ರಾಜಧಾನಿ ಬೆಂಗಳೂರಿನ ಪಕ್ಕದ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 56 ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ 30 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ, ಬೈಕ್ ಕಳ್ಳತನ, ಸರಗಳ್ಳತ, ಗಾಂಜಾ ಸಾಗಾಣಿಕೆ ಸೇರಿದಂತೆ ವಿವಿಧ ಪ್ರಕರಣಗಳು ಸೇರಿವೆ” ಎಂದು ಹೇಳಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಂಕ್‌ನಲ್ಲಿ ಸಾಲಕೊಡಿಸುವುದಾಗಿ ನಂಬಿಸಿ ಮೋಸದಿಂದ ಚಿನ್ನಾಭರಣ ಬಿಚ್ಚಿಸಿಕೊಂಡು ಪರಾರಿಯಾಗಿದ್ದ, ಹೊಟ್ಟೆ ಮಂಜ ಎಂಬಾತನನ್ನು ಬಂಧಿಸಿ, 25.95 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಹಾಗೂ ದ್ವಿಚಕ್ರ ವಾಹನ, ಮಧುರೆ ಹೋಬಳಿಯಲ್ಲಿ 40 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿದ್ದ, ಸಂತೋಷ್ನನ್ನು ಬಂಧಿಸಿ, ಎರಡು ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನ, ಇಸ್ತೂರು ಪಾಳ್ಯದ ಕಳವು ಪ್ರಕರಣದಲ್ಲಿ ಇದೇ ಗ್ರಾಮದ ಅವಿನಾಶ್ ಎಂಬಾತನನ್ನು ಬಂಧಿಸಿ, ₹8.25 ಲಕ್ಷ ಮೌಲ್ಯದ ಚಿನ್ನದ ಬಳೆ ಹಾಗೂ ಉಂಗುರ ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಲಾರ್ ಸಿಸ್ಟಮ್ ಕಳ್ಳತನದ ಆರೋಪಿಗಳಾದ ಕಾರ್ತಿಕ್, ಯೋಗೀಶ್, ಪ್ರಭಾಕರ್, ಮಧುಸೂದನ್, ಸಾದನಹಳ್ಳಿ ಗಂಗಾರೆಡ್ಡಿ ಎಂಬುವವರನ್ನು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಸೋಲಾರ್ ಸಿಸ್ಟಮ್, ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕಲ್ಲುಕೋಟೆ ಗ್ರಾಮದ ನರಸಿಂಹರಾಜು, ಗೌರಿಬಿದನೂರು ತಾಲ್ಲೂಕಿನ ಮರಿಮಾಕನಹಳ್ಳಿ ಗ್ರಾಮದ ಸುಮನ್ ಎಂಬುವವರನ್ನು ವಶಕ್ಕೆ ಪಡೆದಿದ್ದು, ₹2.95 ಲಕ್ಷ ಮಾಲ್ಯದ ಚಿನ್ನದ ಮಾಂಗಲ್ಯ ಸರ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಐದು ಲಕ್ಷ ಮೌಲ್ಯದ ಕಬ್ಬಿಣದ ಕಂಬಿಗಳನ್ನು ಕದ್ದ ಮಧುಪ್ರಶಾಂತ್, ನಾಗರಾಜು, ಈಶ್ವರ್, ಅಶೋಕ್ ಎಂಬುವವರನ್ನು ಬಂಧಿಸಲಾಗಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ಹಂಚಿಕೊಂಡರು.
ಇದೇ ವೇಳೆ ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿದ್ದ ಪೊಲೀಸ್ ಸಿಬ್ಬಂದಿಗೆ ಪ್ರಶಂಶ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್‌ಪಿ ರವಿ, ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳಾದ ಅಮರೇಶ್‌ಗೌಡ, ಮುನಿಕೃಷ್ಣ, ಎಂ.ಆರ್.ಹರೀಶ್, ವೀರೇಂದ್ರಪ್ರಸಾದ್, ದಿಲೀಪ್‌ಕುಮಾರ್, ಪ್ರವೀಣ್ ಎಸ್.ನಾಯಕ್ ಇದ್ದರು.