ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ತೆಪ್ಪು ಮಗುಚಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಐವರು ಯುವಕರು ಪ್ರವಾಸಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸದ್ಯ ನಾಪತ್ತೆಯಾಗಿರುವವರಿಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆದಿದೆ.
ಮಧ್ಯಾಹ್ನ ನಡುಗಡ್ಡೆಯಲ್ಲಿ ಊಟಕ್ಕೆ ಹೋಗಿದ್ದ ಚೇತನ ಜೈನ (28) ಸಿಗಂದೂರು, ಸಂದೀಪ (30) ಹುಲಿದೇವರಬನ, ರಾಜು ಗಿನಿವಾರ (28) ಶರಾವತಿಯ ನೀರು ಪಾಲಾಗಿದ್ದರು.
ನಡುಗಡ್ಡೆಯಲ್ಲಿ ಊಟಕ್ಕೆಂದು ಐದು ಜನರು ಹೋಗಿದ್ದರು. ಊಟ ಮುಗಿಸಿ ಆಚೆಯ ದಡದಿಂದ ಈಚೆಗೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ಕಳೆದುಕೊಂಡು ಭಾಗಶಃ ಮುಳುಗಿದೆ.
ಚೇತನ ಜೈನ (28) ಸಿಗಂದೂರು, ಸಂದೀಪ (30) ಹುಲಿದೇವರಬನ, ರಾಜು ಗಿನಿವಾರ (28) ಮುಳುಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಐವರಲ್ಲಿ ಇಬ್ವರು ವಿನಯ ಮತ್ತು ಯಶವಂತ ಈಜಿ ದಡ ಸೇರಿದ್ದಾರೆ. ಕಳಸವಳ್ಳಿ ಬಳಿಯ ಶರಾವತಿ ಹಿನ್ನೀರಿನಲ್ಲಿ ಘಟನೆ ಮಧ್ಯಾಹ್ನ ನಡೆದಿದೆ. ಮೂವರು ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ನೀರುಪಾಲಾಗಿದ್ದ ಮೂವರ ಹುಡುಕಾಟದಲ್ಲಿ ಸಾಗರದ ಅಗ್ನಿಶಾಮಕ ದಳ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕತ್ತಲು ಆವರಿಸಿದ್ದರಿಂದ ಶೋಧಕಾರ್ಯ ಗುರುವಾರ ಬೆಳಿಗ್ಗೆ ಮುಂದುವರೆಯುವ ನಿರೀಕ್ಷೆ ಇದೆ.
