ಪೇಪರ್ ಹರಿಯೋದು, ಪೇಪರ್ ಕಳ್ಳತನ ಮಾಡೋದು, ಸಂತ್ರಸ್ತರು ಕೊಟ್ಟ ಹೇಳಿಕೆಯನ್ನು ಯಾವುದೊ ಭ್ರಷ್ಟಾಚಾರ ಕೇಸಲ್ಲಿ ಅಮಾನತ್ತು ಆದವನಿಂದ ಪೇಪರ್ ನಲ್ಲಿ ಹೇಳಿಕೆಯನ್ನು ತಿರಿಚೋದು ಇವೆಲ್ಲವನ್ನೂ ಉಡುಪಿ ಶಾಸಕರಿಂದ ಕಲಿಬೇಕು, ಉಡುಪಿ ಶಾಸಕರಿಗೆ ಅದು ವಿಧಾನಸಭಯನ್ನು ಕುಸ್ತಿ ಅಖಾಡ ಎಂದು ಭಾವಿಸಿದ ಹಾಗೆ ಇದೆ, ಆರು ತಿಂಗಳು ಶಾಸಕ ಸ್ಥಾನ ಅಮಾನತ್ತು ಆಗಿದ್ದು ಉಡುಪಿ ಜಿಲ್ಲೆಯ ಇತಿಹಾಸ ದಲ್ಲಿ ಪ್ರಥಮ, ಕಳೆದ ಎರಡು ವರ್ಷ ದಿಂದ ಉಡುಪಿ ಕ್ಷೇತ್ರದ ಅಭಿವೃದ್ಧಿ ಶೂನ್ಯ, ಇನ್ನು ಆರು ತಿಂಗಳು ಶಾಸಕರಿಗೆ ಪುರುಸೊತ್ತು ಇದ್ದು ಕೋಳಿ ಪಡಿಯಲ್ಲಿ ಸಮಯ ಕಳೆಯಲಿ, ನಿಮ್ಮಂತ ಶಾಸಕ ರನ್ನು ಪಡೆದ ಉಡುಪಿ ಕ್ಷೇತ್ರದ ಜನತೆಯ ಪುಣ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಉಡುಪಿ ಶಾಸಕ ಯಶ್ಫಾಲ್ ಸುವರ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕರಾವಳಿ ಇತಿಹಾಸದಲ್ಲಿ ಮೀನುಗಾರ ಮಹಿಳೆಯರು ಜೈಲು ಶಿಕ್ಷೆ ಅನುಭವಿಸಿದ್ದು ಇದೆ ಮೊದಲು, ಇದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ಆಡಳಿತ ವೈಫಲ್ಯತೆಗೆ ಹಿಡಿದ ಕನ್ನಡಿ, ಮುಂದಿನ ದಿನಗಳಲ್ಲಿ ಉಡುಪಿ ಜನತೆ ಏನೇನು ನೋಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದ ವಿಧಾನಸಭಾ ಪೀಠದ ಮೇಲೆ ಹತ್ತಿ ರಾಜ್ಯದ ಘನವೆತ್ತ ಪೀಠದ ಗೌರವ ಹಾಳು ಮಾಡಲು ಹೊರಟಿರುವ ಶಾಸಕರನ್ನ ಆರು ತಿಂಗಳು ಅಲ್ಲ, ಅವರ ಮೇಲೆ ಕಾನೂನಿನ ಅಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಬೇಕು. ಈ ಉಡುಪಿ ಶಾಸಕರು ಅಭಿವೃದ್ಧಿ ಮಾತನಾಡಲು ವಿಧಾನಸಭೆಗೆ ಬರುವುದಲ್ಲ, ಬದಲಾಗಿ ಉಡುಪಿಯ ಮರ್ಯಾದೆ ತೆಗೆಯಲು ವಿಧಾನಸಭಗೆ ಹೋಗೋದು ಎಂದು ಹೇಳಿದ್ದಾರೆ.