ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ನಾಗರಹೊಳೆ ಉದ್ಯಾನದ ದೊಡ್ಡಹರವೆ ಆನೆ ಶಿಬಿರದ ಮಾವುತರಾದ ಜೆ. ಡಿ, ಮಂಜು ಹಾಗೂ ಎಚ್. ಎನ್ ಮಂಜು ಬೇಟೆಗಾರರ ಜೊತೆ ಸೇರಿ ವನ್ಯ ಜೀವಿಗಳ ಕೊಂದು ಮಾಂಸ ಮಾರಾಟ ಮಾಡುತಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಸಾಕಾನೆ ಶಿಬಿರದ ವಸತಿ ಗೃಹದಲ್ಲಿ ಬಂದೂಕು ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಆಧಿಕಾರಿಗಳು ಪರಿಶೀಲನೆ ನಡೆಸಿದಾಗ ಪರವಾನಗಿ ಇರುವ ಒಂದು ಬಂದೂಕು, ನಾಡ ತೋಟ, ಪರಿಕರಗಳು ಪತ್ತೆಯಾಗಿವೆ.
ಪ್ರಮುಖ ಆರೋಪಿಗಳಾದ ಪಿರಿಯಾಪಟ್ಟಣ ತಾಲ್ಲೂಕು, ನೆರಳ ಕುಪ್ಪೆಯ ಮಂಜು ಮತ್ತೊರ್ವನೊಂದಿಗೆ ಸೇರಿ ವನ್ಯಜೀವಿ ಬೇಟೆಯಾಡಿದ್ದರ ಬಗ್ಗೆ ತಪ್ಪೋಪ್ಪಿಕೊಂಡಿದ್ದಾನೆ. ಎಷ್ಟು ಬಾರಿ ಭೇಟೆಯಾಡಿದ್ದಾರೆ, ಜೊತೆಯಲ್ಲಿದ್ದವರು ಯಾರು ಅನ್ನುವ ಮಾಹಿತಿ ತನಿಖೆಯಿಂದ ತಿಳಿಯಬೇಕಿದೆ.
ಹುಣಸೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ಲಕ್ಷ್ಮಿಕಾಂತ್ ಪ್ರಕರಣದ ನೇತೃತ್ವ ವಹಿಸಿದ್ದು, ತನಿಖೆ ನಡೆಸಿರುವ ಆರ್ ಎಫ್ ಓ ಸುಬ್ರಹ್ಮಣ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ರಚನಾತ್ಮಕ ಪರಿಹಾರ : ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಅರಣ್ಯ ಸಂರಕ್ಷಣೆ ಮಾಡಬೇಕಿದ್ದ ಮಾವುತರಿಬ್ಬರು ಬೇಟೆಗಾರರ ಜೊತೆ ಸೇರಿ ಕಾಡು ಪ್ರಾಣಿಗಳ ಬೇಟೆಯಾಡುತಿದ್ದಿದ್ದು ನಿಜಕ್ಕೂ ಅಚ್ಚರಿ ತರಿಸಿದೆ. ಬೇಲಿಯೇ ಎದ್ದು ಹೊಲ ಮೇದಂತೆ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು. ಆರೋಪಿಗಳು ಎಷ್ಟು ಬಾರಿ ಪ್ರಾಣಿ ಬೇಟೆಯಾಡಿದ್ದಾರೆ ಅನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಮಾವುತರ ಜೊತೆ ಬೇಟೆಗಿಳಿದಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಡಿಸಿಎಫ್ ಪಿ. ಎ. ಸೀಮಾ ಮಾಹಿತಿ ನೀಡಿದ್ದಾರೆ.