ಸ್ನೇಹಿತರೊಂದಿಗೆ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಬಸವಕಲ್ಯಾಣ ತಾಲೂಕಿನ ಖೇರ್ಡಾ(ಬಿ) ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಗ್ರಾಮದ ಮುಜಾಮಿಲ್ ಖಾಜಾಮಿಯ್ಯ (15) ಮೃತ ಬಾಲಕ.
ಮೃತ ಬಾಲಕ ಕೆಲ ದಿನಗಳಿಂದ ತಾಯಿಯ ತವರೂರು ತಡೋಳಾ ಗ್ರಾಮದಲ್ಲಿ ನೆಲೆಸಿದ್ದನು. ಮಂಗಳವಾರ ಸಂಜೆ ಸ್ನೇಹಿತರೊಂದಿಗೆ ಪಕ್ಕದ ಖೇರ್ಡಾ(ಬಿ) ಗ್ರಾಮದ ಬಳಿಯಿರುವ ಮುಲ್ಲಾಮರಿ ಜಲಾಶಯದ ಹಿನ್ನೀರಿನಲ್ಲಿ ಮೂವರು ಈಜಾಡಲು ತೆರಳಿದ್ದರು. ಬಾಲಕ ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು ಮೇಲೆ ಬರಲಾಗದೇ ಕೊನೆಯುಸಿರೆಳಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬೈಕ್‌ಗೆ ಟಿಪ್ಪರ್ ಲಾರಿ ಢಿಕ್ಕಿ: ದಂಪತಿ ಸಾವು; 8 ವರ್ಷದ ಮಗು ಪಾರು
ಈ ಕುರಿತು ಮುಡುಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಪಿಎಸ್‌ಐ ರೇಣುಕಾ ಹುಡುಗಿ ನೇತ್ರತ್ವದ ಪೊಲೀಸ್ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದರು. ಸ್ಥಳೀಯರ ಸಹಕಾರದೊಂದಿಗೆ ಬಾಲಕನ ಮೃತದೇಹ ಹೊರ ತೆಗೆದರು.