ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ ದಿಕ್ಕಿಲ್ಲದ ವೃದ್ಧೆಯ, ಅಂತ್ಯಸಂಸ್ಕಾರವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಗೌರವಯುತವಾಗಿ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ನೇರವೇರಿಸಿದರು.
ಮೃತ ವೃದ್ಧೆಯ ಹೆಸರು ಪದ್ಮಯ್ಯ ಕಮ್ಮಾರ್, ಗದಗ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಕಾಪುವಿನಲ್ಲಿ ಬಾಡಿಗೆ ಮಾಡಿಕೊಂಡು ಒಂಟಿಯಾಗಿ ಜೀವನ ಸಾಗಿಸಿಕೊಂಡಿದ್ದರು. ಹೀಗಿರುವಾಗ ವೃದ್ಧೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮನೆಯ ಮಾಲಿಕ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದರು. ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಕಾಪು ಪೋಲಿಸರು ವೃದ್ಧೆಗೆ ಸಂಬಂಧಿಕರು ಇಲ್ಲದ ಕಾರಣ, ಅಂತ್ಯಸಂಸ್ಕಾರ ನಡೆಸಲು ಒಳಕಾಡುವರನ್ನು ಸಂಪರ್ಕಿಸಿದರು. ಬಳಿಕ ಒಳಕಾಡುವರು ನೆರವಿಗೆ ಬಂದರು.
ಎ.ಎಸ್.ಐ ಸದಾಶಿವ, ಹೆಡ್ ಕಾನ್ಸಟೇಬಲ್ ಸುಲೋಚನಾ, ಶಿವನಾಯ್ಕ್ ಕಾನೂನು ಪ್ರಕ್ರಿಯೆ ನಡೆಸಿದರು. ಸರಸ್ವತಿ ಸಹಕರಿಸಿದರು. ಅಂತ್ಯಸಂಸ್ಕಾರಕ್ಕೆ ತಗುಲಿದ ಸಂಪೂರ್ಣ ವೆಚ್ಚವನ್ನು ವಿಕಾಸ್ ಶೆಟ್ಟಿ ಭರಿಸಿದರು.