ಉಡುಪಿ | ನಾಗರಿಕ ಸಮಿತಿಯಿಂದ 505 ನೇ ಅನಾಥ‌ ಶವದ ಅಂತ್ಯಸಂಸ್ಕಾರ

Date:

Advertisements

ಉಡುಪಿ ಜಿಲ್ಲಾ ನಾಗರೀಕ ಸಮಿತಿ ಸಂಚಾಲಕ ನಿತ್ಯಾನಂದ‌ ಒಳಕಾಡು ಅವರ ನೇತ್ರತ್ವದಲ್ಲಿ ವಾರಸುದಾರರಿಲ್ಲದ ಶವದ, ಅಂತ್ಯಸಂಸ್ಕಾರವು ಬಹಳ ಗೌರಯುತವಾಗಿ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ನಡೆಸಲಾಯಿತು. ಒಳಕಾಡುವರು ಕಳೆದ‌ 14 ವರ್ಷಗಳಿಂದ ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಗೌರಯುತವಾಗಿ ನಡೆಸುತ್ತಲೇ ಬಂದಿದ್ದು, ಶನಿವಾರ ಒಳಕಾಡುವರು ನಡೆಸಿರುವ ಅಂತ್ಯಸಂಸ್ಕಾರವು 505 ನೇ ಅನಾಥ‌ ಶವದ ಅಂತ್ಯಸಂಸ್ಕಾರವಾಗಿತ್ತು.

ಶವದ ಚಟ್ಟವನ್ನು ಬೀಡಿನಗುಡ್ಡೆಯ ಸರ್ಕಲ್ ಬಳಿಯಿಂದ ರುದ್ರಭೂಮಿಯವರೆಗೆ ಹೊತ್ತು ಸಾಗಿಸಲಾಗಿತ್ತು. ಹಿರಿಯ ನ್ಯಾಯಧೀಶರು, ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ ಆರ್, ಹಾಗೂ ನಗರ ಪೋಲಿಸ್ ಠಾಣೆಯ ಪಿ ಎಸ್ ಐ ಭರತೇಶ್ ಚಟ್ಟಕ್ಕೆ ಹೆಗಲು ನೀಡಿ, ಬಂಧುತ್ವದ ಸಂದೇಶ ಸಾರಿದರು. ಶವಯಾತ್ರೆಯಲ್ಲಿ ಒಳಕಾಡುವರು ತಮಟೆ ಬಾರಿಸಿ ಅಂತಿಮ ಗೌರವ ಸಮರ್ಪಿಸಿದರು.

1006766085

ಜಿಲ್ಲಾ ಆಸ್ಪತ್ರೆಯ ಸರ್ಜನ್ ನಿತ್ಯಾನಂದ ನಾಯ್ಕ್, ನಿವಾಸಿ ವೈದ್ಯಧಿಕಾರಿ ಡಾ ವಾಸುದೇವ್, ವಿಧಿ ವಿಜ್ಞಾನ ತಜ್ಞ ಡಾ. ರಮೇಶ್ ಕುಂದರ್, ನಗರ ಸಭೆ ಆರೋಗ್ಯ ನಿರೀಕ್ಷಕ ಸತೀಶ್ ಮೃತ ವ್ಯಕ್ತಿಗೆ‌ ಹೂಹಾರ ಹಾಕಿ ಅಂತಿಮ ಗೌರವ ಸಮರ್ಪಿಸಿದರು. ನಗರ ಪೋಲಿಸ್ ಠಾಣೆಯ‌ ಠಾಣೆಯ ಪಿ ಎಸ್ ಐ ಭರತೇಶ್, ತನಿಖಾ ಸಹಾಯಕಿ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ವಿಕಾಸ್ ಶೆಟ್ಟಿ, ಪ್ಲವರ್ ವಿಷ್ಣು, ಸತೀಶ್ ಕುಮಾರ್, ನೀತು ನಿಟ್ಟೂರು, ಪ್ರದೀಪ್, ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು.

Advertisements

ಕುಸಿದು ಬಿದ್ದು ಸಾವನಪ್ಪಿದ, ಸುಮಾರು ಅರವತ್ತು ವರ್ಷ ಪ್ರಾಯದ, ಅಪರಿಚಿತ ಗಂಡಸಿನ ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಮೃತನ ವಾರಸುದಾರರ ಪತ್ತೆಗೊಳಿಸಲು ಮಾಧ್ಯಮಗಳಲ್ಲಿ ಪ್ರಕಟಣೆ‌ ಪ್ರಕಟಿಸಲಾಗಿತ್ತು. ನಗರ ಪೋಲಿಸ್ ಠಾಣೆಯ‌ ಪೋಲಿಸರು ಮೃತನ ಸಂಬಂಧಿಕರನ್ನು ಬಹಳವಾಗಿ ಹುಡುಕಾಟ ನಡೆಸಿದ್ದರು. ಮೃತ‌ ವ್ಯಕ್ತಿಯು ಜಯ ಪೂಜಾರಿ ಹೆಸರಿನಿಂದ ಕರೆಯಲ್ಪಡುತ್ತಿದ್ದ ಎನ್ನುವ ವಿಚಾರ ಬಿಟ್ಟರೆ, ಬೇರಾವ ಮಾಹಿತಿ ಮೃತ ವ್ಯಕ್ತಿಯ ಬಗ್ಗೆ ಇರಲಿಲ್ಲ. ವ್ಯಕ್ತಿ ಮೃತಪಟ್ಟು 45 ದಿನಗಳು ಕಳೆದರೂ ಸಂಬಂಧಿಕರು ಸಂಪರ್ಕರ್ಕಿಸದೆ ಇರುವುದರಿಂದ‌ ಕಾನೂನು ಪ್ರಕ್ರಿಯೆಗಳು ನಡೆದಾದ‌ ಬಳಿಕ, ದಫನ‌ರೂಪದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

1006766088
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಜೆಡಿಎಸ್‌ನಿಂದ ತುಂಗೆಗೆ ಬಾಗಿನ ಅರ್ಪಣೆ

ಶಿವಮೊಗ್ಗ, ನಗರ ಮಧ್ಯದಲ್ಲಿ ಹರಿಯುತ್ತಿರುವ ತುಂಗಾನದಿ ಪ್ರತಿವರ್ಷದಂತೆ ಈ ಬಾರಿಯೂ ತುಂಬಿ...

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

Download Eedina App Android / iOS

X