ಬೆಳಗಾವಿ | ಸಮಾಜ ಬದಲಾವಣೆಗೆ ಕಾವ್ಯ ರಚನೆಯಾಗಲಿ: ನಿರ್ಮಲಾ ಬಟ್ಟಲ

Date:

Advertisements
  • ಸಾಹಿತ್ಯ ಯಾರ ಸ್ವತ್ತು ಅಲ್ಲ, ಅದಕ್ಕೆ ಪದವಿಗಳ ಅಗತ್ಯವೂ ಇಲ್ಲ
  • ಜನಪದರು ಅನಕ್ಷರಸ್ಥರಾಗಿದ್ಧರೂ ಶ್ರೇಷ್ಠ ಕಾವ್ಯಗಳನ್ನು ರಚಿಸಿದ್ಧರು

ಕವಿಯು ಸಮಾಜದ ಕಣ್ಣಾಗಿ ತನ್ನ ಸುತ್ತಲು ನಡೆಯುವ ಘಟನೆಗಳನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಸಾಮಾಜಿಕ ಬದಲಾವಣೆಗೆ ಅಣಿಯಾಗಬೇಕು ಎಂದು ರಾಣಿ‌ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯೆ ನಿರ್ಮಲಾ ಬಟ್ಟಲ ಹೇಳಿದರು

ಬೆಳಗಾವಿ ಜಿಲ್ಲೆ ರಾಮದುರ್ಗದ ಸಿ ಎಸ್ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತುಹಾಗೂ ಕರ್ನಾಟಕ ಸಂಘ ಕಾಲೇಜಿನ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕವನ ರಚಿಸಲು ವಿಶ್ವವಿದ್ಯಾಲಯದ ಪದವಿ, ಪಿಎಚ್ ಡಿ ಗಳೇ ಬೇಕಾಗಿಲ್ಲ, ಸಾಹಿತ್ಯ ಯಾರ ಸ್ವತ್ತು ಅಲ್ಲ, ಅಕ್ಷರಜ್ಞಾನದ ಮೇಲೆ ಹಿಡಿತವಿದ್ದರೆ ಸಾಕು ಯಾರು ಬೇಕಾದರೂ ಕವಿತೆ ರಚಿಸಬಹುದು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಜಟ್ಟಗನ್ನವರ ಮಾತನಾಡಿ, “ಹೊಸ ತಲೆಮಾರಿನ ಯುವ ಪೀಳಿಗೆ ಸೇರಿದಂತೆ ಹಿರಿಯ ಸಾಹಿತ್ಯ ಆಸಕ್ತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕವಿಗೋಷ್ಠಿಗಳನ್ನು ನಡೆಸಲಾಗುವುದು” ಎಂದು ಹೇಳಿದರು

Advertisements

ಉಪನ್ಯಾಸಕ ಪ್ರೊ. ಎಸ್ ಎಮ್ ಸಕ್ರಿ ಮಾತನಾಡಿ ,” ಕಾವ್ಯಕ್ಕೆ ಹರಿತವಾದ ಶಕ್ತಿಯಿದೆ. ಇದಕ್ಕೆ ಉದಾಹರಣೆಗೆ ತ್ರಿಪದಿಗಳು, ವಚನಗಳು ಇಂದಿಗೂ ಪ್ರಸ್ತುತವಾಗಿವೆ” ಎಂದು ಹೇಳಿದರು.

ಕರ್ನಾಟಕ ಸಂಘದ ಎಚ್.ಪಿ ಕಾರ್ಯಾಧ್ಯಕ್ಷ ಹಾಲೊಳ್ಳಿ ಮಾತನಾಡಿ, “ಕನ್ನಡ ನಾಡಿನ ಜನಪದ ಕವಿಗಳು ಅನಕ್ಷರಸ್ಥರಾಗಿದ್ಧರೂ ಕೂಡ ಶ್ರೇಷ್ಠವಾದ ಕಾವ್ಯಗಳನ್ನು ರಚಿಸಿದ್ಧರು. ಇಂದಿನ ಯುವ ಸಮೂಹ ಹೆಚ್ಚಿನ ಅಧ್ಯಯನ ಮೈಗೂಡಿಸಿಕೊಂಡರೆ ಸಾಹಿತ್ಯ‌ ರಚಿಸಲು ಸಾಧ್ಯ” ಎಂದರು

ಕಾರ್ಯಕ್ರಮದಲ್ಲಿ ಪ್ರೋ .ಎಸ್ ಎಸ್ ಸುಲ್ತಾನಪೂರ ಮಾತನಾಡಿದರು. ಸುಮಾರು 30 ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ಕಾರ್ಯದರ್ಶಿ ರಮೇಶ ಬಿಕ್ಕನ್ನವರ, ಕಲ್ಲಪ್ಪ ಪೂಜಾರ, ಡಾ ಎಸ್.ಬಿ.ಸಂಗಮ, ಪ್ರಕಾಶ ತೆಗ್ಗಿಹಳ್ಳಿ, ಪಿ.ಎಂ.ಸಿಂಗಾರಗೊಪ್ಪ, ಸುರೇಶ ಹುಚ್ಚನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X