ಬೆಂಗಳೂರು ಟೆಕ್ ಸಮ್ಮಿಟ್ | ಒಬ್ಬ ಪ್ರಯಾಣಿಕ-ಒಂದು ಕಾರ್ಡ್ ಶೀಘ್ರ ಲಭ್ಯ: ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್

Date:

Advertisements

ಮೆಟ್ರೋ ರೈಲು, ಕ್ಯಾಬ್, ಬಸ್‌ಗಳು ಸೇರಿದಂತೆ ವಿವಿಧ ಮಾದರಿಯ ಸಂಚಾರ ವ್ಯವಸ್ಥೆಗಳಿಗೆ ದೇಶಾದ್ಯಂತ ಒಬ್ಬ ಪ್ರಯಾಣಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಸೌಲಭ್ಯ ಕೇಂದ್ರದಿಂದ ಶೀಘ್ರವೇ ಜಾರಿಯಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಗುರುವಾರ ಹೇಳಿದರು.

ʼಬೆಂಗಳೂರು ಟೆಕ್ ಸಮ್ಮಿಟ್ʼನ ಎರಡನೇ ದಿನ ʼಭವಿಷ್ಯದ ಸಂಚಾರಕ್ಕಾಗಿ ಸಮನ್ವಯದ, ಸ್ವಾಯತ್ತ, ಹಂಚಿಕೆಯ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆʼ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಇನ್ನು 6 ತಿಂಗಳಲ್ಲಿ ವಿವಿಧ ಮಹಾನಗರಗಳಲ್ಲಿ ಜಾರಿಗೊಳ್ಳಲಿದೆ ಎಂದರು.

‘ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಮೆಟ್ರೊ ರೈಲು ನಿಲ್ದಾಣಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

Advertisements

ʼಊಬರ್ ಇಂಡಿಯಾʼ ಸಂಸ್ಥೆಯ ನಿರ್ದೇಶಕ ಸಂಜಯ್ ಛಡ್ಡಾ, “ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯಾಣವು ಕ್ಯಾಬ್ ನಿಂದ ಬಸ್ ಗಳಿಗೆ ಬದಲಾಗಬೇಕು. ಈ ನಿಟ್ಟಿನಲ್ಲಿ ಊಬರ್ ಸಂಸ್ಥೆಯಿಂದ ಈಗಾಗಲೇ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ವ್ಯವಸ್ಥೆ ಆರಂಭಿಸಲಾಗಿದೆ. ಬೆಂಗಳೂರಿನಲ್ಲೂ ಶೀಘ್ರವೇ ಈ ಸೌಲಭ್ಯ ದೊರಕಿಸಲಾಗುವುದು” ಎಂದು ತಿಳಿಸಿದರು.

uber green

‘2030ರ ವೇಳೆಗೆ ಊಬರ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಶೇಕಡ 100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನೇ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.

ಇದನ್ನು ಓದಿದ್ದೀರಾ? ಸರ್ಕಾರದ ಉಚಿತ ಕೊಡುಗೆಗಳು ಜನರಲ್ಲಿ ಖರೀದಿಸುವ ಶಕ್ತಿ ಹೆಚ್ಚಿಸುತ್ತವೆ: ಸಚಿವ ಪ್ರಿಯಾಂಕ್ ಖರ್ಗೆ

ʼಪರ್ಪಲ್ ಮೊಬೈಲಿಟಿʼ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಪಟವರ್ಧನ್, ಕಳೆದ ಕೆಲವು ವರ್ಷಗಳಲ್ಲಿ ಪ್ರಯಾಣ ಮತ್ತು ಸಂಚಾರ ವ್ಯವಸ್ಥೆ ಪರಿಸರ ಸ್ನೇಹಿಯಾಗುವತ್ತ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಗ್ರಾಹಕರ ಕ್ಯಾಬ್ ಬುಕಿಂಗ್ ವಿಧಾನ, ಸಂಚಾರ ಆಡಳಿತ, ಕಾರ್ಯಾಚರಣೆ, ಸಿಗ್ನಲಿಂಗ್ ವ್ಯವಸ್ಥೆ ಇವೆಲ್ಲವೂ ತಂತ್ರಜ್ಞಾನದ ಬಲದೊಂದಿಗೆ ಸ್ಮಾರ್ಟ್ ಆಗುತ್ತಿವೆ ಎಂದರು.

ʼಬೀಟಾ ಟೆಕ್ನಾಲಜೀಸ್ʼ ಸಂಸ್ಥೆಯ ನಿರ್ದೇಶಕ ಬ್ಲೇಕ್ ಒಪ್ಸಾಹಿ, ಎಲೆಕ್ಟ್ರಿಕ್ ವಿಮಾನಗಳ ಸಂಚಾರಕ್ಕೆ ಭಾರತದಲ್ಲಿ ಹೆಚ್ಚಿನ ಅವಕಾಶವಿದೆ. ಸುಮಾರು 200 ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತ ಅತ್ಯುತ್ತಮ ವೈಮಾನಿಕ ಮೂಲಸೌಕರ್ಯ ಹೊಂದಿದ್ದು, ಭವಿಷ್ಯದಲ್ಲಿ ಖಾಸಗಿ ವಿಮಾನಗಳು ಹಾಗೂ ವಿಮಾನ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಲಿವೆ ಎಂದು ತಿಳಿಸಿದರು. ಪತ್ರಕರ್ತೆ ರಿತು ಸಿಂಗ್ ಸಂವಾದ ನಡೆಸಿಕೊಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X