ಶಿವಮೊಗ್ಗ | ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯ; ಆತಂಕದ ಬದುಕು ದೂಡುತ್ತಿರುವ ಸಾವಾಯಿಪಾಳ್ಯ ನಿವಾಸಿಗಳು

Date:

Advertisements

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾವಾಯಿಪಾಳ್ಯ ಜಾಮಿಯಾ ಮಸೀದಿ ಮುಖ್ಯ ರಸ್ತೆ ಓಟಿ ರಸ್ತೆ ವಾರ್ಡ್ ನಂಬರ್ 33 ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಬಲಭಾಗಕ್ಕೆ, ಭದ್ರಾವತಿ-ಶಿವಮೊಗ್ಗ ಮಾರ್ಗದಲ್ಲಿ ಎಡಭಾಗದಲ್ಲಿ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಹಾಗಾಗಿ ನದಿ ದಂಡೆಯಲ್ಲಿರುವ 120 ವರ್ಷಗಳ ಇತಿಹಾಸ ಕಂಡಿರುವ ಜಾಮಿಯಾ ಮಸೀದಿಯ ಗೋಡೆಗಳು ಕುಸಿದಿವೆ.

ಶಿವಮೊಗ್ಗದಲ್ಲಿ ಸುರಿಯುವ ವಿಪರೀತ ಮಳೆಯಿಂದ ನದಿಯ ನೀರು ಪ್ರವಾಹೋಪಾದಿಯಲ್ಲಿ ಹರಿಯುತ್ತಿರುವುದರಿಂದ ಜುಲೈ20ರ ಶನಿವಾರ ಸಂಜೆ 5-30ರ ಸಮಯದಲ್ಲಿ ಜಾಮಿಯಾ ಮಸೀದಿಯ ಶೌಚಾಲಯ, ಸ್ನಾನಗೃಹ ಕುಸಿದಿದೆ. ಎಲ್ಲರೂ ಪ್ರಾರ್ಥನೆಯಲ್ಲಿದ್ದಿದ್ದರಿಂದ ಈ ಸಮಯದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಾಗೆಯೇ ಪ್ರತಿದಿನ ಇಲ್ಲಿ 200ಕ್ಕೂ ಅಧಿಕ ಮಂದಿ ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜಾಮಿಯಾ ಮಸೀದಿ ಜಫ್ರುಲ್ಲ
ಮಸೀದಿಯಾ ಕೋಶಾಧಿಕಾರಿ ಜಫ್ರುಲ್ಲ

ಮಸೀದಿಯಾ ಕೋಶಾಧಿಕಾರಿ ಜಫ್ರುಲ್ಲ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಸೀದಿ ಆಡಳಿತ ಮಂಡಳಿಯಿಂದ ಶಿವಮೊಗ್ಗ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಖುದ್ದಾಗಿ ಭೇಟಿಯಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿ ಮೂರು ದಿನಗಳು ಕಳೆದರೂ ಕೂಡ ಯಾವುದೇ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲೀ ಇತ್ತ ಸುಳಿದಿಲ್ಲ. ಸ್ಥಳ ವೀಕ್ಷಣೆಯೂ ನಡೆದಿಲ್ಲ. ಜನಪ್ರತಿನಿಧಿಗಳ ಬೇಜವಾಬ್ದಾರಿ ಬೇಸರ ತರಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements

“ಮಸೀದಿಯ ಪಕ್ಕದಲ್ಲಿ 110 ವರ್ಷ ಹಳೆಯದಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಇದ್ದು, ಇಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಟ್ಟಿರುವಂಥ ಶಾಲೆ ಇದಾಗಿದೆ.
ಈ ಶಾಲೆಯಲ್ಲಿ ಓದಿದಂತಹ ಅನೇಕರು ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೂ ತರಗತಿಗಳಿದ್ದು, ಪ್ರಸ್ತುತ ಶಾಲೆಯಲ್ಲಿ 62 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದರಿ ಶಾಲೆ ಜಾಗ ವಕ್ಫ್‌ ಜಾಗವಾಗಿರುವ ಕಾರಣ ಸರ್ಕಾರದಿಂದ ಯಾವುದೇ ಅನುದಾನ ಅಥವಾ ಯೋಜನೆಗಳು ದೊರಯುತ್ತಿಲ್ಲ” ಎಂದರು.

