ಮೂಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರಿನ ಮೇಲ್ಭಾಗ ಮುರಿದು ಬಿದ್ದಿದ್ದು, ದೈವ ದೇವರನ್ನು ದುರ್ಬಳಕೆ ಮಾಡಿಕೊಂಡಿರುದರಿಂದ ಇಂತಹ ಘಟನೆ ನಡೆಯಲು ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮ – ಧರ್ಮ ಜೋಡಣೆ ಮಾಡಬೇಕು ಎಂದು ದುರ್ಗಾ ಪರಮೇಶ್ವರಿ ದೇವಿ ಬಪ್ಪ ಬ್ಯಾರಿಗೆ ಆಜ್ಞೆ ಮಾಡಿದೆ, ಆ ಪ್ರಕಾರ ಪುರಾತನ ಕಾಲದಿಂದ ಹಾಗೆ ನಡೆದು ಕೊಂಡು ಬಂದಿದೆ, ಆದರೆ ಈ ಬಿಜೆಪಿ ಯವರ ನಕಲಿ ಹಿಂದುತ್ವದಿಂದ ದೇವರೇ ಮುನಿಸಿ ಕೊಂಡು ಬಪ್ಪನಾಡು ರಥ ಧರೆಗೆ ಉರುಳಿದೆ.
ನಮ್ಮ ಹಿಂದಿನ ಹಿರಿಯರು ಹಾಕಿ ಕೊಟ್ಟಿರುವ ಚೌಕಟ್ಟುವಿನಲ್ಲಿ ದೇವತಾ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಮತ್ತು ಶಿಷ್ಟಾಚಾರವಾಗಿ ನಡೆಯುತ್ತಿತ್ತು, ಕರಾವಳಿಯಲ್ಲಿ ಧಾರ್ಮಿಕ ಭಾವನೆಗೆ ಬೆಂಕಿ ಇಟ್ಟ ಬಿಜೆಪಿ ಕೋಮುವಾದಿಗಳಿಂದ ದೇವರೇ ಮುನಿಸಿ ಕೊಂಡು ಇಂತಹ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಸರ್ವ ಧರ್ಮ ಒಂದೇ ಎಂದು ತಿಳಿದು ಶಾಂಭವಿ ನದಿಯ ದಡದಲ್ಲಿ ಹಿಂದೂ ದೇವಿಯ ಆಜ್ಞೆ ಅಂತೆ ಬಪ್ಪನಾಡು ಕ್ಷೇತ್ರ ಉದಯ ಆಗಿದೆ, ಪದೇ ಪದೇ ಬಿಜೆಪಿ ಅವರ ರಾಜಕೀಯ ದುರುದ್ದೇಶದಿಂದ ಹಿಂದೂ ದೇವರ ದುರುಪಯೋಗ ಆಗಿದೆ, ಇದೆ ರೀತಿ ಮುಂದುವರೆದಲ್ಲಿ ಕರಾವಳಿಯ ದೈವ ದೇವರುಗಳು ಮುನಿಸಿ ಕೊಳ್ಳಲಿದೆ, ಇವತ್ತು ರಥ ಧರೆಗೆ ಉರುಳಿದೆ, ಮುಂದೆ ಹಿಂದೂ ದೇವಸ್ಥಾನವೇ ಮಗುಚಿ ಸಾರ್ವಜನಿಕರ ತಲೆ ಮೇಲೆ ಬೀಳಲಿದೆ ಎಂದು ಹೇಳಿದ್ದಾರೆ.
ಕರಾವಳಿ ಜನತೆಯಲ್ಲಿ ವಿನಮ್ರ ವಿನಂತಿ. ರಾಜಕೀಯದಲ್ಲಿ ಪಕ್ಷ ಬೇರೆ ಬೇರೆ ಇರಬಹುದು, ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ನಂಬಬೇಡಿ, ದಕ್ಷಿಣ ಕನ್ನಡ ಕರಾವಳಿಗೆ ಅಭಿವೃದ್ಧಿ ಮುಖ್ಯ, ರಾಮ, ಆಂಜನೇಯ, ಮತ್ತು ಎಲ್ಲ ದೇವರುಗಳನ್ನು ಅತ್ಯಂತ ಶ್ರದ್ಧೆಯಿಂದ ಪೂಜೆ ಪುರಸ್ಕಾರ ಮಾಡಿಕೊಂಡು ಬಂದಿರುವ ನಮ್ಮ ಹಿಂದೂ ಧರ್ಮ, ನಮ್ಮ ಉಡುಪಿ ಮಂಗಳೂರು ಅವಳಿ ಜಿಲ್ಲೆ. ಇತಿಹಾಸವೆ ಸುಳ್ಳು ಬಿಜೆಪಿಯವರ ರಾಜಕೀಯ ದುರುದ್ದೇಶವೆ ಸತ್ಯ ಎಂದು ತಿಳಿದು ಕೊಂಡರೆ ಮುಂದಿನ ದಿನ ಇನ್ನು ಹೆಚ್ಚಿನ ಇಂತಹ ಘಟನೆಗೆ ದಾರಿ ಮಾಡಿಕೊಟ್ಟಂತೆ ಎಂದು ಹೇಳಿದ್ದಾರೆ.