ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಊಟ; ವಿದ್ಯಾರ್ಥಿಗಳ ಪ್ರತಿಭಟನೆ

Date:

Advertisements

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದಲ್ಲಿರುವ ಅಂಬೇಡ್ಕರ್ ವಸತಿ ನಿಲಯ ಪಿಜಿ2 ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದರ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳು ಊಟದ ಕೊಠಡಿಯಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

”ಬಹಳ ದಿನಗಳಿಂದ ಹಾಸ್ಟೆಲ್‌ನಲ್ಲಿ ನೀಡುತ್ತಿರುವ ಊಟ ಕಳಪೆಯಾಗಿದೆ. ಈ ಬಗ್ಗೆ ಹಲವು ಬಾರಿ ವಾರ್ಡ್‌ನ್‌ಗೆ ತಿಳಿಸಿದರೂ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಸ್ಟೆಲ್‌ನಲ್ಲಿ ಊಟದ ವ್ಯವಸ್ಥೆ ಬಹಳ ಕೆಟ್ಟದ್ದಾಗಿದೆ. ಶುಚಿ ರುಚಿ ಊಟ ಸಿಗುತ್ತಿಲ್ಲ” ಎಂದು ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಬೆಂವಿವಿ ವಿದ್ಯಾರ್ಥಿ ಬಸವಣ್ಣ, “ಬಳ್ಳಾರಿಯಿಂದ ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡಲು ಬಂದಿದ್ದೇನೆ. ನಾವಿರುವ ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಊಟ ನೀಡುತ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಕಳೆದ ಒಂದು ತಿಂಗಳಿನಿಂದ ದೂರು ನೀಡುತ್ತಿದ್ದೇವೆ. ಆದರೆ, ಯಾರು ತಲೆಕೆಡಿಸಿಕ್ಕೊಳ್ಳುತ್ತಿಲ್ಲ. ಅಂಬೇಡ್ಕರ್ ವಸತಿ ನಿಲಯ ಪಿಜಿ2 ನಲ್ಲಿ ಒಟ್ಟು 700 ವಿದ್ಯಾರ್ಥಿಗಳಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಊಟದ ದರ ₹90 ಇದೆ. ಒಂದು ದಿನಕ್ಕೆ ಅಂದಾಜು ₹63,000 ಖರ್ಚು ಮಾಡಬೇಕಾಗುತ್ತದೆ. ಇಷ್ಟು ಖರ್ಚು ಮಾಡಿಯೂ ಕೂಡ ನಮಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ” ಎಂದು ದೂರಿದರು.

Advertisements

“ಅಡುಗೆ ಮಾಡುವ ಕೊಠಡಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ದನದ ಕೊಟ್ಟಿಗೆ ರೀತಿ ಅಡುಗೆ ಕೋಣೆಯನ್ನು ಇಟ್ಟುಕೊಂಡಿದ್ದಾರೆ. ಅಡುಗೆಯಲ್ಲಿ ಹುಳುಗಳು ಬಿದ್ದಿರುತ್ತವೆ. ಆಹಾರ ಧಾನ್ಯಗಳನ್ನು ಸ್ವಚ್ಛ ಮಾಡುವುದಿಲ್ಲ. ವಾರ್ಡನ್ ಕೆಲವರಿಗೆ ಬಾಳೆಹಣ್ಣು, ಮೊಟ್ಟೆ ಸೇರಿದಂತೆ ಹೆಚ್ಚಿನ ಆಹಾರ ನೀಡುತ್ತಾರೆ. ಬೇರೆ ಯಾವುದೇ ವಿದ್ಯಾರ್ಥಿ ಕೇಳಿದರೆ, ಅವರ ವಿರುದ್ಧ ಉಳಿದವರನ್ನು ಎತ್ತಿ ಕಟ್ಟುತ್ತಾರೆ. ಎಂತಹ ದೊಡ್ಡ ಸಮಸ್ಯೆ ಇದ್ದರೂ ಇಲ್ಲಿ ಯಾವುದೇ ಅಧಿಕಾರಿಗಳು ಬರಲ್ಲ, ನೋಡುವುದೂ ಇಲ್ಲ” ಎಂದರು.

“ನಿತ್ಯ 30 ರಿಂದ 50 ಜನಕ್ಕೆ ಊಟ ಸಿಗುತ್ತಿಲ್ಲ ಮತ್ತು ಕಳಪೆ ಊಟ ನೀಡುತ್ತಿದ್ದಾರೆ. ಈ ಬಗ್ಗೆ ವಾರ್ಡನ್‌ಗೆ ಕರೆ ಮಾಡಿ ಮಾತಾಡಿದರೆ ಅವರು ಏನು ಮಾತಾಡುವುದಿಲ್ಲ. ಹಾಗಾಗಿ, ಸೆ. 5ರಂದು ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೂ ಊಟದ ಕೊಠಡಿಯಲ್ಲಿ ಪ್ರತಿಭಟನೆ ಮಾಡಿದೆವು. ಆದರೆ, ಯಾರೊಬ್ಬ ಅಧಿಕಾರಿಗಳು ಬರಲಿಲ್ಲ” ಎಂದು ಈ ದಿನ.ಕಾಮ್‌ಗೆ ವಿದ್ಯಾರ್ಥಿ ರಮೇಶ್ ಹೇಳಿದರು.

