ಶಿವಮೊಗ್ಗ ಜಿಲ್ಲೆಯ ಸಹಕಾರಿ ಬ್ಯಾಂಕ್‌ಗೆ ನಬಾರ್ಡ್ ಸಹಾಯ ಬೇಡ. ರಾಜ್ಯದಲ್ಲಿ 7 ಡಿಸಿಸಿ ಬ್ಯಾಂಕ್‌ಗಳು ರೋಗಪೀಡಿತವಾಗಿವೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ನಬಾರ್ಡ್ ಅವಶ್ಯಕತೆ ಇದೆ ಎಂದು ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಹೇಳಿದರು.
ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಬಾರ್ಡ್ ತಾರತಮ್ಯ ವಿರುದ್ಧ ಮಾತನಾಡಿ ಇವರು, “ಸಹಕಾರಿ ಬ್ಯಾಂಕ್‌ಗಳಿಗೆ ನಬಾರ್ಡ್‌ನಿಂದ ಬರುವ ಸ್ಟ್ಯಾಚ್ಯುಟರಿ ಅನುದಾನ ಕಡಿಮೆಯಾಗಿದ್ದು, ಈ ಕುರಿತು ಸಿದ್ದರಾಮಯ್ಯನವರು ಕೇಂದ್ರ ಸಚಿವರ ಜತೆಗೆ ಮಾತನಾಡಿ, ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿಕೆ ಇಟ್ಟಿದ್ದಾರೆ” ಎಂದು ತಿಳಿಸಿದರು.
“₹5000 ಕೋಟಿ ಬಿಡುಗಡೆ ಮಾಡುವಂತೆ ನಬಾರ್ಡ್‌ಗೆ ಬೇಡಿಕೆ ಇಡಲಾಗಿತ್ತು. ಆದರೆ ಬಿಡುಗಡೆಯಾಗಿದ್ದು ₹2,000 ಕೋಟಿ. ಇದರಿಂದ ನಮ್ಮ ಬ್ಯಾಂಕ್‌ಗೆ ಹೊರೆ ಬೀಳಲಿದೆ. ರಾಜ್ಯ ಸರ್ಕಾರದಿಂದ ₹23 ಕೋಟಿ, ಕೇಂದ್ರ ಸರ್ಕಾರದಿಂದ ₹61 ಕೋಟಿ ಹಣ ನಾಲ್ಕುವರ್ಷದಿಂದ ಬಾಕಿಯಿದೆ” ಎಂದು ದೂರಿದರು.
“ಬೆಳೆವಿಮೆ ಹಾಕಿದ 9 ಸಾವಿರ ಮಂದಿ ರೈತರಿಗೆ ₹19 ಕೋಟಿ ಬೆಳೆವಿಮೆ ಬಂದಿದೆ. ಶಿವಮೊಗ್ಗದಲ್ಲಿ 59 ಸಾವಿರ ಅರ್ಜಿಗಳಿಗೆ ₹22 ಸಾವಿರ ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಆದರೆ ಶಿಕಾರಿಪುರಕ್ಕೆ ₹2 ಕೋಟಿಗೂ ಹೆಚ್ಚು ಹಣ ಬಂದಿದೆ. ಈ ತಾಲೂಕಿನಲ್ಲಿ ₹12 ಸಾವಿರ ಜನ ರೈತರು ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 1200 ಜನ ರೈತರು ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಗೆ ₹22 ಕೋಟಿ ಬಿಡುಗಡೆಯಾಗಿದೆ” ಎಂದರು.
“ಹಾಲು ಉತ್ಪಾದಕರ ಜಿರೋ ಬ್ಯಾಲೆನ್ಸ್‌ನಲ್ಲಿ ಬ್ಯಾಂಕ್ ಅಕೌಂಟ್ ಒಪನ್ ಮಾಡಿ ಎಟಿಎಮ್, ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು. ಮನೆ ಬಾಗಿಲಿಗೆ ಸೇವೆ ನೀಡಲು ಸಿದ್ದರಿದ್ದೇವೆ. ಗ್ರಾಮೀಣ ಭಾಗದ ಪ್ರಾಥಮಿಕ ಬ್ಯಾಂಕ್‌ಗಳ ವ್ಯವಹಾರದ ಮೇಲೆ ಜಿಲ್ಲೆಯ ಮೂರು ಪ್ರೈಮರಿ ಸೊಸೈಟಿ ಮೇಲೆ 3 ಕೋಟಿ ತೆರಿಗೆ ಕಟ್ಟಲು ಸೂಚಿಸಲಾಗಿದೆ. ಇವುಗಳ ಆಸ್ತಿ ಮನನ ಅರಿದರೂ ₹1.5 ಕೋಟಿ ದಾಟಲ್ಲ. ಇದು ಮುಂದುವರೆದರೆ ಪ್ರಾಥಮಿಕ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಆಲಮಟ್ಟಿ ಜಲಾಶಯ; ಅಣೆಕಟ್ಟೆ ಎತ್ತರ ಆಗಲೇಬೇಕು: ಶಾಸಕ ಯಶವಂತರಾಯ ಗೌಡ
ಡಿಸಿಸಿ ಬ್ಯಾಂಕ್‌ನಲ್ಲಿ ಹೆಚ್ಚುಕಡಿಮೆಯಾದರೆ ಮುಖಪುಟದಲ್ಲಿ ಸುದ್ದಿ ಪ್ರಕಟವಾಗುತ್ತೆ!
“ಗುರು ರಾಘವೇಂದ್ರ ಕೋಆಪರೇಟಿವ್ ಸೊಸೈಟಿ ಮುಚ್ಚಿಹೋಯಿತು. ಯಾರೂ ಮಾತನಾಡಲಿಲ್ಲ. ಹೊಸನಗರದಲ್ಲಿ ಈ ಸೊಸೈಟಿಯ ₹120 ಕೋಟಿ ಹಣ ಡೆಪಾಸಿಟ್ ಇತ್ತು. ಈ ಬಗ್ಗೆ ಯಾರೂ ಮಾತನಾಡಲಿಲ್ಲ. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ ಮಾಧ್ಯಮಗಳಲ್ಲಿ ದೊಡ್ಡದಾದ ಹೆಡ್ಡಿಂಗ್‌ನಲ್ಲಿ ಮುಖಪುಟಗಳಲ್ಲೇ ಸುದ್ದಿ ಪ್ರಕಟವಾಗುತ್ತದೆ” ಎಂದು ದೂರಿದರು.