ಮೈಸೂರು ದಸರಾ | ಕವಿತೆಗೆ ಭಾಷೆಯ ಅಂತರವಿಲ್ಲ: ಡಾ. ಎಚ್.ಸಿ ಮಹದೇವಪ್ಪ

Date:

Advertisements

ಭಾಷೆ ಎನ್ನುವುದು ಒಂದು ಸಂಪರ್ಕ ಸೇತುವೆ. ಇದನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನೋಡಲು ಸಾಧ್ಯವಿಲ್ಲ. ಸಾಹಿತ್ಯಕ್ಕೆ ಭಾಷೆಯ ಅಂತರವಿಲ್ಲ ಸಾಹಿತ್ಯದ ಅಂಶಗಳು ಯಾವ ಭಾಷೆಯಲ್ಲಿದ್ದರೂ ಅರ್ಥ ಒಂದೇ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಉರ್ದು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಭಾಷೆ ಎನ್ನುವುದು ನಮ್ಮ ಸಾಂಸ್ಕೃತಿಕ ಹಿನ್ನೆಲೆ ಮತ್ತು ಚರಿತ್ರೆಯನ್ನು ತಿಳಿಸುವಂತಹ ಒಂದು ಸಂಪರ್ಕ ಸಾಧನ. ಕವಿತೆ ಕವಿಗೂ ವ್ಯತ್ಯಾಸವಿಲ್ಲ. ಹಾಗೆಯೇ ರವಿ ಕಾಣದನ್ನು ಕವಿ ಕಂಡ ಎನ್ನುವ ಹಾಗೆ ಕವಿಯು ಯಾವ ಭಾಷೆಯನ್ನು ಬಳಸಿದರು ಆತನ ಸಾಹಿತ್ಯದ ಭಾವನೆ ಒಂದೇ ಆಗಿರುತ್ತದೆ. ಪ್ರಸ್ತುತವಾಗಿ ಜಾತಿ ಧರ್ಮಗಳ ವಿರುದ್ಧದ ಹೋರಾಟದಲ್ಲಿ ಸಮಾಜವು ಸಿಲುಕಿದೆ. ಇದನ್ನು ಸರಿದೂಗಿಸಿಕೊಂಡು ಹೋಗಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ. ಪರಸ್ಪರ ಬೆರೆಯುವುದು ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳಲು ಮತ್ತು ಇತಿಹಾಸವನ್ನು ತಿಳಿಯಲು ಈ ರೀತಿಯ ಕವಿ ಗೋಷ್ಠಿಗಳನ್ನು ಹೆಚ್ಚು ಆಯೋಜಿಸಬೇಕು” ಎಂದರು.

“ಸಾಹಿತ್ಯಕ್ಕೆ ಸಮಾಜದ ಸಮಸ್ಯೆಗಳ ಕುರಿತು ಹಾಗೂ ಸ್ನೇಹ ಸೌಹಾರ್ದ, ಬಾತೃತ್ವ ಮನೋಭಾವದ ಸಂದೇಶವನ್ನು ಇಡೀ ಸಮುದಾಯಕ್ಕೆ ಈ ಕವಿಗೋಷ್ಠಿಯ ಮೂಲಕ ತಿಳಿಯುವಂತಾಗಲಿ. ದಸರೆಯ ಉತ್ಸವ ಯಾವುದೇ ಧರ್ಮಕ್ಕೆ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಜನರಲ್ಲಿರುವ ಪ್ರತಿಭೆ, ಆಸಕ್ತಿ ಅನುಭವ, ಇವುಗಳನ್ನು ಗುರುತಿಸಿ ಬೆಳಕಿಗೆ ತರುವಂತಹ ಕೆಲಸವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮುದಾಯಗಳ ನಡುವೆ ಸಹೋದರತ್ವ ಮನೋಭಾವ ಸಾಂಸ್ಕೃತಿಕತೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಈ ಕವಿಗೋಷ್ಠಿ ಮಾಡಲಿ” ಎಂದ ಅವರು ಕವಿಗೋಷ್ಠಿಯಲ್ಲಿದ್ದ ಎಲ್ಲ ಕವಿಗಳಿಗೂ ಶುಭಾಶಯ ತಿಳಿಸಿದರು.

Advertisements

ಕಾರ್ಯಕ್ರಮದಲ್ಲಿ ಮಾತನಾಡಿದ ನ್ವೀರ್ ಸೇಟ್, “ಮೈಸೂರು ರಾಜರು ಕಲೆ ಮತ್ತು ಸಾಹಿತ್ಯಕ್ಕೆ ನೀಡುತ್ತಿದ್ದ ಕೊಡುಗೆಯನ್ನು ಈಗಿನ ದಸರಾ ಮಹೋತ್ಸವದಲ್ಲೂ ಕೂಡ ನಿರ್ವಹಿಸಿಕೊಂಡು ಬಂದಿದ್ದೇವೆ. ದಸರಾದ ಕವಿಗೋಷ್ಠಿಯಲ್ಲಿ ಉರ್ದು ಕವಿಗೋಷ್ಠಿ ವಿಭಿನ್ನ ಕಾರ್ಯಕ್ರಮವಾಗಿದೆ. ಹೆಚ್ ಸಿ ಮಹದೇವಪ್ಪ ರವರು
ಉರ್ದು ಭಾಷೆಗೆ ಉತ್ತಮ ಪ್ರಾಮುಖ್ಯತೆ ನೀಡುತ್ತಿದ್ದು ಇದರ ಕುರಿತಂತೆ ಈ ಹಿಂದೆಯೂ ಕೂಡ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಕವಿ ಗೋಷ್ಠಿಗೆ ವಿವಿಧ ರಾಜ್ಯಗಳಿಂದ ಖ್ಯಾತ ಕವಿಗಳು ಆಗಮಿಸಿದ್ದು ಈ ಗೋಷ್ಠಿಯು ವಿಶಿಷ್ಟವಾದ ಮತ್ತು ವಿನೂತನವಾದ ಕಾರ್ಯಕ್ರಮವಾಗಿದೆ” ಎಂದರು

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ.ದಾಸೇಗೌಡ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಎಸ್ ವಿಜಯ್ ಕುಮಾರಿ ಕರಿಕಲ್ ,ನಿವೃತ್ತ ಪ್ರೊಫೆಸರ್ ಮುಜಾಫರ್ ಅಸ್ಸಾದಿ, ಬಾಲಿವುಡ್ ನಟರಾದ ರಜಾ ಮುರಾದ್, ಖ್ಯಾತ ಉರ್ದು ಕವಿಗಳಾದ ಬ್ರಾರ್ ಖಾಶೀಫ್,‌ ಜಮೀಲ್ ಅಸ್ಕರ್, ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X