ಮೈಸೂರು | ಕುವೆಂಪು ಸಂದೇಶಗಳ ಓದಿನಿಂದ ಮೌಢ್ಯರಹಿತ ಸಮಾಜ ಕಟ್ಟಲು ಸಾಧ್ಯ: ಬಿ.ಟಿ ಲಲಿತಾ ನಾಯಕ್

Date:

Advertisements

ಮಹಾಕವಿ ಕುವೆಂಪು ಅವರ ಸಂದೇಶಗಳನ್ನು ಓದಿ, ನಮ್ಮ ಬದುಕಿನಲ್ಲಿ ಅಳವಡಿಸುವುದರಿಂದ ಅಸಮಾನತೆ, ಅಸಹಿಷ್ಣುತೆ, ಮೂಡನಂಬಿಕೆ, ಅನಾಚಾರದಂತಹ ಮಾನವ ವಿರೋಧಿ ಅನಿಷ್ಟ ಮತ್ತು ಮೌಢ್ಯಗಳಿಂದ ಹೊರಬರಲು ಸಾಧ್ಯ ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್‌ ತಿಳಿಸಿದರು.

ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರ ʼವಿಚಾರ ಕ್ರಾಂತಿಗೆ ಆಹ್ವಾನʼ ಮತ್ತು ʼಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿʼ ಎಂಬ ಎರಡೂ ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷಗಳು ತುಂಬಿವೆ. ಈ ನೆನಪಿನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಕ್ರಾಂತಿ ಕಹಳೆ–50’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನಮ್ಮ ದೇಶದಲ್ಲಿರುವ ಅಷ್ಟೂ ಜನರು ಕುವೆಂಪು ಅವರ ಒಂದೊಂದು ಸಾಲು ಓದಿದರೂ ಇನ್ನೂ ಉಳಿಯಬಹುದಾದಷ್ಟು ಕುವೆಂಪುರವರ ಬರಹದಲ್ಲಿವೆ. 50 ವರ್ಷಗಳ ಹಿಂದೆ ನಮ್ಮ ಮುಂದಿಟ್ಟ ಕ್ರಾಂತಿಕಾರಿ ಚಿಂತನೆಗಳು ಈಗಲೂ ಪ್ರಸ್ತುತ ಎಂದು ಬಿ.ಟಿ. ಲಲಿತಾ ನಾಯಕ್‌ ಅಭಿಪ್ರಾಯಪಟ್ಟರು. ಮತೀಯವಾದಿಗಳು ಕುವೆಂಪು ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ, ಮಾತಿಗೆ ಅವಕಾಶವಿಲ್ಲದಷ್ಟು ಪಾಂಡಿತ್ಯ, ಓದು, ವಿವೇಕ ಕುವೆಂಪುರವರಿಗೆ ಇತ್ತು. ಅವರು ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿದ್ದರು. ಹಾಗಾಗಿಯೇ ಮತ- ಮೌಢ್ಯಗಳನ್ನು ವಿರೋಧಿಸಿದ್ದರು” ಎಂದು ಲಲಿತಾ ನಾಯಕ್‌ ಹೇಳಿದರು.

Advertisements

“ಕೆರಗೋಡಿನ ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಅನುಮತಿ ಪಡೆದು, ಭಗವಧ್ವಜ ಹಾರಿಸಿ ಆತಂಕ ಸೃಷ್ಟಿಸಿದ ಘಟನೆಯನ್ನು ಖಂಡಿಸಿದ ಅವರು, ಇದರಲ್ಲಿ ಭಾಗಿಯಾದವರು ನಮ್ಮ ಶೂದ್ರ ಯುವಜನರು. ಆ ಯುವಕರು ಕುವೆಂಪು, ಅಂಬೇಡ್ಕರ್, ಲೋಹಿಯಾರವರನ್ನು ಓದಿಕೊಂಡಿದ್ದರೆ ಆ ರೀತಿ ಮಾಡುತ್ತಿರಲಿಲ್ಲ ಎಂದರು. ಕುವೆಂಪುರವರನ್ನು ಆಸ್ತಿಯನ್ನಾಗಿ, ಸಂಪತ್ತಾಗಿ ಮಾಡದಿದ್ದರೆ ನಾವು ಹಿಂದಕ್ಕೆ ಹೋಗುತ್ತೇವೆ. ಮೌಢ್ಯ ಕಳಿಯಬೇಕು ಎಂದಾದರೆ ಕುವೆಂಪು ಅವರ ಸಂದೇಶಗಳನ್ನು ಪಾಲಿಸೋಣ” ಎಂದು ಕರೆಕೊಟ್ಟರು.

