ಬಿಜೆಪಿ ಶಾಸಕರು ಬಾಯಲ್ಲಿ ಭಾರತಮಾತೆ, ಮನಸಲ್ಲಿ ಹೆಣ್ಮಕ್ಕಳ ವಿಷಯದಲ್ಲಿ ಕೊಳಕು ಮನಸ್ಥಿತಿ ಇದೆ. ಬಿಜೆಪಿಯ ರಾಜ ರಾಜೇಶ್ವರಿ ಕ್ಷೇತ್ರದ ರೌಡಿ ಶಾಸಕ ಮುನಿರತ್ನ ಅವನನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕಲು ಅನರ್ಹ ಶಾಸಕ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ವಿಜಯ ಛಲವಾದಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಮುನಿರತ್ನ ಗುತ್ತಿಗೆದಾರನಿಗೆ ಅವಾಚ್ಯ ಶಬ್ದದಿಂದ ನಿಂದಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಬಿಬಿಎಂಪಿ ಕೆಲವು ಕಾಮಗಾರಿಗಳ ಕೆಲಸ ಮಾಡಿದ ಗುತ್ತಿಗೆದಾರರಿಂದ ಹತ್ತಿರ ಲಂಚ ಕೇಳುವುದು ಅಲ್ಲದೆ ಬೇರೆ ನಾಯಕರಿಗೆ ಅವಾಚ್ಯ ಶಬ್ದ ಕಾನೂನು ಬಾಹಿರ ಪದಬಳಕೆ ಮಾಡಿದ್ದಾರೆ. ಆ ಮೂಲಕ ಸಮಸ್ತ ದಲಿತರ ಭಾವನೆಗೆ ಧಕ್ಕೆ ಉಂಟು ಮಾಡಿರುವುದು ಅವರ ಪದಬಳಕೆಯಲ್ಲೇ ಗೊತ್ತಾಗುತ್ತದೆ. ರಾಜಕೀಯ ರಂಗದಲ್ಲಿ ಬಿಜೆಪಿಯು ಎಂದೂ ದಲಿತರ ಪರವಾಗಿಲ್ಲ ಎಂಬ ಸತ್ಯಾಂಶ ಗೊತ್ತಾಗುತ್ತದೆ ಎಂದರು.

ಬಿಜೆಪಿಯ ಅನೇಕ ನಾಯಕರು ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಗೂ ಅಂಬೇಡ್ಕರ್ ಬಗ್ಗೆ ದಲಿತರ ಬಗ್ಗೆ ತುಂಬಾ ತುಚ್ಛವಾಗಿ ಮಾತಾಡಿದ್ದನ್ನು ನೋಡಿದ್ದೇವೆ. ಅನಂತಕುಮಾರ್ ಹೆಗಡೆ, ಬಸನಗೌಡ ಯತ್ನಾಳ್ ಸೇರಿದಂತೆ ಇನ್ನೂ ಅನೇಕ ನಾಯಕರು ಮಾತನಾಡಿದ್ದನ್ನು ನೋಡಿದ್ದೇವೆ. ಈಗ ಮುನಿರತ್ನ ಅವರು ಕಾನೂನು ಬಾಹಿರ ಪದಬಳಕೆ ಅವರ ಸಂವಿಧಾನಿಕ ಹುದ್ದೆಗೆ ಗೌರವವಲ್ಲ. ಒಬ್ಬ ಒಕ್ಕಲಿಗ ಗುತ್ತಿಗೆದಾರರ ತಾಯಿ ಬಗ್ಗೆ ಹೆಂಡತಿ ಬಗ್ಗೆ ಆ ರೀತಿಯ ಪದಬಳಕೆ ಸಮಸ್ತ ಹೆಣ್ಣು ಕುಲಕ್ಕೆ ಅವಮಾನ. ಇದು ಖಂಡನೀಯ ಎಂದು ವಿಜಯ ಛಲವಾದಿ ಹೇಳಿದರು.
ಸರ್ಕಾರಕ್ಕೆ ಮತ್ತು ಕರ್ನಾಟಕ ಪೊಲೀಸ್ ಇಲಾಖೆಗೆ ಹೃತ್ಪೂರ್ವಕ ಧನ್ಯವಾದಗಳು ಹೇಳುತ್ತೇವೆ. ಕೆಲವೇ ಗಂಟೆಗಳಲ್ಲಿ ಆಂಧ್ರದ ಗಡಿಭಾಗದಲ್ಲಿ ಶಾಸಕನನ್ನು ಬಂಧಿಸಿ, ಜನಸಾಮಾನ್ಯರಲ್ಲಿ ಪೊಲೀಸ್ ಇಲಾಖೆ ಮೇಲೆ ಗೌರವ ಮತ್ತು ನಂಬಿಕೆಯನ್ನು ಹೆಚ್ಚು ಮಾಡಿದೆ ಎಂದರು.
ಜಾತಿ ನಿಂದನೆ ಮಾಡಿದ ಮುನಿರತ್ನ ಅವರು ಶಾಸಕ ಸ್ಥಾನದಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಇರುವದು ಕರ್ನಾಟಕ ರಾಜಕೀಯಕ್ಕೆ ಕಳಂಕ. ಅವರನ್ನ ತಕ್ಷಣ ಶಾಸಕ ಸ್ಥಾನದಿಂದ ಸಭಾಧ್ಯಕ್ಷರು ವಜಾಗೊಳಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಜಿಲ್ಲೆಯಲ್ಲಿ ಕಾಂಗ್ರೆಸ್ ಬಣಗಳ ಗುದ್ದಾಟದಿಂದ ಉಪವಿಭಾಗಾಧಿಕಾರಿ ಮಹೆಬೂಬಿ ವರ್ಗಾವಣೆ?
ಮುನಿರತ್ನ ಅವರಂತೆ ಇನ್ನು ಗದಗ ಜಿಲ್ಲೆಯ ಕೆಲವು ಶಾಸಕರು ದಲಿತರ ಬಗ್ಗೆ ಹೀನಾಯ ಪದಬಳಕೆ ಮಾಡಿದ್ದು, ದಲಿತರ ಮನಸ್ಸಿಗೆ ಘಾಸಿ ಉಂಟು ಮಾಡಿತ್ತು. ಮುಂದಿನ ದಿನಗಳಲ್ಲಿ ದಲಿತರ ಬಗ್ಗೆ ಕೇವಲವಾಗಿ ಮಾತಾಡುವವರಿಗೆ ಮುನಿರತ್ನ ಅವರಿಗೆ ನೀಡುವ ಶಿಕ್ಷೆ ಪಾಠವಾಗಲಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
