ಗದಗ ನೆಲದ ಕವಿಗಳು ಅದ್ಭುತ ಸಾಹಿತ್ಯವನ್ನು ಈ ಜಗತ್ತಿಗೆ ಕೊಟ್ಟಿದ್ದಾರೆ: ಉಪನ್ಯಾಸಕ ಎಫ್ ಏನ್ ಹುಡೇದ್

Date:

Advertisements

“ಗದಗ ನೆಲದ ಕವಿಗಳು ಅದ್ಭುತ ಸಾಹಿತ್ಯವನ್ನು ಈ ಜಗತ್ತಿಗೆ ಕೊಟ್ಟಿದ್ದಾರೆ’ ಎನ್ನುವುದು 10ನೇ ಸಾಹಿತ್ಯ ಸಮ್ಮೇಳನದ ಗರಿಮೆಯಾಗಿದೆ. ಇಬ್ಬರು ಕವಿಗಳು ಜನಕಲ್ಯಾಣ ಎನ್ನುವ ಒಂದೇ ಉದ್ದೇಶವನ್ನು ಹೊಂದಿದ್ದರು” ಎಂದು ಉಪನ್ಯಾಸಕ ಎಫ್. ಏನ್ ಹುಡೇದ್ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮೊದಲ ದಿನದ ಗದಗ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ‘ಹಳೇ ಹೊನ್ನು’ ಎಂಬ ಮೊದಲನೇ ಗೋಷ್ಠಿಯಲ್ಲಿ ಕುಮಾರವ್ಯಾಸ- ಚಾಮರಸರ ಕುರಿತು ಉಪನ್ಯಾಸ ನೀಡಿದರು.

“ಇಬ್ಬರು ಕವಿಗಳು ಜನಕಲ್ಯಾಣ ಎನ್ನುವ ಒಂದೇ ಉದ್ದೇಶವನ್ನು ಹೊಂದಿದ್ದರು. ಕುಮಾರವ್ಯಾಸ ಭಾರತ ಬರೆಯಬೇಕಾದರೆ ‘ವೀರನಾರಾಯಣನೇ ಕವಿ; ನಾನು ಲಿಪಿಕಾರ’ ಎಂದು ತನ್ನ ಕೃತಿ ‘ಗದುಗಿನ ಕುಮಾರವ್ಯಾಸ ಭಾರತ’daಹೇಳಿದ್ದಾನೆ. ಕವಿ ಚಾಮರಸ ‘ಆಸೆಗೆ ಸತ್ತದ್ದು ಕೋಟಿ, ಆಮಿಷಕ್ಕೆ ಸತ್ತದ್ದು ಕೋಟಿ; ನಿಮಗಾಗಿ ಸತ್ತವರು ಒಬ್ಬರನ್ನು ಕಾಣೇ ಗುಹೇಶ್ವರ’ ಎಂದು ಹೇಳಿದ್ದಾರೆ. ಆದ್ದರಿಂದ ಹೇಳುವ ವಿಧಾನ ವಿಭಿನ್ನವಾದರೂ ಉದ್ದೇಶ ಒಂದೇ ಆಗಿದೆ. ಕುಮಾರವ್ಯಾಸ ಭಾರತದಲ್ಲಿ ಧರ್ಮಾಧರ್ಮಗಳ ಸಂಘರ್ಷವನ್ನೇ ಕಾಣುತ್ತೇವೆ. ಕುಮಾರವ್ಯಾಸರು ಕೃಷ್ಣನನ್ನು ಮುಂದಿಟ್ಟುಕೊಂಡು ಧರ್ಮ ಕಾರಣಕ್ಕಾಗಿ ಲೋಕಕಲ್ಯಾಣವನ್ನು ಬಯಸುತ್ತಾರೆ’ ಎಂದರು.

Advertisements

ನಯಸೇನ-ದುರ್ಗಸಿಂಹರ ಕುರಿತು ಉಪನ್ಯಾಸ ನೀಡಿದ ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, “ರೋಣದ ದುರ್ಗಸಿಂಹ, ಮುಧೋಳದ ರನ್ನ, ಅಣ್ಣಿಗೇರಿಯ ಪಂಪ,  ಲಕ್ಕುಂಡಿಯ ಅತ್ತಿಮಬ್ಬೆ,  ಕುಮಾರವ್ಯಾಸ, ನಾರಾಯಣಪುರದ ಚಾಮರಸ, ಮುಳಗುಂದದ ನಯಸೇನ,  ಹೀಗೆ 10ನೇ ಶತಮಾನದಿಂದ ಈಗಿನವರೆಗೂ ಕಾಣಬಹುದು” ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗಜೇಂದ್ರಗಡದ ಎಫ್.ಎಸ್.ಕರಿದುರನವರ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ, ಕೋಟುಮಚಗಿಯ ವಿದ್ಯಾಧರ ದೊಡ್ಡಮನಿ, ಆರ್.ಕೆ.ಬಾಗವಾನ, ರಮಾಕಾಂತ ಕಮತಗಿ, ವಿ.ವಿ.ಅಣ್ಣಿಗೇರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X