ಕೊಡಗು ಜಿಲ್ಲೆ ಮಡಿಕೇರಿ ಕಾರಾಗೃಹಕ್ಕೆ ಟೂತ್ ಪೇಸ್ಟ್ ನಲ್ಲಿ ಮಾದಕ ಪದಾರ್ಥ ತಂದಿದ್ದ ಆರೋಪಿ ಪೋಲೀಸರ ವಶಕ್ಕೆ.
ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಖೈದಿ ಸನಮ್ ಎಂಬಾತನ ಸಹೋದರ ಎಂದು ಸಂದರ್ಶನಕ್ಕೆ ಕೇರಳ ರಾಜ್ಯ,ಕಣ್ಣೂರು ಜಿಲ್ಲೆ, ತಲಶೇರಿ ಮೂಲದ ಸುರಬೀಲ್ (26) ಎಂಬಾತ ದಿನಾಂಕ 04-03-2025 ಕಾರಾಗೃಹಕ್ಕೆ ಬಂದಿರುತ್ತಾನೆ.
ವಿಚಾರಣಾ ಬಂಧಿ ಸನಮ್ ಗೆ ದೈನಂದಿನ ಬಳಕೆಯ ಟೂತ್ ಪೇಸ್ಟ್, ಟೂತ್ ಬ್ರಶ್, ಸ್ನಾನಕ್ಕೆ ಬಳಸುವ ಸಾಬೂನು, ಬಟ್ಟೆ ತೊಳೆವ ಸಾಬೂನು, ನವರತ್ನ ಎಣ್ಣೆ ಮತ್ತು ಕಾರ್ತಿಕ ಶ್ಯಾಂಪ್ ಇತ್ಯಾದಿ ಸಾಮಗ್ರಿ ಕೊಡಲು ತಂದಿದ್ದಾನೆ.
ಸದರಿ ಸಾಮಾಗ್ರಿಗಳನ್ನು ವಿಚಾರಣಾ ಬಂಧಿ ಸನಮ್ ಗೆ ನೀಡುವ ಮೊದಲು ಜಿಲ್ಲಾ ಕಾರಗೃಹ ಅಧೀಕ್ಷರಾದ ಸಂಜಯ್ ಜತ್ತಿ ಪರೀಶಿಲಿಸಿದಾಗ ಟೂತ್ ಪೇಸ್ಟ್ ಟ್ಯೂಬ್‌ನ ಒಳಗೆ ಪೇಸ್ಟ್ ಬದಲು ಕಪ್ಪು ಬಣ್ಣದ ಅಮಲು ಪದಾರ್ಥ ತುಂಬಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಮಾರ್ಚ್ 8 ರಂದು ‘ ರಾಷ್ಟ್ರೀಯ ಲೋಕ ಅದಾಲತ್ ‘
ಕೂಡಲೇ ಎಚ್ಚೆತ್ತ ಪೊಲೀಸರು ಮಾಹಿತಿ ರವಾನಿಸಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 20(ಬಿ ) (¡¡)(ಎ ) ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು 24 ಗ್ರಾಂ ಹ್ಯಾಶಿಶ್ ನಿಷೇಧಿತ ಮಾದಕ ವಸ್ತುವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.