ಬೆಳಗಾವಿ–ಧಾರವಾಡ ಹೊಸ ರೈಲು ಮಾರ್ಗ ಲೈನ್ ಕುರಿತು ಚರ್ಚೆ ಹಾಗೂ ಜಲ ಜೀವನ್ ಮಿಷನ್ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೇಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣನವರು ಬೆಳಗಾವಿಗೆ ಆಗಮಿಸಿಲಿದ್ದಾರೆ.
ಬೆಳಗಾವಿಗೆ 9.15ಕ್ಕೆ ಆಗಮಿಸುವ ಅವರು, 11.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗುವ ರೈಲ್ವೆ ಹಾಗೂ ಜಲ ಜೀವನ್ ಮಿಷನ್ ಯೋಜನೆ ಕುರಿತಾದ ಕಾರ್ಯಕ್ರಮ ಹಾಗೂ ಮಧ್ಯಾಹ್ನ 2ಕ್ಕೆ ನಗರದ ಜೆಎನ್‌ಎಂಸಿ ಆಡಿಟೋರಿಯಂನಲ್ಲಿ ಜರುಗುವ ಕೆಎಲ್ಇ ಸಂಸ್ಥೆಯ 108ನೇ ಸಂಸ್ಥಾಪನಾ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಕ್ರಮ ಶೇಂದಿ ಮಾರಾಟ: ಆರು ಮಂದಿಯ ಬಂಧನ
ಸಂಜೆ 4ರಿಂದ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾತ್ರಿ 8.5ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಬೆಳಗಾವಿ ಬಿಜೆಪಿ ಪ್ರಕಟಣೆ ತಿಳಿಸಿದೆ.