ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಅಪರಿಚಿತ ಶವದ, ವಾರಸುದಾರರು ಪತ್ತೆಯಾಗದೆ ಇರುವುದರಿಂದ, ನಗರ ಪೋಲಿಸ್ ಠಾಣೆ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ನೇತ್ರತ್ವದಲ್ಲಿ ದಫನ ಕಾರ್ಯವು ಬೀಡಿನಗುಡ್ಡೆಯ ದಫನಭೂಮಿಯಲ್ಲಿ ನಡೆಯಿತು. ನಗರಸಭೆ, ಜಿಲ್ಲಾಸ್ಪತ್ರೆ ಸಹಕರಿಸಿತು.
ತಿಂಗಳ ಹಿಂದೆ ನಗರದ ಸಿಟಿ ಬಸ್ಸು ನಿಲ್ದಾಣದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದನ್ನು ದೃಢೀಕರಿಸಿದ್ದರು. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು.
ನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಪುನೀತ್ ಕುಮಾರ್ , ಜಾಸ್ವ, ಸಂತೋಷ್ ಕಾನೂನು ಪ್ರಕ್ರಿಯೆಗಳು ನಡೆಸಿದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸತೀಶ್ ಕುಮಾರ್, ಹರೀಶ್ ಪೂಜಾರಿ, ಪ್ರದೀಪ್ ಅಜ್ಜರಕಾಡು, ವಿಕಾಸ್ ಶೆಟ್ಟಿ ಭಾಗಿಯಾಗಿದ್ದರು. ಪ್ಲವರ್ ವಿಷ್ಣು ಸಹಕರಿಸಿದರು.
