ಬಸವಕಲ್ಯಾಣದಲ್ಲಿ ನ.25 ಮತ್ತು 26ರಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ ನಡೆಯಲಿರುವ 44ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಸಮಾರಂಭದಲ್ಲಿ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ 44ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, “ಜಗತ್ತಿಗೆ ಪ್ರಪ್ರಥಮ ಸಂಸತ್ತು ಪರಿಕಲ್ಪನೆ ನೀಡಿದ ಹೆಗ್ಗಳಿಕೆ ಕಲ್ಯಾಣದ ನೆಲಕ್ಕಿದೆ. ಜತೆಗೆ ಅಸ್ಪೃಶ್ಯತೆ, ಮೌಢ್ಯತೆ, ಕಂದಾಚಾರ ವಿರುದ್ಧ ಹೋರಾಡಿ ಸಮಸಮಾಜ ನಿರ್ಮಾಣಕ್ಕೆ ಶರಣರು ಹೋರಾಡಿದರು. ಅಂತಹ ಶರಣರ ವಿಚಾರಧಾರೆ ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕೆಂಬ ಉದ್ದೇಶದಿಂದ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಪ್ರತಿವರ್ಷ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಆಯೋಜಿಸಲಾಗುತ್ತಿದೆ” ಎಂದರು.
“ನ.25 ಮತ್ತು 26 ರಂದು ಬಸವಕಲ್ಯಾಣದಲ್ಲಿ ಎರಡು ದಿವಸ ಅರ್ಥಪೂರ್ಣ ಕಾರ್ಯಕ್ರಮ ಜರುಗಲಿವೆ. ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು ಭಾಗಿಯಾಗಲಿದ್ದಾರೆ. ಆದ್ದರಿಂದ ತಾಲೂಕಿನ ಬಸವ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಎರಡು ದಿನದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಸಲಿ ರಾಷ್ಟ್ರೀಯವಾದಿ ಚಳವಳಿ ಹುಟ್ಟು ಹಾಕಿದ್ದು ಬಸವಣ್ಣ: ಡಾ. ಜೆ.ಎಸ್ ಪಾಟೀಲ್
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ದಾಡಗೆ, ಶಾಂತವೀರ ಕೇಸ್ಕರ್, ಕಾಶಿನಾಥ ಲದ್ದೆ, ಮಹಾದೇವ ಬೇಲೂರೆ, ಬಾಬುರಾವ ಬೇಲೂರೆ, ಸಂಗಮೇಶ ಟೆಂಕಾಳೆ, ಕೈಲಾಸ ಪಾಟೀಲ್, ಮಲ್ಲಿಕಾರ್ಜುನ ಗುಮ್ತಾ, ಅಮೃತ ಹೂಗಾರ, ಗೋವಿಂದ ಅಹ್ಮದಾಬಾದೆ, ಗುರುರಾಜ ಸ್ವಾಮಿ, ಬಾಲಾಜಿ ಕುಟಮಲಗೆ ಸೇರಿದಂತೆ ಹಲವರು ಇದ್ದರು.