ಉರ್ದು ಶಾಲೆ ಮುಖ್ಯಶಿಕ್ಷಕ ಝುಲ್ಫಿಕರ್
ಸವಾಯಿಪಾಳ್ಯ ಉರ್ದು ಶಾಲೆ ಮುಖ್ಯಶಿಕ್ಷಕ ಝುಲ್ಫಿಕರ್

ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿಲಾನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಹಳಷ್ಟು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದರೂ ಕೂಡಾ ಯಾವುದೇ ಅಭಿವೃದ್ಧಿ ಮಾಡಿಕೊಡುತ್ತಿಲ್ಲ. ಯಾಕೆಂದರೆ ಸದರಿ ಜಾಗ ವಕ್ಫ್‌ ಜಾಗವಾಗಿರುವುದರಿಂದ ಯಾವುದೇ ಅನುದಾನ ನೀಡಲು ಆಗುವುದಿಲ್ಲವೆಂದು ತಿಳಿಸಿದ್ದಾರೆ. ಹಾಗಾಗಿ ಖುದ್ದಾಗಿ ಶಾಲೆಗೆ ಶೌಚಾಲಯ ಹಾಗೂ ನಮ್ಮ ಕೈಯಿಂದಾಗುವಷ್ಟು ಸಣ್ಣಪುಟ್ಟ ಕೆಲಸ ಮಾಡಿಕೊಟ್ಟಿದ್ದೇನೆ” ಎಂದರು.

“ಶಾಲೆ ಹಾಗೂ ಶಾಲೆ ಪಕ್ಕ ಅಂಗನವಾಡಿ, ಮಸೀದಿ, ಖಬರಸ್ತಾನ್ ಹಾಗೂ ಸ್ಥಳೀಯ ನಿವಾಸಿಗಳೂ ಕೂಡಾ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇವುಗಳೆಲ್ಲವೂ ನದಿ ದಂಡೆಮೇಲೆ ಇರುವ ಕಾರಣ ನಿತ್ಯವೂ ಶಾಲಾ ಶಿಕ್ಷಕರು ಮಕ್ಕಳು ಸುತ್ತಮುತ್ತಲಿನ ಮನೆಯ ನಿವಾಸಿಗಳು ಎಲ್ಲಿ ನದಿಯ ನೀರು ಹೆಚ್ಚಾಗಿ ಅನಾಹುತ ಸಂಭಾವಿಸಲಿದೆಯೋ ಎಂಬ ಜೀವಭಯದಿಂದ ಬದುಕುತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿಲಾನ್
ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿಲಾನ್

“ಶಾಲೆಗೆ ಬರುವ ಮಕ್ಕಳು ಶಿಕ್ಷಕರು ಜೀವಭಯದಿಂದ ಶಾಲೆಗೆ ಬರುವಂತಹ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಯಾವುದೇ ತಡೆಗೋಡೆಗಳಿಲ್ಲ. ಹಾಗೆಯೇ ಯಾವುದೇ ಸುರಕ್ಷತೆ ವ್ಯವಸ್ಥೆಯೂ ಇಲ್ಲ. ಹಾಗಾಗಿ ಶಾಲೆಗೆ ಈ ರೀತಿ ಸಮಸ್ಯೆಯಾಗುತ್ತದೆಂದು ಈ ಹಿಂದಿನ ಮಹಾನಗರ ಪಾಲಿಕೆ ಸದಸ್ಯರು ನೀರಾವರಿ ಇಲಾಖೆಗೆ ಬಹಳಷ್ಟು ಬಾರಿ ಮನವಿ ಸಲ್ಲಿಸದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸಾವಾಯಿಪಾಳ್ಯಶೌಚಾಲಯ ಕುಸಿತಶೌಚಾಲಯ ಗೋಡೆ ಕುಸಿತಶೌಚಾಲಯ ಕಟ್ಟಡ ಕುಸಿತ