‘ಕವಿವಾಣಿಯಿಂದ ಕರ್ನಾಟಕ ಮಾದರಿಯಕೆಗೆ’ ಎಂಬ ಆಶಯದೊಂದಿಗೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ. ನಾರಾಯಣ ವಹಿಸಿದ್ದರು. ಚಿಂತಕರಾದ ಎಲ್. ಎನ್. ಮುಕುಂದರಾಜ್, ಡಾಲಿ ಧನಂಜಯ್ ಯುವ ಪ್ರತಿನಿಧಿಗಳಾದ ಕೊಡಗಿನ ಡಾ. ಕಾವೇರಿ, ಬೆಂಗಳೂರಿನ ಕಾವ್ಯಶ್ರೀ, ಔರಾದ್‌ʼನ ಬಾಲಾಜಿ ಕುಂಬಾರ್, ಮಡಿಕೇರಿಯ ಡಾ.ಮುಸ್ತಫಾ ಕೆ.ಎಚ್., ಮಹೇಶ ಸಿ., ಮೈಸೂರು ವಿ.ವಿ ಸಂಶೋಧಕರಾದ ಧನಲಕ್ಷ್ಮಿ, ಅಹಿಂದ ಜವರಪ್ಪ, ಪ್ರಸನ್ನ ಗೌಡ ಮತ್ತು ಜಾಗೃತ ಕರ್ನಾಟಕದ ಸಂಚಾಲಕ ಬಿ.ಸಿ. ಬಸವರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಲಿತ ವಿದ್ಯಾರ್ಥಿ ಒಕ್ಕೂಟ, ಮಾನಸ ಗಂಗೋತ್ರಿ; ಮೈಸೂರು ವಿವಿ ಸಂಶೋಧಕರ ಸಂಘ, ಸಮಾಜ ಪರಿವರ್ತನ ಜನಾಂದೋಲನ, ಮೈಸೂರು; ಕರುನಾಡ ರಕ್ಷಣಾ ವೇದಿಕೆ, ಮೈಸೂರು; ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ (ರಿ), ಕರ್ನಾಟಕ ಕಾವಲು ಪಡೆ (ರಿ), ಆಕೃತಿ ಪುಸ್ತಕ, ಬೆಂಗಳೂರು ಮತ್ತು ಜಂಗಮ ಕಲೆಕ್ಟಿವ್, ಬೆಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆದಿದೆ.

ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಚಮರಂ ಸ್ವಾಗತಿಸಿದರು. ರಮೇಶ್ ಗೌಡ ನಾಗಮಂಗಲ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಯಶಂಕರ ಹಲಗೂರು ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೂ ಮೊದಲು ಚಿಂತನ್ ವಿಕಾಸ್ ಮೈಸೂರು ಮತ್ತು ಗೋವಿಂದರಾಜು ಚಾಮನಕೊಪ್ಪಲು ತಂಡಗಳು ಕುವೆಂಪು ಹಾಡುಗಳನ್ನು ಪ್ರಸ್ತುತಪಡಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಕೊಲೆಯಾದ ದಲಿತ ವಿದ್ಯಾರ್ಥಿನಿ ಮನೆಗೆ ಎಸ್ಎಫ್ಐ ನಿಯೋಗ; ಪೋಷಕರ ಭೇಟಿ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಕೊಲೆಗೀಡಾದ ದಲಿತ ವಿದ್ಯಾರ್ಥಿನಿ...

ಸಿಎಂ ಸ್ಥಾನ ಸಿಗುತ್ತೆ ಎಂದರೆ ನಾನು ಕೂಡ ಆರ್‌ಎಸ್‌ಎಸ್‌ ಗೀತೆ ಹಾಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ಆರ್‌ಎಸ್‌ಎಸ್‌ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ...

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

Download Eedina App Android / iOS

X