ಮೈಸೂರು | ಮಹಾನಗರ ಪಾಲಿಕೆಯಿಂದ 310 ಕೋಟಿ ರೂ. ತೆರಿಗೆ ಸಂಗ್ರಹ

Date:

Advertisements
  • ತೆರಿಗೆ ಪಾವತಿಸಲು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ನಿವಾಸಿಗಳು
  • ತೆರಿಗೆ ಸಂಗ್ರಹಕ್ಕೆ ನಿವಾಸಗಳು, ವಾಣಿಜ್ಯ ಸಂಸ್ಥೆಗಳಿಗೆ ಅಧಿಕಾರಿಗಳ ಭೇಟಿ

ಮೈಸೂರು ಮಹಾನಗರ ಪಾಲಿಕೆ ಯೋಜಿತ ಅಂಕಿಅಂಶಗಳಿಗಿಂತ ಹೆಚ್ಚಿನ ತೆರಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. 2022-23ನೇ ಸಾಲಿನಲ್ಲಿ 260 ಕೋಟಿ ರೂ.ಗಳ ಯೋಜಿತ ಯೋಜನೆಗೆ ಬದಲಾಗಿ ಮಹಾನಗರ ಪಾಲಿಕೆ 310 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಮೈಸೂರಿನ ನಾಗರಿಕರು ತಮ್ಮ ಆಸ್ತಿ ತೆರಿಗೆ ಪಾವತಿಸಲು ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ಎಂಸಿಸಿ ಘೋಷಿಸಿದ ಶೇ.5ರಷ್ಟು ರಿಯಾಯಿತಿ ಒಂದು ಕಾರಣವಾಗಿದೆ. ಜನರು ಆನ್‌ಲೈನ್ ಮೂಲಕ ತಮ್ಮ ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ಇದು ತೆರಿಗೆ ಸಂಗ್ರಹಕ್ಕೆ ದೊಡ್ಡ ಉತ್ತೇಜನವಾಗಿದೆ. ನಗರದಲ್ಲಿ ಸುಮಾರು 30-34 ಪ್ರತಿಶತದಷ್ಟು ತೆರಿಗೆ ಆನ್‌ಲೈನ್ ಪಾವತಿಗಳಿಂದ ಸಂಗ್ರಹವಾಗಿದೆ.

“ಕಂದಾಯ ಅಧಿಕಾರಿಗಳ ಪ್ರಯತ್ನದಿಂದಾಗಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ” ಎಂದು ಎಂಸಿಸಿ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

Advertisements

“ಅಧಿಕಾರಿಗಳು ತೆರಿಗೆ ಸಂಗ್ರಹಿಸಲು ನಿವಾಸಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಿದ್ದರು. ತೆರಿಗೆ ಪಾವತಿಸಲು ಮೈಸೂರಿನ ಜನರೂ ಕೂಡ ಅಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ. ಇದರಿಂದಾಗಿ ನಾವು ನಿರೀಕ್ಷೆಗಿಂತ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ” ಎಂದು ಹೇಳಿದರು.

ಜಾಹೀರಾತಿನಿಂದ 64 ಕೋಟಿ ರೂ. ಸಂಗ್ರಹ

“ಒಟ್ಟು 310 ಕೋಟಿ ರೂ.ಗಳ ತೆರಿಗೆಯಲ್ಲಿ 169 ಕೋಟಿ ರೂ.ಗಳು ಆಸ್ತಿ ತೆರಿಗೆಯಿಂದ, 64.71 ಕೋಟಿ ರೂ. ಜಾಹೀರಾತು ಮೂಲಕ, 93.09 ಕೋಟಿ ರೂ. ನೀರಿನ ತೆರಿಗೆ ಮೂಲಕ, 14.41 ಕೋಟಿ ರೂ. ನಗರ ಮತ್ತು ಪಟ್ಟಣ ಯೋಜನಾ ಯೋಜನೆಯಿಂದ, 3.52 ಕೋಟಿ ರೂ. ವಾಣಿಜ್ಯ ಕಟ್ಟಡಗಳ ಬಾಡಿಗೆಯಿಂದ, 7.50 ಕೋಟಿ ರೂ. ವ್ಯಾಪಾರ ಪರವಾನಗಿಗಳಿಂದ ಮತ್ತು 32.07 ಕೋಟಿ ರೂ.ಗಳನ್ನು ಇತರ ತೆರಿಗೆಗಳಿಂದ ಸಂಗ್ರಹಿಸಲಾಗಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಧಾರವಾಡ-ಬೆಂಗಳೂರು ಮಾರ್ಗದಲ್ಲಿ ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ಸಂಚರಿಸುವ ನಿರೀಕ್ಷೆ

ತೆರಿಗೆ ಸಂಗ್ರಹಿಸುವಲ್ಲಿ ಅಧಿಕಾರಿಗಳ ಪ್ರಯತ್ನಗಳು ಫಲ ನೀಡಿವೆ. ಕಂದಾಯ ನಿರೀಕ್ಷಕರೊಂದಿಗೆ (ಆರ್‌ಐ) ಹಲವಾರು ಸಭೆಗಳನ್ನು ನಡೆಸಿ ಅದರ ಪ್ರಗತಿಯನ್ನು ಪರಿಶೀಲಿಸಿದ್ದೇನೆ. ಸಮಯಕ್ಕೆ ಸರಿಯಾಗಿ ತೆರಿಗೆ ಸಂಗ್ರಹಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ” ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

“ವಲಯ ಕಚೇರಿಗಳಲ್ಲಿ ನೂಕುನುಗ್ಗಲಂತಹ ಸ್ಥಿತಿ ತಪ್ಪಿಸಲು ತೆರಿಗೆ ಸಂಗ್ರಹಕ್ಕಾಗಿ ಹೊಸ ಕೌಂಟರ್‌ಗಳನ್ನು ತೆರೆಯುವ ಬಗ್ಗೆ ಎಂಸಿಸಿ ಯೋಚಿಸುತ್ತಿದೆ” ಎಂದು ಶಿವಕುಮಾರ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X