“ನೀರಾವರಿ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಆಶ್ವಾಸನೆ ನೀಡಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಸಿಕೊಟ್ಟಿಲ್ಲ. ಶಿವಮೊಗ್ಗ ಜಿಲ್ಲಾ ಸಂಸದ ರಾಘವೇಂದ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೂ ಬಹಳಷ್ಟು ಬಾರಿ ವಿನಂತಿ ಮಾಡಿದ್ದಾರೆ. ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರಿಗೆ ಸೇರಿದಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ. ಇದರ ಕುರಿತು ₹10 ಕೋಟಿ ವೆಚ್ಚದಲ್ಲಿ ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ ಕಾರ್ಯಗತಗೊಳಿಸಿಲ್ಲ. ಈಗ ಮಳೆಗಾಲವಾಗಿರುವುದರಿಂದ ನದಿಯ ಪ್ರವಾಹ ಹೆಚ್ಚಾಗಿ ಮಣ್ಣು ಕುಸಿತವಾಗಿದೆ. ಇಷ್ಟೆಲ್ಲಾ ಸಮಸ್ಯೆಯಾಗಿದ್ದರೂ ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ” ಎಂದರು.

“ಇಲ್ಲಿ ಶಾಲೆ, ಅಂಗನವಾಡಿ ಎಲ್ಲವೂ ಉಳಿಯುವಂತೆ ಮಾಡಿಕೊಡಬೇಕು. ಈ ತುಂಗಾನದಿ ಸೇತುವೆಯ ಎಡಭಾಗದಲ್ಲಿ ತಡೆಗೋಡೆ ನಿರ್ಮಿಸಿರುವ ಕಾರಣ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಒಂದು ಉತ್ತಮ ಉದ್ಯಾನ ನಿರ್ಮಿಸಿದ್ದಾರೆ. ಪಕ್ಕದಲ್ಲಿ ಸೇತುವೆಯ ಬಲಭಾಗದಲ್ಲಿ ತಡೆಗೋಡೆ ನಿರ್ಮಿಸಿಕೊಟ್ಟರೆ ಶಾಲೆ, ಅಂಗನವಾಡಿ, ಮಸೀದಿ, ದೇವಸ್ಥಾನ, ಮನೆಗಳು ಉಳಿಯಲಿದೆ. ನಿತ್ಯವೂ ಮಣ್ಣುಕೊಚ್ಚಿ ಹೋಗುತ್ತಾ ಸವಕಳಿಯಾಗುತ್ತಿದೆ. ಇದರಿಂದ ಸ್ಥಳೀಯ ಭಯದಿಂದ ಬದುಕುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಕ್ತಾರ್‌ ಅಹಮದ್
ಜಾಮಿಯಾ ಮಸೀದಿ ಕಮಿಟಿಯ ಉಪಾಧ್ಯಕ್ಷ ಮುಕ್ತಾರ್ ಅಹಮದ್

