ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕು ಕಚೇರಿ ಮುಂದೆ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಇರುವುದು,ಸೇರ್ಪಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕರೋಟಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಧರಣಿ ನಡೆಸಿದರು.
ಇತ್ತೀಚೆಗೆ ರಾಜ್ಯಾದ್ಯಂತ ರೈತರ ಭೂಮಿ ಕಬಳಿಕೆ ಆಗುತ್ತಿದೆ. ಪಹಣಿಯಲ್ಲಿ ವಕ್ಫ್ ಹೆಸರು ಬರುತ್ತಿರುವುದರಿಂದ ರೈತರ ಆತಂಕಕ್ಕೀಡಾಗಿದ್ದಾರೆ. ರೈತರ ಪಹಣಿಯ ಕಲಂ 11 ರಲ್ಲಿ ತಿದ್ದುಪಡಿ ಮಾಡಿ ವಕ್ಫ್ ಹೆಸರು ಸೇರ್ಪಡೆ ಮಾಡುತ್ತಿದ್ದಾರೆ. ಸರ್ಕಾರಿ ತೋಪು, ಸ್ಮಶಾನ,ದೇವಾಲಯ ಸೇರಿದಂತೆ ಇತರೆ ಆಸ್ತಿಗಳನ್ನು ಸಹ ವಕ್ಫ್ ಬೋರ್ಡ್ ಆಸ್ತಿಯೆಂದು ತಿದ್ದುಪಡಿ ಮಾಡಲಾಗಿದೆ. ರೈತರು ತಲೆತಲಾಂತರಗಳಿಂದ ಪಿತ್ರಾರ್ಜಿತವಾಗಿ ಬೇಸಾಯ ಮಾಡಿಕೊಂಡು ಜೀವನ ಕಟ್ಟಿಕೊಂಡಿರುವ ಆಸ್ತಿ ಕಳೆದುಕೊಳ್ಳುವ ಬೀತಿ ಎದುರಾಗಿದ್ದು ಇದರಿಂದ ರೈತ ಸಮುದಾಯ ಆತಂಕದಲ್ಲಿದೆ ಎಂದು ತಿಳಿಸಿದರು.

ತಾಲೂಕು ಆಡಳಿತ, ಜಿಲ್ಲಾಡಳಿತ,ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ರಾಜ್ಯಾದ್ಯಂತ ರೈತರು ಎದುರಿಸುತ್ತಿರುವ ಭೀತಿಯನ್ನು ಹೋಗಲಾಡಿಸಿ ಪಿತ್ರಾರ್ಜಿತ ಕೃಷಿ ಭೂಮಿಗಳನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸುವ ,ತಿದ್ದುಪಡಿ ಮಾಡುವ ಕೆಲಸ ಆಗಬಾರದು.ಕಾನೂನು ರೀತಿಯಲ್ಲಿ ರೈತರ ಭೂಮಿ ಉಳಿಸಿಕೂಡಬೇಕು ಎಂದು ರೈತ ಸಂಘದ ಮುಖಂಡರು ತಹಶೀಲ್ದಾರ್ ಅವರಲ್ಲಿ ಮನವಿ ಪತ್ರ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ ಡಿಸಿಸಿ ಬ್ಯಾಂಕ್ ಮೇಲಿನ ಸುದೀರ್ಘ ವರ್ಷಗಳ ಹಿಡಿತ ಕಳೆದುಕೊಂಡ ಕತ್ತಿ ಕುಟುಂಬ
ಧರಣಿಯಲ್ಲಿ ಎಸ್ ಶಾಂತಮೂರ್ತಿ, ಎಂ ಮಹೇಶ್ ಕುಮಾರ್, ಈ ರಾಜು,ಕೆ ಬಿ ಮಹಾದೇವ ಸ್ವಾಮಿ, ಮಹಾದೇವ ಪ್ರಸಾದ್, ಸಿದ್ದರಾಜು, ಶಿವಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.
