ಪ್ರವಾಸಿ ಸ್ಥಳವಾದ ಉಡುಪಿ ನಗರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತಾದಿಗಳು ಒಂದು ಕಡೆಯಾದರೆ ಮಲ್ಪೆ ಕಡಲು ತೀರ ವೀಕ್ಷಿಸಲು ಪ್ರವಾಸಿಗರು ಸಹ ತುಸು ಹೆಚ್ಚೆ, ಕಳೆದ ಎರಡು ತಿಂಗಳ ಹಿಂದೆ ಇಬ್ಬರು ಅಪ್ರಾಪ್ತ ವಯಸ್ಸಿನ ಮರಿಮಕ್ಕಳ ಜೊತೆ ನೂರು ವರ್ಷ ಪ್ರಾಯದ ಇಳಿ ವಯಸ್ಸಿನ ಅಜ್ಜಿ ತನ್ನ ಮೊಮ್ಮಗನನ್ನು ಹುಡುಕಿಕೊಂಡು ದೂರದ ಬಾಗಲಕೋಟೆಯಿಂದ ಉಡುಪಿಗೆ ಬಂದು ಅಸಾಹಿಕ ಸ್ಥಿತಿಯಲ್ಲಿ ಇದ್ದದ್ದನು ಕಂಡು ಉಡುಪಿಯ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡುರವರು ಅವರಿಗೆ ಆಸರೆಯನ್ನು ನೀಡಿದ್ದ ಸುದ್ದಿ ಉಡುಪಿಯಾದ್ಯಂತ ಮನೆ ಮಾತಾಗಿತ್ತು ಇದೀಗ ಆ 101 ವರ್ಷದ ಅಜ್ಜಿ ಮನೆ ಮಂದಿಯನ್ನು ಸೇರಿದ್ದಾರೆ ಇದಕ್ಕೆ ಶ್ರಮಿಸಿದರ ಸಮಾಜ ಸೇವಕ ನಿತ್ಯಾನಂದ ಒಳಕಾಡುರವರ ಮಾನವೀಯ ಸೇವೆಗೆ ಸಲಾಂ ಹೇಳಲೇ ಬೇಕು.

ಕಳೆದ ವರ್ಷದ ನವಂಬರ್ 17 ರಂದು ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿದ್ದ ಅಪರಿಚಿತ ವೃದ್ಧೆ ಮತ್ತು ಇರ್ವರು ಅಪ್ರಾಪ್ತ ಮಕ್ಕಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದಲ್ಲದೆ, ವೃದ್ಧೆಗೆ ನಗರದ ಕೋರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ಹಾಗೆಯೇ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದರು. ರಕ್ಷಿಸಲ್ಪಟ್ಟವರು ಅಜ್ಜಿ ಮರಿಮೊಮ್ಮಕ್ಕಳಾಗಿದ್ದರು. ಬಾಗಲಕೋಟೆ ಮೂಲದ ಪಕೀರವ್ವ (101), ಹನುಮಂತ (10 ) ಪ್ರೇಮ (16 ) ಎಂದು ತಿಳಿದುಬಂದಿತ್ತು. ಆ ಸಮಯದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಅನುಸಾರ, ಬಾಲಕಿಗೆ ನಿಟ್ಟೂರು ಬಾಲಕೀಯರ ಬಾಲ ಭವನದಲ್ಲಿ ಹಾಗೂ ಬಾಲಕನನ್ನು ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ತಾತ್ಕಲಿಕ ಪುರ್ನವಸತಿ ಕಲ್ಪಿಸಲಾಗಿತ್ತು. ಇದಾದ ಬಳಿಕ ಬಾಗಲಕೋಟೆ ಶಾಲೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾರ್ಗದರ್ಶನದಂತೆ ದಾಖಲುಪಡಿಸಲಾಗಿತ್ತು.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಕಳೆದ ನವೆಂಬರ್ ನಲ್ಲಿ ರಥಬೀದಿ ರಾಘವೇಂದ್ರ ಮಠದ ಬಳಿ, ಅಜ್ಜಿ ಇಬ್ಬರು ಮೊಮ್ಮಕ್ಕಳೊಂದಿಗೆ ಅಳುತ್ತಿದ್ದಿರುವುದನ್ನು ಗಮನಿಸಿದೆ ವಿಚಾರಿಸಿದಾಗ, ಮರಿಮೊಮ್ಮಕ್ಕಳ ತಂದೆಯು ಕಳೆದೊಂದು ವರ್ಷದಿಂದ ಮನೆಗೆ ಬಾರದೆ ಕಾಣೆಯಾಗಿದ್ದು, ಮೊಮ್ಮಗನಿಗೆ ಹಡುಕಾಟ ನಡೆಸಲು ಉಡುಪಿಗೆ ಬಂದಿರುವುದಾಗಿ ವೃದ್ಧೆ ಹೇಳಿಕೊಂಡಿದ್ದರು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಅಜ್ಜಿಯ ಮೊಮ್ಮಕ್ಕಳನ್ನು ಬಾಗಲಕೋಟೆಯಿಂದ ಉಡುಪಿಗೆ ಕರೆಸಿಕೊಂಡು, ಪಕೀರವ್ವ ಅವರನ್ನು ಊರಿಗೆ ಕಳುಹಿಸಲಾಗಿದೆ. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕರಾದ ರೋಶನ್ ಕೆ ಅಮೀನ್ ಮತ್ತು ಪೂರ್ಣಿಮಾ ಅವರ ವಿಶೇಷ ಕಾಳಜಿಯಿಂದ 101 ವರ್ಷದ ಫಕಿರವ್ವ ಮನೆ ಸೇರುವಂತಾಯಿತು. ಹೊಸಬದುಕು ಆಶ್ರಮದ ಸಂಚಾಲಕಿ ರಾಜಶ್ರೀ ವೃದ್ಧೆಯ ಆರೈಕೆ ಎರಡು ತಿಂಗಳ ಸನಿಹ ಮಾಡಿದ್ದರು ಎಂದು ಹೇಳಿದರು.
ಉಡುಪಿಯಲ್ಲಿ ನೂರಾರು ಮಂದಿ ಹೀಗೆ ನಿರ್ಗತಿಗರಾಗಿ ಪ್ರತಿನಿತ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆ ಮಾರುಕಟ್ಟೆ ಇಂತಹ ಹಲವು ಕಡೆಗಳಲ್ಲಿ ಅಸಹಾಯಕರಾಗಿ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಅಂತವರಿಗೆ ನಿತ್ಯಾನಂದ ಒಳಗಾಡಿನಂತವರು ಮಾನವೀಯ ಸೇವೆಗಳನ್ನು ನಿರಂತರ ಒದಗಿಸುತ್ತಿರುತ್ತಾರೆ ಇಂತಹ ಸೇವೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸೋಣ..
