ಅತಿಯಾದ ಮೊಬೈಲ್ ಬಳಕೆ ಮಾಡುವ ಮಕ್ಕಳಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಎಚ್ಚರದಿಂದ ಎಚ್ಚರವಹಿಸಬೇಕು ಎಂದು ಅಖಿಲ ಭಾರತ ಎಐಡಿಎಸ್ಓ ಮಾಜಿ ಅಧ್ಯಕ್ಷ ವಿ.ಎನ್.ರಾಜಶೇಖರ್ ಹೇಳಿದರು.
ಭಾನುವಾರ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಸುಭಾಷ್ ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದರು. ಸರ್ವರಿಗೂ ಶಿಕ್ಷಣ ಸಿಗಬೇಕೆಂದು ಬಯಸಿದ್ದರು. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ, ತರ್ಕಬದ್ಧ ಶಿಕ್ಷಣದಿಂದ ಉನ್ನತ ಚಿಂತನೆಗಳು ಹೊರಹೊಮ್ಮುತ್ತವೆ. ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಮೈಗೂಡಿಸಿಕೊಳ್ಳಬೇಕಿದೆʼ ಎಂದರು.
ಯರಗೋಳ ಪ್ರಾಢ ಶಾಲೆ ಮುಖ್ಯಗುರು ಚಂದ್ರಪ್ಪ ಗುಂಜನೂರ್ ಮಾತನಾಡಿ, ʼಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಮೌಲ್ಯಗಳೊಂದಿಗೆ ಬದುಕು ಉಜ್ವಲಗೊಳಿಸಿಕೊಳ್ಳಬೇಕುʼ ಎಂದು ಹೇಳಿದರು.
ಸರ್ವೋದಯ ಶಾಲೆ ಮುಖ್ಯಗುರು ಇಫ್ತಾಕಾರ್ ಅಲಿ ಮಾತನಾಡಿ, ʼಕ್ರೀಡೆ ಇಲ್ಲದ ಜೀವ ಕೀಟಕ್ಕೆ ಸಮಾನ ಎಂಬ ಮಾತಿದೆ. ಹೀಗಾಗಿ ಕ್ರೀಡೆಯ ಮಹತ್ವ ಅರಿತು ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿರುವುದು ತುಂಬಾ ಪ್ರಶಂಸನೀಯʼ ಎಂದು ತಿಳಿಸಿದರು.
ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕ್ರೀಡಾ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾವ್ಯ ಹಾಗೂ ಚೈತ್ರ ದೇಶಭಕ್ತಿ ಗೀತೆಗಳು ಹಾಡಿದರು.

ಎಐಡಿಎಸ್ಓ ಯಾದಗಿರಿ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ.ಕೆ. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೆಕೆಆರ್‌ಡಿಬಿ ಶೈಕ್ಷಣಿಕ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಛಾಯಾ ದೇಗಾಂವಕರ್ ನೇಮಕ
ಕಾರ್ಯಕ್ರಮದಲ್ಲಿ ಎಐಡಿಎಸ್ಓ ಸದಸ್ಯರಾದ ಶ್ರವಣಕುಮಾರ, ರೆಡ್ದೆಪ್ಪ, ಲಕ್ಷ್ಮಿಕಾಂತ, ನಿಂಗಪ್ಪ, ಕಾವ್ಯ, ಜ್ಯೋತಿ, ಶೋಭಾ, ಭಾಗ್ಯಶ್ರೀ, ದೇವಮ್ಮ, ಅಂಕಿತಾ, ಸುನೀತಾ, ರಂಜಿತಾ, ಮಮತಾ, ವಿಕ್ರಮ್ ಹಾಗೂ ವಿನಾಯಕ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಎಐಡಿಎಸ್ಓ ಶಾಲಾ ಸಮಿತಿ ಸದಸ್ಯರಾದ ಜಗನ್ನಾಥ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ದೇವೀಂದ್ರಮ್ಮ ಸ್ವಾಗತಿಸಿದರು. ಶ್ರವಣಕುಮಾರ ವಂದಿಸಿದರು.