಂಕಗಳ ಬದಲಾವಣೆಯಲ್ಲಿ ನನ್ನ ಪಾತ್ರವಿಲ್ಲ. ಅಂಕಗಳನ್ನು ತಿದ್ದಿದ್ದ ಉಪನ್ಯಾಸಕರಿಗೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ನೋಟಿಸ್‌ ನೀಡಿದ್ದಾರೆ. ತಪ್ಪು ಮರುಕಳಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ. ನಾವು ದಲಿತ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿಲ್ಲ. ಯಾವುದೇ ಅಕ್ರಮ ನಡೆದಿಲ್ಲ” ಎಂದು ಅವರು ಹೇಳಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X