ಜಾಮಿಯಾ ಮಸೀದಿ ಕಮಿಟಿಯ ಉಪಾಧ್ಯಕ್ಷ ಮುಕ್ತಾರ್ ಅಹಮದ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಎರಡು ತಿಂಗಳ ಮಟ್ಟಿಗೆ ಮಳೆ ಪ್ರಮಾಣ ಹಾಗೂ ನದಿಯ ನೀರು ಕಡಿಮೆಯಾಗುವವರೆಗೂ ಶಾಲೆಯ ಮಕ್ಕಳನ್ನು ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲು ತಿಳಿಸಿದ್ದಾರೆ. ಅದರಂತೆ ಈ ಶಾಲೆಯಿರುವ ಜಾಗ ವಕ್ಫ್‌ ಜಾಗವಾಗಿರುವ ಕಾರಣ ಜಾಮಿಯಾ ಮಸೀದಿ ಕಮಿಟಿಯವರು ಶಾಲೆಯನ್ನು ದತ್ತು ಪಡೆದು ನಡೆಸುತ್ತಿದ್ದಾರೆ. ಶಾಲೆಯನ್ನು ದತ್ತು ಪಡೆದಿರುವ ಜಾಮಿಯಾ ಮಸೀದಿಗೆ ಸರ್ಕಾರದಿಂದ ವಾರ್ಷಿಕ ₹16,000 ಬಾಡಿಗೆ ಕೊಡುತ್ತಿದೆ. ಜತೆಗೆ ಜಾಮಿಯಾ ಮಸೀದಿ ಆಡಳಿತ ಮಂಡಳಿಯಿಂದ ಶಾದಿ ಮಹಲ್‌ನಲ್ಲಿ ಶಾಲೆಯ ಮಕ್ಕಳಿಗೆ ವ್ಯವಸ್ಥೆ ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಶಾದಿ ಮಹಲ್‌ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ, ಈ ಜಾಗದಲ್ಲಿ ಸದ್ಯದ ಮಟ್ಟಿನ ವ್ಯವಸ್ಥೆಗೆ ಒಪ್ಪಿಗೆ ನೀಡಿದ್ದಾರೆ” ಎಂದು ತಿಳಿಸಿದರು.

“ಶಾಲೆಯನ್ನು ದತ್ತು ಪಡೆದಿರುವ ಜಾಮಿಯಾ ಮಸೀದಿಗೆ ಸರ್ಕಾರದಿಂದ ವಾರ್ಷಿಕ ₹16,000 ಬಾಡಿಗೆ ಕೊಡುತ್ತಿದೆ ಮತ್ತು ಇದು ಶಿವಮೊಗ್ಗ ಭದ್ರಾವತಿಯಿಂದ ಬಲಭಾಗ ಭದ್ರಾವತಿಯಿಂದ ಶಿವಮೊಗ್ಗ ಬರುವಾಗ ಎಡ ಭಾಗ ಅಂತ ಹಾಕಬೇಕು

“ಪಕ್ಕದಲ್ಲಿರುವ ಅಂಗನವಾಡಿಯಲ್ಲಿ 25 ಮಂದಿ ಮಕ್ಕಳು ದಾಖಲಾಗಿದ್ದಾರೆ. ಅತ್ಯಂತ ಚಿಕ್ಕ ಕೊಠಡಿಯಾಗಿದ್ದು, ಇಲ್ಲಿ ಒಬ್ಬರೇ ಶಿಕ್ಷಕಿ ಇದ್ದಾರೆ. ಒಂದೂವರೆ ವರ್ಷದಿಂದ ಇವರಿಗೆ ಸಹಾಯಕಿಯನ್ನೂ ನೀಡಿಲ್ಲ. ಇಲ್ಲಿಗೆ ಬರುವಂಥ ಮಕ್ಕಳು ಮೂರರಿಂದ ಆರು ವರ್ಷದವರಾಗಿರುವ ಕಾರಣ ಪುಟ್ಟ ಮಕ್ಕಳನ್ನು ನೋಡಿಕೊಂಡು ಅವರಿಗೆ ಅಕ್ಷರಗಳನ್ನು ಕಲಿಸುವುದು ತುಂಬಾ ಕಷ್ಟವಾಗುತ್ತದೆ. ಜತೆಗೆ ತಡೆಗೋಡೆ ಇಲ್ಲದ ಕಾರಣ ಮಕ್ಕಳಿಗೆ ಏನಾದರೂ ಸಮಸ್ಯೆಯಾಗುತ್ತದೆಂಬ ಆತಂಕದಲ್ಲಿಯೇ ಕಳೆಯುವಂತಾಗಿದೆ” ಎಂದರು.

