ಜಿಲ್ಲೆಯಲ್ಲಿ ಭಿಕ್ಷಾಟನೆಗೆ ತೊಡಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲ ಅಧಿಕಾರಿಗಳು ಕಿರುಕುಳ ನೀಡಿ ಅಡ್ಡಿಪಡಿಸುತ್ತಿರುವುದನ್ನು ತಡೆಯಬೇಕು ಎಂದು ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತೆಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ʼಲೈಂಗಿಕ ಅಲ್ಪಸಂಖ್ಯಾತರು ಜೀವನೋಪಾಯಕ್ಕೆ ಮುಖ್ಯ ರಸ್ತೆಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದೇವೆ. ಆದರೆ ಕೆಲ ಇಲಾಖೆ ಅಧಿಕಾರಿಗಳು ನಮ್ಮನ್ನು ಬಂಧಿಸಲು ಮುಂದಾಗುತ್ತಿದ್ದಾರೆʼ ಎಂದು ಆರೋಪಿಸಿದರು .
ʼನಮ್ಮ ಸಮುದಾಯಕ್ಕೆ ಭಿಕ್ಷಾಟನೆ ಕಾಲ ಕಾಲಂತರದಿಂದ ಬಂದಿದ್ದು, ವಿವಿಧ ವಲಯಗಳಲ್ಲಿ ಕೇಳಿ ಪಡೆಯುವುದು ನಿರಂತರವಾಗಿ ನಡೆಯುತ್ತಿದೆ. ಭಿಕ್ಷಾಟನೆ ಅಪರಾಧ ಎಂದಾದರೆ ದೇವಸ್ಥಾನಗಳಲ್ಲಿ ಭಕ್ತರಿಂದ, ಸಮಾಜ ಸೇವಾ ಸಂಸ್ಥೆಗಳು, ಸಾರ್ವಜನಿಕರು ದೇಣಿಗೆ ಪಡೆಯುವುದು ಭಿಕ್ಷಾಟನೆ ಅಲ್ಲವೇ ಎಂದು ಪ್ರಶ್ನಿಸಿದರು. ದಾನ ಧಾರ್ಮಿಕ ಕರ್ತವ್ಯವೆಂದರೆ ಕೂಡಲೇ ಭಿಕ್ಷಾಟನೆಯನ್ನು ನಿರಪರಾಧಿಕರಣಗೊಳಿಸಬೇಕುʼ ಎಂದು ಆಗ್ರಹಿಸಿದರು .
ಕೂಡಲೇ ಜಿಲ್ಲಾಡಳಿತ ಭಿಕ್ಷಾಟನೆಯಲ್ಲಿ ತೊಡಗಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಅಧಿಕಾರಿಗಳು ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿರವಾರ ತಹಶೀಲ್ದಾರ್ ಕಚೇರಿಗೆ ತಾಡಪತ್ರಿ ಮೇಲ್ಛಾವಣಿ
ಈ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಕಾರ್ಯಕರ್ತೆಯರು, ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು