ಮೈಸೂರು ದಸರಾ ಹಬ್ಬ ಆರಂಭಗೊಂಡಿದೆ. ಅಕ್ಟೋಬರ್ 24ರಂದು ಜಂಬೂಸವಾರಿ ನಡೆಯಲಿದೆ. ಈಗಾಗಲೇ ನವರಾತ್ರಿ ಪೂಜೆಗಳು ನಡೆಯುತ್ತಿದ್ದು, ರಾಜ್ಯಾದ್ಯಂತ ಆಚರಣೆಯಾಗುತ್ತಿದೆ. ಹಣ್ಣು-ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿಕೆ ಕಂಡಿದೆ.
ಮೈಸೂರು ಮತ್ತು ಕರಾವಳಿ ಭಾಗದಲ್ಲಿ ಕೆಲವು ಹೂವುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಮಲ್ಲಿಗೆ ಹೂವಿನ ಒಂದು ಚೆಂಡು 400 ರೂ. ಇದೆ. ಒಂದು ಮಾರು ಕಾಕಡ ಮಲ್ಲಿಗೆ ಬೆಲೆ 100 ಇದೆ. ಹಳದಿ ಸೇವಂತಿಗೆ ಒಂದು ಮಾರು 100 ರೂ.ಗೆ ಮಾರಾಟವಾಗುತ್ತಿದೆ. ಇತರ ಬಣ್ಣದ ಸೇವಂತಿಗೆ ಒಂದು ಮಾರು 120 ರೂ.ಗೆ ಮಾರಾಟವಾಗುತ್ತಿದೆ.
ಇನ್ನು ಇತ್ತೀಚೆಗೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಹಣ್ಣುಗಳ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿದೆ. ಸೇಬು ಕೆ.ಜಿಗೆ 150ರಿಂದ 180 ರೂ.ವರೆಗೆ ಮಾರಾಟವಾಗುತ್ತಿದೆ. ಬಾಳೆಹಣ್ಣು ಕೆ.ಜಿಗೆ 80 ರೂ. ಇದೆ. ಮೂಸಂಬಿ-ಕಿತ್ತಳೆ ಹಣ್ಣುಗಳು 50ರಿಂದ 70 ರೂ.ವರೆಗೆ ಇದೆ.
ಲಿಚಿ ಹಣ್ಣು 240 ರೂ. ಇದ್ದರೆ, ಡ್ರ್ಯಾಗನ್ ಫ್ರೂಟ್ 200 ರೂ. ಇದೆ. ದಾಳಿಂಬೆ 160 ರೂ. ಹಾಗೂ ಕಿವಿ ಹಣ್ಣು ಕೆ.ಜಿಗೆ 140 ರೂ. ಇದೆ ಎಂದು ಹಣ್ಣು ಮಾರಾಟಗಾರರು ಹೇಳಿದ್ದಾರೆ.