ಶಿಕ್ಷಕಿ ಮೆಹರುನ್ನಿಸಾ
ಅಂಗನವಾಡಿ ಶಿಕ್ಷಕಿ ಮೆಹರುನ್ನಿಸಾ

“ಪೋಷಕರು, ಗರ್ಭಿಣಿಯರು ಅಂಗನವಾಡಿಗೆ ಬರುತ್ತಿರುತ್ತಾರೆ. ಇಂತಹ ಸಮಯದಲ್ಲಿ ಶಿಕ್ಷಕಿಯೇ ಅಡುಗೆ ಮಾಡಬೇಕು, ಮಕ್ಕಳನ್ನೂ ನೋಡಿಕೊಳ್ಳಬೇಕು. ತಡೆಗೋಡೆ ಇಲ್ಲದಿರುವ ಕಾರಣ ಹಾವು, ಹುಳ-ಹುಪಟೆಗಳಿಂದ ಏನಾದರೂ ತೊಂದರೆಯಾದರೆ ಸಮಸ್ಯೆಯಾಗಲಿದೆ. ಜತೆಗೆ ಖಾಸಗಿ ಜಾಗದಲ್ಲಿ ಅಂಗನವಾಡಿ ಇರುವ ಕಾರಣ ತಿಂಗಳಿಗೆ ₹4,000 ಬಾಡಿಗೆ ನೀಡುತ್ತಿದ್ದಾರೆ. ಹಾಗೆಯೇ ಇದು ಅಂಗನವಾಡಿ ಶಿಥಿಲಾವಸ್ಥೆಯಲ್ಲಿದ್ದು, ಯಾವಾಗ ಬೀಳುತ್ತದೆಯೋ ಎಂಬ ಆತಂಕದಲ್ಲಿ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳಿಸುತ್ತಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಹುದುಗಿದ್ದ ಮಣ್ಣಿನ ಗುಡ್ಡೆಯಲ್ಲಿ ನೆಲಮಾಳಿಗೆ ಪತ್ತೆ

ಶಿಕ್ಷಕಿ ಮೆಹರುನ್ನಿಸಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಂಗನವಾಡಿಯ ಕುರಿತು ಬಹುತೇಕ ಸಮಸ್ಯೆಗಳಿರುವ ಕಾರಣ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪಕ್ಕದಲ್ಲಿರುವ ಪಾರ್ಕ್ ಜಾಗದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಂಗನವಾಡಿ ಸ್ಥಳಾಂತರಕ್ಕೆ ಬಹಳಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡಾ ಈವರೆಗೆ ಯಾವುದೇ ಉಪಯೋಗವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸಾವಾಯಿಪಾಳ್ಯ ಜಾಮಿಯಾ ಮಸೀದಿ ವ್ಯಾಪ್ತಿಯಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಕೂಡಾ ಇನ್ನೇನು ಅನಾಹುತಕ್ಕಾಗಿ ಶಿವಮೊಗ್ಗ ಜಿಲ್ಲಾಡಳಿತ ಕಾಯುತ್ತ ಕೂತಿದೆಯೋ ಎಂಬುದನ್ನು ಅರಿಯದಂತಾಗಿದೆ” ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ಹೊರಹಾಕಿದರು.

ಭಾರದ್ವಾಜ್
ರಾಘವೇಂದ್ರ, ಶಿವಮೊಗ್ಗ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸರ್ಕಾರದಿಂದ ಸವಾಯಿ ಪಾಳ್ಯದ ಶಾಲೆಗೆ ಬೇರೆ ಕಡೆ ಜಾಗ ಕೊಡಲು ವ್ಯವಸ್ಥೆ ಮಾಡಿದರೆ ಸರಿಯಾಗುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X