ಈ ಸುದ್ದಿ ಓದಿದ್ದೀರಾ?ಬೆಂಗಳೂರಿನ 100 ಕಡೆ ಏಕಕಾಲದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ

“ದೂರದ ಊರಿನಿಂದ ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡಲು ಬಂದಿದ್ದೇವೆ ಎಂದು ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಇಷ್ಟಾದರೂ ಕಳಪೆ ಊಟ ಕೊಡುತ್ತಿದ್ದಾರೆ. ಪ್ರತಿಭಟನೆ ದಿನ 50 ಜನ ಹುಡುಗರು ಉಪವಾಸ ಇದ್ದರು. ಹಾಸ್ಟೆಲ್ ಊಟದ ಸಮಸ್ಯೆಯಲ್ಲದೇ, ಶೌಚಾಲಯದ ಸಮಸ್ಯೆ, ಸ್ವಚ್ಛತೆ ಸಮಸ್ಯೆ ಎಲ್ಲವೂ ಇದೆ. ಆದರೂ ಸಮಸ್ಯೆ ನಿವಾರಿಸುವವರು ಯಾರು ಇಲ್ಲ. ಬೆಂವಿವಿ ಕುಲಪತಿಗಳು ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನೆ ಮಾಡಿದೆವು. ಆದರೆ ಅವರು ಬರಲಿಲ್ಲ, ಪೊಲೀಸರನ್ನು ಕರೆಸಿದರು” ಎಂದು ವಿವರಿಸಿದರು.

“ಹಾಸ್ಟೆಲ್‌ನಲ್ಲಿ ರೌಡಿಸಂ ಮಾಡುವ ಒಂದು ವಿದ್ಯಾರ್ಥಿ ಗುಂಪಿದೆ. ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಅವರ ರೂಮ್‌ಗಳಿಗೆ ತೆರಳಿ ಹಣ್ಣು, ಮೊಟ್ಟೆ ಕೊಡುವುದು. ಸಾಮಾನ್ಯ ವಿದ್ಯಾರ್ಥಿಗೆ ಈ ರೀತಿಯ ಆತಿಥ್ಯ ನೀಡುವಂತಿಲ್ಲ. ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡಬೇಕು” ಎಂದರು.

“ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಊಟದ ಸಮಸ್ಯೆ ಇದೆ. ನಮ್ಮ ಪಿಜಿ2 ವಸತಿ ನಿಲಯದಲ್ಲಿ ಹಲವು ವಿದ್ಯಾರ್ಥಿಗಳಿಗೆ ರಾತ್ರಿ ಮತ್ತು ಬೆಳಗಿನ ಜಾವ ಊಟ ಸಿಗುವುದಿಲ್ಲ. ಎಷ್ಟು ದೊಡ್ಡ ಸಮಸ್ಯೆಯಾದರೂ ವಿಶ್ವವಿದ್ಯಾಲಯದ ಆವರಣದಲ್ಲಿರುವ ಯಾವುದೇ ಅಧಿಕಾರಿಗಳು ಬಂದು ವಿಚಾರಿಸುವುದಿಲ್ಲ. ಪ್ರಭಾಕರ ಎಂಬುವವರು ವಾರ್ಡನ್ ಆಗಿ ಬಂದ ಮೊದಲ ಎರಡು ವರ್ಷ ಮೂಲಭೂತ ಸೌಲಭ್ಯಗಳೆಲ್ಲವನ್ನೂ ನೀಡಿದರು. ದಿನಕಳೆದಂತೆ ವಿದ್ಯಾರ್ಥಿಗಳ ಬಲಹೀನತೆ ಅರಿತುಕೊಂಡು ಗೂಂಡಾಗಿರಿ ಮಾಡುವ ವಿದ್ಯಾರ್ಥಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು. ಹಾಸ್ಟೆಲ್‌ಗೆ ಬರುತ್ತಿದ್ದ ಎಲ್ಲ ಸೌಲಭ್ಯ ಹಾಗೂ ಗುಣಮಟ್ಟವನ್ನು ಕಡಿಮೆ ಮಾಡುತ್ತ ಬಂದರು” ಎಂದು ವಿದ್ಯಾರ್ಥಿ ರಾಮಲಿಂಗ ಅವರು ಈ ದಿನ.ಕಾಮ್‌ಗೆ ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X