ಉಡುಪಿ ಜಿಲ್ಲೆಯ ಅಭಿವೃದ್ಧಿಯ ಯೋಜನೆ ಗಳಿಗೆ ಬಹಳಷ್ಟು ಓತ್ತು ಕೊಟ್ಟಿರುವ ರಾಜ್ಯ ಸರ್ಕಾರದ ಇಂದಿನ ಬಜೆಟ್, ಜಾತಿ, ಮತ, ಧರ್ಮ ನೋಡದೆ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಇವತ್ತಿನ ಬಜೆಟ್ ಮಂಡನೆಯಾಗಿದೆ.
ಉಡುಪಿ ಜಿಲ್ಲೆ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆ ಅಪಾರ, ಇವತ್ತಿನ ಬಜೆಟ್ ನೋಡಿದ ಬಿಜೆಪಿ ಅವರಿಗೆ ಹೊಟ್ಟೆ ಉರಿ ತಡೆದು ಕೊಳ್ಳಲು ಆಗದೆ ಏನೇನೊ ಬಾಯಿಗೆ ಬಂದಂತೆ ಮಾತನಾಡುತ್ತ ಇದ್ದಾರೆ. ನಮ್ಮ ಉಡುಪಿ ಜಿಲ್ಲೆ ಇನ್ನು ಹೆಚ್ಚಿನ ಅಭಿವೃದ್ಧಿ ಆಗುತ್ತಿತ್ತು, ಆದರೆ ಅಭಿವೃದ್ಧಿ ಮಾಡುವ ಮನೋಭಾವ ಇರುವ ಶಾಸಕರು ಇಲ್ಲದೆ ಇರುವುದು ಸಲ್ಪ ಮಟ್ಟಿನ ಹಿನ್ನೆಡೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷರು ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ನಮ್ಮ ಶಾಸಕರು ಅಭಿವೃದ್ಧಿ ಬಗ್ಗೆ ಮಾತನಾಡಿ ಅಂದ್ರೆ ಕೋಳಿ ಪಡಿ ಬಗ್ಗೆ ಮಾತಾಡೋದು, ಧಾರ್ಮಿಕವಾಗಿ ಕೋಳಿ ಪಡಿ, ಕಂಬಳ ಎಲ್ಲವೂ ಬೇಕು, ಆದರೆ ಧಾರ್ಮಿಕ ಆಚರಣೆಗೆ ಹಣ ಬೇಕು, ಉಡುಪಿ ಜಿಲ್ಲೆಯ ಕಾರ್ಮಿಕರಿಗೆ ಕೆಲಸ ಇಲ್ಲದೆ ವರ್ಷ ಗಟ್ಟಲೆ ಕಳೆದಿದೆ, ಮರಳಿನ ಸಮಸ್ಯೆ ಇದೆ, ಅದನ್ನು ಪರಿಣಾಮ ಕಾರಿಯಾಗಿ ಮಾತನಾಡುವುದಿಲ್ಲ, ಬರಿ ಹಿಂದೂ ಮುಸ್ಲಿಂ ಎಂದು ಬೆಂಕಿ ಹಚ್ಚುವ ಬಿಜೆಪಿ ಶಾಸಕರ ಕೆಲಸ ಅಷ್ಟೇ ಎಂದು ಹೇಳಿದ್ದಾರೆ.
ಇವತ್ತು ಉಡುಪಿ ಜಿಲ್ಲೆಗೆ ಬಹಳಷ್ಟು ಅನುದಾನ ಬಜೆಟ್ ನಲ್ಲಿ ನೀಡಿದೆ, ಗ್ಯಾರೆಂಟಿ ಗ್ಯಾರಂಟಿ ಯಾಗಿ ತೋರಿಸಿದೆ ಸರಕಾರ, ಜಿಲ್ಲೆಗೆ ಕೊಟ್ಟಿರುವ ಯೋಜನೆ ಕರ್ನಾಟಕದ ಎಲ್ಲ ಜಿಲ್ಲೆಗೂ ಕೊಟ್ಟಿರುವ ಯೋಜನೆ ಉಡುಪಿ ಜಿಲ್ಲೆಗೂ ಕೊಟ್ಟಿದೆ, ಕಾಂಗ್ರೆಸ್ ಒಂದು ಕ್ಷೇತ್ರ ಗೆಲ್ಲದೆ ಇದ್ದರು ಸರಕಾರ ಅನುದಾನ ಕೊಟ್ಟಿದೆ, ಅದು ಬಿಜೆಪಿ ಶಾಸಕರ ಮುಖ ನೋಡಿ ಅಲ್ಲ, ಕರ್ನಾಟಕದ ಪ್ರತಿ ಜಿಲ್ಲೆಯು ಪ್ರಗತಿ ಹೊಂದಬೇಕು ಎನ್ನುವುದು ಸಿದ್ದರಾಮಯ್ಯ ತತ್ವ ಎಂದು ಹೇಳಿದ್ದಾರೆ.
